ಅಳೆ

ಅಳೆ

ಬರಹ

ಅಳೆ (ಕ್ರಿಯಾಪದ)=ಮರಿಮಾಣ ಮಾಡು, ಅಳತೆ ಮಾಡು
ಭಾವನಾಮಗಳು ಅಳತೆ, ಅಳವು
ಉದಾಹರಣೆಗೆ:- ಯಾವುದಕ್ಕೂ ಒಂದು ಅಳತೆ ಬೇಡವೇ?
ಭೀಮನಾರ್ಪಿಂಗಳವುಂಟೇ? ಇಲ್ಲಿ ಅಳವು=ಮಿತಿ (ಮಿತಿ ಕೂಡ ಮೂಲತಃ ಸಂಸ್ಕೃತದ ಮಾ=ಅಳೆ ಇದಱ ಭಾವನಾಮ)

ಹೇರಳವು/ಹೇರಳ= ಹಿರಿದಾದ+ಅಳವು. ದೊಡ್ಡದಾದ ಅಳತೆ. ಹಾಗಾಗಿ ಪುಷ್ಕಳ, ಸಮೃದ್ಧ

ಅಳೆ(ನಾಮಪದ)=ಮಜ್ಜಿಗೆ. ಹೋಲಿಸಿ ತಮಿೞಿನ ಅಳೈ ಮತ್ತು ತುಳುವಿನ ಅಲೆ ಮಜ್ಜಿಗೆ ಎಂಬ ಅರ್ಥದಲ್ಲಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet