ಅಳಿಯುತ್ತಿರುವ ಸಂತತಿ ಗುಬ್ಬಿಗಳಿಗಾಗಿ ಬೆಂಗಳೂರಿನ ಪ್ರಕೃತಿ ಪ್ರೇಮಿಯ ಉಡುಗೊರೆ
ಅಳಿಯುತ್ತಿರುವ ಸಂತತಿ ಗುಬ್ಬಿಗಳಿಗಾಗಿ ಬೆಂಗಳೂರಿನ ಪ್ರಕೃತಿ ಪ್ರೇಮಿಯ ಉಡುಗೊರೆ
ನಾವೆಲ್ಲಾ ನಮ್ಮ ಜಂಗಮವಾಣಿಯಿಂದಾಗಿಯೋ ಅತಿ ನೇರಳೆ ಕಿರಣಗಳಿಂದಾಗಿಯೋ ಗುಬ್ಬಿಯ ಜಾತಿಯೇ ನಿರ್ನಾಮವಾಯ್ತಲ್ಲ ಅಂತ ಬಾಯಲ್ಲಿ ಮಾತ್ರ ಬೊಗಳುತ್ತಾ ಇರುವಾಗ ಅಲ್ಲೊಬ್ಬರು ಇಲ್ಲೊಬ್ಬರು ನಿಜವಾದ ಪ್ರಕೃತಿ ಪ್ರೇಮಿ ಮಾತಿಲ್ಲದೇ ಕೃತಿಯಲ್ಲಿ ತಾವೇನು ಮಾಡಬಹುದು ಎಂಬುದನ್ನುತೋರಿಸಿಕೊಡುತ್ತಿರುತ್ತಾರೆ.
ಅಂತಹ ಒಂದು ದಂಪತಿಗಳ ವಿಷಯ ನಾನಿಲ್ಲಿ ಹೇಳಲು ಬಯಸುತ್ತೇನೆ.
ಚೆನ್ನೇನ ಹಳ್ಳಿಯ ಶ್ರೀಯುತ ನಾಗರಾಜ ಹೆಬ್ಬಾರ್ ಮತ್ತು ರಾಜೇಶ್ವರಿ ದಂಪತಿ ಗುಬ್ಬಿಗಳಿಗೆಂತಲೇ ಹೊಸದೊಂದು ಮನೆ ನಿರ್ಮಾಣ ಮಾಡಿ ತಮ್ಮ ಮನೆಯಲ್ಲಿಯೇ ಅವುಗಳಿಗೆ ಶಾಶ್ವತ ನೆಲೆ ಕಲ್ಪಿಸಿಕೊಡುವ ವ್ಯವಸ್ಥೆ ಮಾಡಿಟ್ಟಿದ್ದಾರೆ .
ಗುಬ್ಬಿ ದಂಪತಿಗಳು ತಾವು ಬೆಳೆಯುವದಲ್ಲದೇ ತಮ್ಮ ಹೊಸ ನೆಲೆಯಲ್ಲಿ ತಮ್ಮ ಸರೀಕರಿಗೂ ದಾರಿ ತೋರಿಸಿಕೊಟ್ಟಿದ್ದು ಆಗಾಗ್ಗೆ ತಮ್ಮ ಸರಿಕರನ್ನೂ ಕರೆತಂದು ತೋರಿಸುತ್ತಿರುವರಂತೆ. ಬರೇ ಕೆಲಸಕ್ಕೆ ಬಾರದೇ ಬಿಸಾಡುವ ವಸ್ತುಗಳಿಂದಲೇ ಗುಬ್ಬಿಗಳಿಗಾಗಿ ವಿಶೇಷ ಗೂಡು ನಿರ್ಮಾಣ ಮಾಡಿಟ್ಟಿದ್ದು, ಗುಬ್ಬಿಗಳೂ ಅವರ ಈ ಶ್ರಮಕ್ಕೆ ತಮ್ಮ ಸ್ನೇಹ ಪರತೆ ಮೆರೆದು ಅವರ ಔದಾರ್ಯಕ್ಕೆ ತಕ್ಕ ಅಭಿನಂದನೆಗಳನ್ನು ಸ್ವೀಕರಿಸಿವೆ.
