ಅವನಿವನುವನ್

ಅವನಿವನುವನ್

ಬರಹ

ಕನ್ನಡದಲ್ಲಿ ಎಲ್ಲರಿಗೂ ಗೊತ್ತಿರುವಂತೆ ಅವನು, ಇವನು, ಆ(ಯಾ)ವನು ಮಾತ್ರ ಎಲ್ಲರಿಗೂ ಗೊತ್ತಿರಬಹುದು. ಆದರೆ ಉವನು, ಉವಳು, ಉದು, ಊ, ಊತ, ಊಕೆ, ಉಲ್ಲಿ ಈ ಪದಗಳು ಬಹಳ ಜನರಿಗೆ ಗೊತ್ತಿಲ್ಲ. ’ಅದು’ ಎಂದರೆ ದೂರದಲ್ಲಿರುವ ವಸ್ತುವನ್ನು ಸೂಚಿಸುತ್ತದೆ. ’ಇದು’ ಹತ್ತಿರದಲ್ಲಿರುವ ವಸ್ತುವನ್ನು ಸೂಚಿಸುತ್ತದೆ. ’ಉದು’ ಇವೆರಡರ ನಡುವೆ ಇರುವ ವಸ್ತುವನ್ನು ಸೂಚಿಸುತ್ತದೆ. ’ಇದು’ ಮತ್ತು ’ಉದು’ ಇವುಗಳ ನಡುವಿನ ದೂರ ’ಅದು’ ಮತ್ತು ’ಇದು’ ಗಳ ನಡುವಿನ ದೂರಕ್ಕಿಂತ ಕಡಿಮೆಯಾಗಿರಬೇಕು. ಅಂದರೆ ’ಉದು’ ಸೂಚಿಸುವ ವಸ್ತು ’ಇದು’ ಮತ್ತು ’ಅದು’ ಸೂಚಿಸುವ ವಸ್ತುಗಳ ನಡುವೆಯೇ ಇರಬೇಕು. ಹಾಗೆಂದರೆ ’ಇದು’ , ’ಉದು’ ಮತ್ತು ’ಅದು’ ಒಂದೇ ದಿಕ್ಕಿನಲ್ಲಿರಬೇಕು. ಇದೇ ಕಲ್ಪನೆ ಇವನು, ಉವನು, ಅವನು, ಇವಳು, ಉವಳು, ಅವಳು, ಇಲ್ಲಿ, ಅಲ್ಲಿ, ಉಲ್ಲಿ ಮುಂತಾದುವುಗಳಿಗೆ ಅನ್ವಯಿಸುತ್ತದೆ. ’ಅಂದು’ ತೀರಾ ಹೞೆಯದು. ’ಉಂದು’ ಸ್ವಲ್ಪ ಇತ್ತೀಚಿನದು. ’ಇಂದು’ ತೀರಾ ಹೊಸತು.
ಇದರ ಬಗ್ಗೆ ಸಂಶಯ ಅಥವಾ ಹೆಚ್ಚಿನ ಮಾಹಿತಿ ತಿಳಿಸಲು kannadamaga@gmail.com ಗೆ ಪತ್ರ ಕಳುಹಿಸಿ.