ಅವಲಕ್ಕಿ ಬರ್ಫಿ

ಅವಲಕ್ಕಿ ಬರ್ಫಿ

ಬೇಕಿರುವ ಸಾಮಗ್ರಿ

ಅವಲಕ್ಕಿ-1 ಬಟ್ಟಲು, ಬೆಲ್ಲ-1 ಬಟ್ಟಲು, ಹಾಲು ಅಥವಾ ಕಾಯಿಹಾಲು-2 ಬಟ್ಟಲು, ತುಪ್ಪ-4 ಚಮಚ, ಏಲಕ್ಕಿ ಪುಡಿ-ಚಿಟಿಕೆ, ಬಾದಾಮಿ, ಗೋಡಂಬಿ ತುಂಡುಗಳು ಮತ್ತು ದ್ರಾಕ್ಷಿ

ತಯಾರಿಸುವ ವಿಧಾನ

ಅವಲಕ್ಕಿಯನ್ನು ಸಣ್ಣಗೆ ಪುಡಿ ಮಾಡಿಕೊಳ್ಳಿ. ಬಾಣಲೆಗೆ ಹಾಲು, ಬೆಲ್ಲದ ಪುಡಿ ಹಾಕಿ ನಂತರ ಅವಲಕ್ಕಿ ಪುಡಿ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಐದು ನಿಮಿಷಕ್ಕೆ ಗಟ್ಟಿಯಾಗುತ್ತದೆ ನಂತರ ತುಪ್ಪ, ಏಲಕ್ಕಿ ಪುಡಿ, ಬಾದಾಮಿ, ಗೋಡಂಬಿ ತುಂಡುಗಳನ್ನು ಹಾಕಿ ಮತ್ತೆ ಐದು ನಿಮಿಷ ಬೇಯಿಸಿ ಗಟ್ಟಿಯಾಗಿ ತಳ ಬಿಟ್ಟಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ.

-ವೀಣಾ ಶಂಕರ್