ಅಳಿಯದ ಗಝಲ್ ಗಳು
ಕವನ
೧.
ನಾನು ಇರುವಲ್ಲಿಗೆ ನೀನು *ಬಾಗಿ* ಬಾ
ನನಗೆ ಸಮಸ್ಯೆ ಆಗದಂತೆ *ಕಾದಿ* ಬಾ
ನೀನು ಪಲ್ಲವಿಯ ಉಸಿರಿನೆಡೆ ಹೊರಟೆಯೇನು
ನಿನಗೆ ಎಣಿಸಿದಂತೆ ಇಲ್ಲೇ *ಕೇಳಿ* ಬಾ
ಏನು ಗತಿ ಇಲ್ಲದವನೆಂದೆ ಕರೆದೆಯೇನು
ಇವನು ಬದಲಾಗದವನೆಂದು *ಓಡಿ* ಬಾ
ಮತ್ತೆ ಹೆಸರಾದರೆ ಒಲವನ್ನು ತಂದೆಯೇನು
ನಿನಗೆ ಬಯಸಿದ್ದು ಸಿಕ್ಕಿದರೆ *ಹಾರಿ* ಬಾ
ನಾನು ಮೌನವಾದರೆ ಕನಸೊಳಗೆ ಸರಿಯದಿರು
ನನಗೆ ಈಶ ಎದುರಾದರೆ *ಬೀಸಿ* ಬಾ
***
೨.
ಹೊಸನಗುವು ಮುಖದಲ್ಲಿ ಚೆಂದ ಉಳಿವುದೇ ಗೆಳತಿ
ಹಳೆಯದಕೆ ಖುಷಿಯಿದೆಯೆ ರೂಪ ಅಳಿವುದೇ ಗೆಳತಿ
ಸಾಗರದ ಅಲೆಯೊಳಗೆ ಕೋಪ ಏತಕೆ ಇಂದು
ಜೀವನದ ಕನಸೊಳಗೆ ಮನ ಇರುವುದೇ ಗೆಳತಿ
ನನಸಿನೊಳು ಸಾಗದಿರೆ ಬಾಳ ಒಲುಮೆಯು ಬೇಕೆ
ಧನವೆಲ್ಲ ಬರಿದಾಗೆ ಸಾವು ಬರುವುದೇ ಗೆಳತಿ
ಬಾಡಿರುವ ಹೃದಯದೊಳು ಮೋಹ ಕಂಡಿತೇ ಹೇಳು
ನಡುಗುತಿಹ ತನುವಿಂದ ಪ್ರೀತಿ ಸಿಗುವುದೇ ಗೆಳತಿ
ನೊಂದಿರುವ ಆತ್ಮ ಸಖಿಯವಳು ಎಲ್ಲಿಹಳೋ ಈಶಾ
ಕಾರಣವು ಇಲ್ಲದೆಯೇ ಉಸಿರು ನಿಲುವುದೇ ಗೆಳತಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ನಾಣ
ಚಿತ್ರ್