ನಾಗರಾಜರ ಧರ್ಮ ಪತ್ನಿ ರಾಜೇಶ್ವರಿಯವರು ಹೇಳುವಂತೆ ಅವುಗಳ ಚಿಲಿಪಿಲಿಯೇ ಇವರಿಗೆ ಬೆಳಗಿನ ಸುಪ್ರಭಾತವಂತೆ. ಬೆಳಗಿನ ೬ ಗಂಟೆಗೆ ಇವರು ಬಾಗಿಲು ತೆರೆಯದಿದ್ದರೆ ಚಿಲಿಪಿಲಿ ಗಲಾಟೆ ಮಾಡುತ್ತ ಕರೆಯುತ್ತವಂತೆ,
ನಿಮಗೆ ಗೊತ್ತಾ, ಅವರು ಹೇಳುತ್ತಾರೆ” ಬೆಳಗಿನ ಏಳು ಗಂಟೆಗೆ ಹೊರಗೆ ಇಟ್ಟಿರುವ ಜಲ ಸಸ್ಯವಿರುವ ಪ್ಲಾ ಸ್ಟಿಕ್ ಜಗ್ ನಲ್ಲೇ ಅವುಗಳ್ ಸ್ನಾನವಂತೆ” ತಮ್ಮ ಸಂಭಂದಿಕರನ್ನೂ ಆಗಾಗ್ಗೆ ಕರೆತಂದು ಇವರಿಗೆಲ್ಲಾ ತೋರಿಸುತ್ತಿರುವವಂತೆ. ತಮ್ಮ ಮನೆಯ ಹೊರಗಡೆ ಇರುವ ಪುಟ್ಟ ಜಾಗದಲ್ಲೆ ಚಿಕ್ಕ ಕೈತೋಟ ಮಾಡಿಕೊಂಡು ಸದಾ ಹಸಿರನ್ನು ಕಾಪಾಡುತ್ತಾ ಬರುತ್ತಿರುವ ಇವರು ತೋಟದಲ್ಲೇ ಪುದಿನ, ಬ್ರಾಹ್ಮಿ, ಲೋಳೆರಸ( ಅಲೋವೆರಾ ) ದಾಸವಾಳ, ಗುಲಾಬಿ ಜಾಜಿ, ಮಲ್ಲಿಗೆ ಸೇವಂತಿಗೆ ಹೀಗೆ ತರಹೇವಾರಿ ಹೂಗಿಡಗಳನ್ನೂ, ಬಸಲೆ, ತೊಂಡೆ, ಹರಿವೆ ಇತ್ಯಾದಿ ತರಕಾರಿಗಳನ್ನೂ ಅಮ್ರತ ಬಳ್ಳಿ , ವೀಳ್ಯದ ಎಲೆ, ಅಡಿಕೆ ಬೆಳೆಯುವ ಕರಿ ಬೇವು ಬಾಳೆ ಹಾಗು ಪಪ್ಪಾಯಿ ಹವ್ಯಾಸ ತಮ್ಮ ಹಳ್ಳಿಯ ಜೀವನವನ್ನು ನೆನೆಯುತ್ತ ಮೆರೆಸುವ ಪ್ರಯತ್ನ ಮಾಡುತ್ತಿದ್ದಾರೆ.
ಮಗ ಕಾಲೇಜಿಗೆ ಹೋಗುತ್ತಾನೆ, ಪತಿ ಕೋಡಿಗೆ ಹಳ್ಳಿ ಜ್ಞಾನಶಕ್ತಿ ಸುಭ್ರಮಣ್ಯ ದೇವಾಲಯದಲ್ಲಿ ಮೆನೇಜರ್, ಇಬ್ಬರೂ ಹೊರ ಹೋದಾಗ ರಾಜೇಶ್ವರಿಯವರಿಗೆ ಈ ಗುಬ್ಬಿ ದಂಪತಿಗಳೇ ಏಕಾಂತದ ಸಂಗಾತಿಗಳು.ಅವುಗಳ ಚಿಲಿಪಿಲಿಯೇ ಅವರಿಗೆ ಪ್ರಾಕ್ರತಿಕ ಮನರಂಜನೆ.
