ಅವಕಾಶವಾದಿ ಅಮೆರಿಕಾ
"ಭಾರತ ತನ್ನ ಎಲ್ಲಾ ಪರಮಾಣು ಕಾರ್ಯಕ್ರಮಗಳನ್ನೂ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ(ಐ ಎ ಇ ಎ)ಸುರಕ್ಷಿತಾ ಕ್ರಮಗಳಿಗೆ ಒಳಪಡಿಸಬೇಕು"
ಎಂದು ಅಮೆರಿಕಾ ಅಧ್ಯಕ್ಷ ಜಾರ್ಜ್ ಬುಶ್ ಹೇಳಿದ್ದಾರೆ.
ಮಾಜಿ ಪ್ರಧಾನಿ ಎ ಬಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಕಾಲದಿಂದಲೂ ಪರಮಾಣು ಒಪ್ಪಂದದ ಮಾತುಗಳು ಕೇಳಿ ಬರುತ್ತಿದೆ.
ಕಳೆದ ವರ್ಷ ಜೂನ್ ನಲ್ಲಿ ಪ್ರಧಾನಿ ಮನಮೊಹನ್ ಸಿಂಘ್ ಮತ್ತು ಬುಷ್ ನಡುವೆ ಪ್ರಸ್ತಾಪವಾಗಿದ್ದ ಪರಮಾಣು
ಒಪ್ಪಂದದ ಮಾತುಗಳು ಇಂದು ಅಮೆರಿಕಾದ ಈ ಷರತ್ತಿನಿಂದ ಯೋಚಿಸುವಂತೆ ಮಾಡಿದೆ.
ಅಮೆರಿಕಾ ಪ್ರತಿಯೊಂದು ದೇಶದ ಮೇಲೂ ತನ್ನ ಹಿಡಿತವನ್ನು ಸಾಧಿಸಲು ಯತ್ನಿಸುತ್ತಿದೆ.ಕೆಲವು ವಿಷಯಗಳಲ್ಲಿ ಹಿಡಿತವನ್ನು ಈಗಾಗಲೇ ಸಾಧಿಸಿದೆ.
ಅಮೆರಿಕಾದ ಈ ಷರತ್ತನ್ನು ಭಾರತ ಒಪ್ಪಿಕೊಂಡರೆ ತನ್ನ ಶಕ್ತಿಯ,ಸ್ಥೈರ್ಯದ ಮೂಲಸ್ಥಾನವೊಂದನ್ನು ಅಂತರಾಷ್ಟ್ರೀಯವಾಗಿ ತೆರೆದಿಟ್ಟಂತಾಗುತ್ತದೆ.
ಇದು ಭಾರತದಂತಹ ದೇಶಕ್ಕೆ ಪ್ರಸ್ತುತವೆನಿಸುವುದಿಲ್ಲ.
ಬುಷ್ ಅವರ ಈ ಷರತ್ತು ಅಮೇರಿಕಾದ ಅವಕಾಶವಾದಿತನವನ್ನು ತೋರುತ್ತಿದೆ. ಅಫ್ಗಾನಿಸ್ತಾನ ವನ್ನು ಸದೆಬಡಿದು ಪೂರ್ತಿಯಾಗಿ ತನ್ನವಶಕ್ಕೆ ತೆಗೆದುಕೊಳ್ಲಲು
ಲಾಡೆನ್ ನ ಮೀರಿದ ಬಲವಾದ ಉದ್ದೇಶಗಳಿದ್ದರೂ ನಮಗೆ ಅದು ಅಸ್ಪಷ್ಟ.
ಒಟ್ಟಿನಲ್ಲಿ ನಮ್ಮನ್ನು ನಾವು ಇಷ್ಟರಮಟ್ಟಿಗೆ ತೆರೆದುಕೊಳ್ಳುವುದು ದೇಶದ ರಕ್ಷಣೆಯ ದೃಷ್ಟಿಯಿಂದ ಸೂಕ್ತವಲ್ಲ.