ಅವಳಿಗೆ…

Submitted by Santosh M Hegde on Tue, 10/22/2019 - 00:29
ಬರಹ

ಕಾರಣವ ಕೇಳದಿರು ನೀನೇಕೆ ನನಗೆ ಹತ್ತಿರ

ನಾನಿನ್ನ ದೂರದ ಗೆಳೆಯನಾಗಿದ್ದರೂ…

ಕೆಲವೊಂದು ಬಂಧಗಳ ದೂರಮಾಡಲಾರೆ

ನನ್ನ ಬಗ್ಗೆ ನಿನಗೆ ತಾತ್ಸಾರವಿರಬಹುದು

ಎಂದೆನಿಸಿದ್ದರೂ...

ತಪ್ಪಿರಬಹುದೇನೋ ತಿಳಿದಿಲ್ಲ,ಕೆಲವೊಮ್ಮೆ 

ಅನಿಸಿದ್ದೆಲ್ಲವ ಹೇಳಿಬಿಟ್ಟಿದ್ದೆ, ಕೆಲವೊಮ್ಮೆ

ಹೇಳಬೇಕಿರುವುದನ್ನು ಹಾಗೇ ಉಳಿಸಿಕೊಂಡಿದ್ದೆ…

ಗೆಳೆತನವ ಬಯಸಿದ್ದ ನನ್ನಲ್ಲಿ 

ನನಗ್ಯಾವ ತಪ್ಪೂ ಕಂಡಿಲ್ಲ, ಎಂದೂ

ವಿಜ್ಞಾಪನೆಯಷ್ಟೇ ನಿನ್ನಲ್ಲಿ, ಈ ಮೂಕ

ಮುಗ್ದತೆಯ ಮೂರ್ಖ ಸಂವೇದನೆಗಳ 

ಸಾಧ್ಯವಾದರೆ ಸಹಿಸು ಎಂದೂ…

ನಿನಗೆ ನಾನೊಬ್ಬ ಸಾಮಾನ್ಯ ಗೆಳೆಯನಿರಬಹುದು, 

ಆದರೆ ನಾ ಹಚ್ಚಿಕೊಂಡವರಲ್ಲಿ

ನಿನಗೊಂದು ವಿಶೇಷ ಸ್ಥಾನವಿದೆ…

ನಾ ಹೇಳುವುದು ಇನ್ನೂ ಇರಬಹುದು

ಆದರೆ ಪದಗಳೇಕೋ ಬರಿದಾಗಿದೆ…

ಮುಗಿಸುತಿರುವೆ ಈ ಸಾಲುಗಳನ್ನ ಇಲ್ಲಿಗೇ,

ಅರ್ಥವಾಗಿದ್ದರೆ…

ಪ್ರತಿಬಾರಿಯಂತೆ 'ಚೆನ್ನಾಗಿದೆ' ಎಂಬುದು ಬಿಟ್ಟು,

ಇನ್ನೇನಾದರೂ ಹೇಳಿಬಿಡು…

ಅರ್ಥವಾಗಿರದಿದ್ದರೆ,

ಈ ಪದಗಳ ಹುಚ್ಚಾಟವನ್ನೊಮ್ಮೆ 

ನೋಡಿ ನೀನೊಬ್ಳೇ ನಕ್ಕುಬಿಡು…

***********************************