ಅವನು ಯಾರು ?
ಕವನ
ಅವನು ಯಾರು ?
ನಿಮ್ಮ ಮನದ ಮನೆಯಲ್ಲಿರುವವನು
ನೆನಪಿನ ನೆಪವಾಗಿ ಬರುವವನು
ಮಾತಿನಲಿ ಮಾನವ ಗೆದ್ದವನು
ಸ್ಪರ್ಶದಲಿ ರಂಗೋಲಿ ಬಿಡಿಸಿದವನು
ಪ್ರೀತಿಸಿ ಹೃದಯ ಕದ್ದವನು
ಅವನು ಯಾರು ?
ದು:ಖದಲಿ ರೆಪ್ಪೆಯಾಗಿ ನೆನೆದವನು
ಕತ್ತಲಲಿ ಬೆಳಕಾಗಿ ಬಂದವನು
ಚಿಂತೆಯಲಿ ನಿದ್ದೆಯಾಗಿ ಮಲಗಿಸಿದವನು
ಭಾವನೆಗಳ ಗೋಡೆಗೆ ಬಣ್ಣವಾದವನು
ಅವನು ಯಾರು ?
ಮೌನದಲಿ ನೆನಪಾಗಿ ನಗಿಸಿದವನು
ರಾತ್ರಿಯಲಿ ಕನಸಾಗಿ ಜೊತೆ ಬರುವವನು
ಕನಸಿನಲಿ ಪ್ರೀತಿಯ ಓಲೆ ಬರೆದವನು
ನನ್ನುಸಿರು ನಿಂತಾಗ ನಿಟ್ಟುಸಿರು ಬಿಟ್ಟವನು
ಅವನು ಯಾರು ?
ನಿಮ್ಮ ಮನದ ಮನೆಯಲ್ಲಿರುವವನು
Comments
ಉ: ಅವನು ಯಾರು ?
In reply to ಉ: ಅವನು ಯಾರು ? by Saranga
ಉ: ಅವನು ಯಾರು ?
ಉ: ಅವನು ಯಾರು ?
In reply to ಉ: ಅವನು ಯಾರು ? by saraswathichandrasmo
ಉ: ಅವನು ಯಾರು ?