ಅವಲಕ್ಕಿ ಇಡ್ಲಿ

ಅವಲಕ್ಕಿ ಇಡ್ಲಿ

ಬೇಕಿರುವ ಸಾಮಗ್ರಿ

ದಪ್ಪ ಅವಲಕ್ಕಿ - ಮುಕ್ಕಾಲು ಕಪ್, ಅಕ್ಕಿ ರವೆ - ೨ ಕಪ್, ಮೊಸರು - ೨ ಕಪ್, ತೆಂಗಿನತುರಿ - ಅರ್ಧ ಕಪ್, ಹಸಿ ಮೆಣಸಿನಕಾಯಿ - ೬, ಶುಂಠಿ - ೧ ಇಂಚು, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೨ ಚಮಚ, ಕತ್ತರಿಸಿದ ಪುದೀನಾ ಸೊಪ್ಪು - ೨ ಚಮಚ, ಕಾಳು ಮೆಣಸಿನ ಹುಡಿ - ಅರ್ಧ ಚಮಚ, ಜೀರಿಗೆ ಹುಡಿ - ಮುಕ್ಕಾಲು ಚಮಚ, ಎಣ್ಣೆ - ಕಾಲು ಕಪ್, ಸಾಸಿವೆ - ೧ ಚಮಚ, ಅರಸಿನ ಹುಡಿ - ಅರ್ಧ ಚಮಚ, ಕಡಲೆಬೇಳೆ - ೧ ಚಮಚ, ಉದ್ದಿನ ಬೇಳೆ - ೧ ಚಮಚ, ಇಂಗು - ಕಾಲು ಚಮಚ, ಕ್ಯಾರೆಟ್ ತುರಿ - ೨ ಚಮಚ, ತುಪ್ಪದಲ್ಲಿ ಹುರಿದ ಗೋಡಂಬಿ - ೮-೧೦, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಅಕ್ಕಿ ರವೆ, ಅವಲಕ್ಕಿಗಳನ್ನು ಪ್ರತ್ಯೇಕವಾಗಿ ಒಂದು ಗಂಟೆ ನೆನೆಸಿ ನೀರು ಬಸಿಯಿರಿ. ಬಸಿದ ಅವಲಕ್ಕಿಗೆ ಹಸಿಮೆಣಸಿನ ಕಾಯಿ, ಶುಂಠಿ ಸೇರಿಸಿ ತರಿತರಿಯಾಗಿ ಅರೆದು, ಬದಿಗಿಸಿರಿದ ಅಕ್ಕಿ ರವೆ, ಕಾಳು ಮೆಣಸಿನ ಹುಡಿ, ಜೀರಿಗೆ ಹುಡಿ ಮತ್ತು ಇಡ್ಲಿ ಮಿಶ್ರಣದ ಹದಕ್ಕೆ ಮೊಸರು ಬೆರೆಸಿ, ಕಲಕಿ ೨-೩ ಗಂಟೆ ಹುದುಗಲು ಇಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಅರಸಿನ, ಕಡಲೆ ಬೇಳೆ, ಉದ್ದಿನ ಬೇಳೆಗಳ ಒಗ್ಗರಣೆ ಮಾಡಿ. ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಉಪ್ಪು ಸೇರಿಸಿ, ಚೆನ್ನಾಗಿ ಕಲಕಿ. ಎಣ್ಣೆ ಸವರಿದ ಇಡ್ಲಿ ತಟ್ಟೆಗೆ ಹಿಟ್ಟು ಹಾಕಿ ಉಗಿಯಲ್ಲಿ ಬೇಯಿಸಿ, ಕ್ಯಾರೆಟ್ ತುರಿ, ಗೋಡಂಬಿಯಿಂದ ಅಲಂಕರಿಸಿ. ಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಿರಿ.