ಅಳಿದ ಮೇಲೆ ಏನು ? ಈ ಪ್ರಶ್ನೆ ಅನಾದಿ ಕಾಲದಿಂದ ನಮ್ಮನ್ನು ಕಾಡುತ್ತಲೇ ಬಂದಿದೆ. ಸಾಧು ಸಂತರು ಜಪ ತಪಗಳಿಂದ, ಸಾವಿನ ಮರ್ಮವನ್ನು ಭೇದಿಸಲು ಪ್ರಯತ್ನಿಸುತ್ತಲೇ ಬಂದಿದ್ದಾರೆ. ee ಲೇಖನದಲ್ಲಿ ಸತ್ತು ಬದುಕಿದ ಒಬ್ಬ ವಿಶಿಷ್ಟ ವ್ಯಕ್ತಿಯ ಪರಿಚಯವನ್ನು ಮಾಡಿಸುತ್ತೇನೆ.
ಇವರ ಹೆಸರು ಲಾಲ್ ಬಿಹಾರಿ ಎಂದು. ಇವರು ಉತ್ತರಪ್ರದೇಶದ ಒಬ್ಬ ಕೃಷಿಕ. ೧೯೭೬ ಒಂದು ದಿನ ಅವರು crop loan ಗೆ ಅರ್ಜಿ ಹಾಕ್ಲಿಕ್ಕೆ ಹೋದಾಗ, ಅವರಿಗೆ ಒಂದು ವಿಚಿತ್ರ ಸತ್ಯದ ಅರಿವಾಯಿತು. ಸರ್ಕಾರದ ದಾಖಲೆಗಳಲ್ಲಿ ಅವರು ಮೃತರಾಗಿ ಎರಡು ವರ್ಷಗಳಾಗಿದ್ದವಂತೆ. ಅವರ ಚಿಕಪ್ಪ ತಹಸಿಲ್ದಾರರಿಗೆ ಲಂಚ ತಿನ್ನಿಸಿ ಇವರನ್ನು ಮುಗಿಸಿಬಿಟ್ಟಿದ್ದರು. ಅವರ ಜೀವನ ಒಂದು Death Certificate ಇಂದ ಕೊನೆಗೊಂಡಿತ್ತು. ತದನಂತರ ತಬರ ಕಥೆಯಾಯಿತು ಇವರ ಜೀವನ. ತಾನು ಬದುಕಿದ್ದೇನೆ ಎಂದು ಸರ್ಕಾರಕ್ಕೆ ಸಾಬಿತು ಪಡಿಸಲು ಹೆಣಗಾಡಿ ವಿಫಲರಾದರು. ಅಮೇಲೆ ತನ್ನ ತಿಥಿಯನ್ನು ತಾನೇ ಮಾಡಿಸಿ, ತನ್ನ ಹೆಂಡತಿಗೆ ವಿಧವೆ pension ಗೆ ಅಪ್ಲೈ ಮಾಡಿದನು. ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿಯವರ ವಿರುದ್ಧ ಚುನಾವಣೆಗೆ ನಿಂತಿ ತನ್ನ ಸ್ಥಿತಿಯನ್ನು ಮನವರಿಕೆ ಮಾಡಲು ಯತ್ನಿಸಿದನು. ತನ್ನ ಹೆಸರಿಗೆ 'ಮ್ರುತಕ್'' ಎಂಬ ಉಪನಾಮವನ್ನು ಸೇರಿಸಿಕೊಂಡನು. ಆಗ ಅವನಿಗೆ ತನ್ನತೆಯೇ ಸುಮಾರು ನೂರು ಜನ 'ಜೀವಂತ ಶವಗಳು' ಇರುವ ಬಗ್ಗೆ ತಿಳಿಯಿತು. ಅವರಿಗೋಸ್ಕರ ಮೃತಕ ಸಂಘವನ್ನು ಆರಂಭಿಸಿದನು. ೨೦೦೪ರ ಹೊತ್ತಿಗೆ ಈ ಸಂಘದಲ್ಲಿ ಸುಮಾರು ಇಪ್ಪತ್ತು ಸಾವಿರ ಸದಸ್ಯರಿದ್ದರು. ಉತ್ತರಪ್ರದೇಶ, ಬಿಹಾರ, ಪಂಜಾಬಿನಿಂದಲೂ ಸದಸ್ಯರಿದ್ದರು. ನಾಲ್ಕು ಜನರಿಗೆ ಪುನರ್ಜನ್ಮ ಸಿಗಿಸುವಲ್ಲಿ ಯಶಸ್ವಿಯಾಗಿತ್ತು ಈ ಸಂಘ.
ಪ್ರತಿಷ್ಠಿತ TIME magzine ನವರು ಇವರ ಸಂದರ್ಶನ ಮಾಡಿದರು. ಲಾಲ್ ಬಿಹಾರಿ ಅವರಿಗೆ ಶಾ೦ತಿಗಾಗಿ ೨೦೦೩ರ ಇಗ್ನೋಬೇಲ್ ಪ್ರಶಸ್ತಿ ಲಭಿಸಿತು. ಇಗ್ನೋಬೇಲ್ ಪ್ರಶಸ್ತಿಯನ್ನು ನೊಬೆಲ್ ಪ್ರಶಸ್ತಿಯನ್ನು ವಿಡ೦ಬಿಸುವ ಉದ್ದೇಶದಿ೦ದ ನೀಡಲಾಗುತ್ತದೆ. ಜನರನ್ನು ಮೊದಲು ನಗಿಸಿ ನ೦ತರ ಯೋಚಿಸುವಂತೆ ಮಾಡುವುದು ಇದರ ಮೂಲ ಉದ್ದೇಶ. ಲಾಲ್ ಬಿಹಾರಿ ಅವರ ಪ್ರಶಸ್ತಿ ಪತ್ರದಲ್ಲಿ ಈ ಇವರ ಸಾಧನೆಯನ್ನು ಹೊಗಳುತ್ತ ಈ ರೀತಿ ಹೇಳುತ್ತೆ
ಕೊನೆಯಲ್ಲಿ ಏನ್ ಹೇಳಲಿ, ಭಾರತದಲ್ಲಿ ಎಲ್ಲವು ಸಾಧ್ಯ ಅನ್ನಬಹುದಷ್ಟೇ ! .
'ಉತ್ತರಪ್ರದೇಶದ ಲಾಲ್ ಬಿಹಾರಿಯವರ ತ್ರಿವಳಿ ಸಾಧನೆಗಾಗಿ. ಒ೦ದು. ಸತ್ತ ನ೦ತರವೂ ಸಕ್ರಿಯ ಜೀವನ ನೆದಿಸಿದ್ದಕ್ಕಾಗಿ . ಎರಡು ಎಕಾ೦ಗಿಯಗಿ ಮರಣಾನ೦ತರ ಅಧಿಕಾರಶಾಯಿಯ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ. ಮೂರು. ಸತ್ತವರಿಗೆ ಸ೦ಘ ಕಟ್ಟಿ ಅವರಿಗೆ ಮುಕ್ತಿ ಕೊಡಿಸಲು ಪ್ರಯತ್ನಿಸದಕ್ಕಾಗಿ ಈ ಪ್ರಶಸ್ತಿ.'