ಅವರೇ ನನ್ನ ಶಿಕ್ಷಕರು!
ಕವನ
ಅಮ್ಮನ ಗುಣದವರು
ಪ್ರೀತಿಯಲ್ಲಿ ಶ್ರೇಷ್ಠರು
ಮಕ್ಕಳ ಜೊತೆ ಮಕ್ಕಳಾಗಿ ಬೆರತವರು
ಅವರೇ ನನ್ನ ಶಿಕ್ಷಕರು!
ಈ ಜಗದಲ್ಲಿ ತಲೆಯೆತ್ತಿ ನಡೆಯಲು ಕಳಿಸಿ
ಅಜ್ಞಾನವ ಹೊಡೆದೋಡಿಸಿ
ಜ್ಞಾನದ ಬೀಜ ಬಿತ್ತಿದವರು
ಅವರೇ ನನ್ನ ಶಿಕ್ಷಕರು!
ನನ್ನ ಜೀವನದ ಬೆಳಕಾಗಿ
ಪ್ರತಿನಿತ್ಯ ಪೂಜಿಸುವ ದೇವರ ಸ್ವರೂಪವಾಗಿ
ಕಣ್ಣಿಗೆ ಕಾಣುವ ದೇವರಾದವರು
ಅವರೇ ನನ್ನ ಶಿಕ್ಷಕರು!
ತಾಯಿಯಂತೆ ಪ್ರೀತಿಸುತ್ತಾ
ತಂದೆಯಂತೆ ಘರ್ಜಿಸುತ್ತಾ
ನನ್ನಲ್ಲಿ ಕನಸು ಕಾಣುವ ಹುಮ್ಮಸ್ಸನ್ನು ಹೆಚ್ಚಿಸುತ್ತಾ ಇರುವವರೇ
ಅವರೇ ನನ್ನ ಶಿಕ್ಷಕರು!
ನನ್ನ ಅಹಂಕಾರವನ್ನು ಹೊಡೆದೋಡಿಸಿ
ನಾನು ಮಾಡಿದ ತಪ್ಪನ್ನು ಸರಿಪಡಿಸಿ
ನನ್ನಲ್ಲಿ ಸದ್ಗುಣಗಳನ್ನು ರೂಪಿಸಿದವರು
ಅವರೇ ನನ್ನ ಶಿಕ್ಷಕರು!
-ಶಿವಾನಂದ ಜಂಬಗಿ, ಅಥಣಿ