ಐದಾರು ತಿಂಗಳ ಹಿಂದೆ ಕಾಳು ತಿನ್ನಲು ಬಂದ ಗುಬ್ಬಿಯನ್ನು ನೋಡಿದಾಗ ನಾಗರಾಜರವರಿಗೊಂದು ಆಲೋಚನೆ ಬಂತು. ಈ ಗುಬ್ಬಿಗಳ ವಿಶೇಷ ಬಂಗಲೆಯನ್ನು ಕಟ್ಟಿಕೊಟ್ಟು ಅವಕ್ಕೆ ಶಾಶ್ವತವಾಗಿ ತಮ್ಮಲ್ಲೇ ನಿಲ್ಲಿಸಿಕೊಳ್ಳುವ ಯೋಜನೆಯದು. ಮೊದ ಮೊದಲು ಕಾಳು ಮಾತ್ರ ತಿನ್ನಲು ಬರುತ್ತಿದ್ದ ಗುಬ್ಬಿಯೊಂದು ಕೆಲವೇ ದಿನಗಳಲ್ಲಿ ತನ್ನ ಸಂಗಾತಿಯನ್ನೂ ಕರೆದು ಕೊಂಡು ಬಂದು ಶಾಶ್ವತವಾಗಿ ಇಲ್ಲಿ ನೆಲೆಯೂರುವ ಯೋಜನೆಯನ್ನೇ ಕೈಗೆತ್ತಿಕೊಂಡಿತ್ತು.
ನಾಚಿಕೆ ಸ್ವಭಾವದ ಇವುಗಳು ನಮ್ಮನ್ನು ( ಮನುಜರನ್ನು) ಆಶ್ರಯಿಸಿಯೇ ಬದುಕುತ್ತವೆ. ಹಳ್ಳಿಗಳಲ್ಲಿ ಎಲ್ಲಾ ಕಡೆ ಚಿವ್ ಚಿವ್ ಎನ್ನುತ್ತಾ ಕಾಲ ಕಳೆಯುವ ಇವುಗಳು ರೈತರ ಮಿತ್ರ.
ಇಂತವರು ನಮಗೆಲ್ಲರಿಗೂ ಮಾದರಿ. ಇಂತಹ ಪ್ರಕೃತಿ ಪ್ರೇಮಿಗಳಿರುವುದು ಅಳಿವ ಸಂತತಿಗಳಿದೆ ವರದಾನ. ಇಂತಹ ಪ್ರಕೃತಿ ಪ್ರೇಮಿಗಳ ಸಂತತಿಯೂ ಅಳಿಯುತ್ತಿರುವ ಜೀವ ರಾಶಿಗಳೂ ವೃದ್ಧಿಸಲಿ. ನಮ್ಮೆಲ್ಲರ ವತಿಯಿಂದ ಈ ಪ್ರಕೃತಿ ಪ್ರೇಮಿಗಳಿಗೆ ನಮನ.
Comments
ಗುಬ್ಬಿ ಮಿತ್ರ ದಂಪತಿಗೆ
In reply to ಗುಬ್ಬಿ ಮಿತ್ರ ದಂಪತಿಗೆ by kavinagaraj
ಕವಿಯವರೇ ನಿಮ್ಮ ಮೆಚ್ಚುಗೆ ಗುಬ್ಬಿ
ಗುಬ್ಬಿಗಳಿಗೆ ಆಶ್ರಯ ನೀಡ್ತಾಇರೊ
ಗೋಪಿನಾಥ್ ಅವ್ರೆ, ಸಾಧ್ಯವಾದ್ರೆ..
ಗೂಡಿನ ನಿರ್ಮಾಣದ ಬಗ್ಗೆ ತಿಳಿಸಿ..
In reply to ಗುಬ್ಬಿಗಳಿಗೆ ಆಶ್ರಯ ನೀಡ್ತಾಇರೊ by vidyakumargv
ವಿದ್ಯಾ ರವರೇ