ಅವನು ಹೋಗಲಿ...
ಕವನ
ಹೋಗುತ್ತೇನೆ ಎಂದವನನ್ನು ಬಿಟ್ಟುಬಿಡಿ ಅವನು ಹೋಗಲಿ
ಉಳಿಯುತ್ತೇನೆ ಹೇಳಿದವನನ್ನು ಕಟ್ಟಿಬಿಡಿ ಅವನು ಹೋಗಲಿ
ಜೀವನದಲ್ಲೂ ಮಸಣದ ದಾರಿ ತುಳಿದವರಿಲ್ಲವೆ
ಮಣ್ಣಿನ ಒಳಗೂ ಹೊರಗು ಒಟ್ಟಿಬಿಡಿ ಅವನು ಹೋಗಲಿ
ಕೈಹಿಡಿದು ಎಳೆದು ಕುಳ್ಳಿರಿಸಿದವರು ಇಹರೇ ಇಲ್ಲಿ
ತಮಗಾಗುವರ ಜೊತೆಗೆ ಇಟ್ಟುಬಿಡಿ ಅವನು ಹೋಗಲಿ
ಯಾತ್ರೆಯ ನಡುವೆಯೇ ಎದ್ದುಹೋಗುವವರಿಲ್ಲವೆ
ಬದುಕಿನ ಸಂಘರ್ಷಗಳ ಕೊಟ್ಟುಬಿಡಿ ಅವನು ಹೋಗಲಿ
ಈಶನ ದಯೆಯಿಂದ ಜೀವ ಕೊನರಿತು ಹೇಳುವವರೇಯಿಲ್ಲಿ
ಪ್ರತಿಯೊಂದು ಪಾಠವನ್ನೂ ಉಟ್ಟುಬಿಡಿ ಅವನು ಹೋಗಲಿ
-ಹಾ ಮ ಸತೀಶ
ಚಿತ್ರ್