ಅವಳಿಲ್ಲವೋ ಜೊತೆಗೆ......
ಅಲೆಯೋ ಅಲೆ ಹೃದಯದ ಒಳಗೆ
ಕುಸಿಯುತ್ತಿದೆ ಕನಸಿನ ಆ ಮಳಿಗೆ
ಮುಳುಗಿಹೋಗದೆ ದಡ ಸೇರಿಸಲು
ಇಂದು ಅವಳಿಲ್ಲವೋ ಜೊತೆಗೆ
ಕಣ್ಣಿರ ಹನಿ ಹನಿಯಲ್ಲೂ ಅವಳದೇ ಛಾಯೆ
ಮರೆವೆನೆಂದರು ಮರೆಯಾಗದ ಆ ಮಾಯೆ
ಬರಿದಾಗಿರೋ ಮುಂಜಾನೆಗೆ ಬಣ್ಣ ಬಳೆಯಲು
ಇಂದು ಅವಳಿಲ್ಲವೋ ಜೊತೆಗೆ
ಬಿಳಿ ಹಾಳೆಯಂತಿದ್ದ ಈ ಹೃದಯದಿ
ಅವಳು ಗೀಚಿದ ಆ ಎರಡಕ್ಷರದ ಪದ
ಅನಾಥವಾಗಿ ಬಿಕ್ಕಿ ಬಿಕ್ಕಿ ಅಳುತಿರೆ
ಇಂದು ಅವಳಿಲ್ಲವೋ ಜೊತೆಗೆ
ಶಭ್ದಗಳಲ್ಲಿ ಹಿಡಿದಿಡಲಾಗದವಳು
ಕುಂಚದ ಬಣ್ಣದಿ ಚಿತ್ರಿಸಲಾಗದವಳು
ನಿನಗೂ ಅವಳೇ ಬೇಕಿತ್ತೇನೋ ಅದಕೆ
ಇಂದು ಅವಳಿಲ್ಲವೋ ಜೊತೆಗೆ
ಮತ್ತೆ ಗುಡುಗುಡಿಯ ಸೇದುತ್ತಲಿರುವೆ
ಮತ್ತೆ ಮದಿರೆಯ ಮೊರೆ ಹೊಕ್ಕಿರುವೆ
ಹಾಳಾಗುವೆ ನೀ ಎಂದು ಮನಸಾರೆ ಜರಿಯಲು
ದೇವಾ ಇಂದು ಅವಳಿಲ್ಲವೋ ಜೊತೆಗೆ
ಜಗದಲ್ಲೆಲ್ಲಡೇ ಕತ್ತಲೆ ಇದ್ದರೂ
ನನ್ನೋಡಲಲ್ಲಿ ಅವಳ ಬೆಳಕಿರುತ್ತಿತ್ತು
ಜಗಕೆ ಇಂದು ದೀಪಾವಳಿ,ನನ್ನೊಡಲು ಮತ್ತೆ ಖಾಲಿ
ದೀಪ ಹಚ್ಚಲು ಇಂದು ಅವಳಿಲ್ಲವೋ ಜೊತೆಗೆ
ಬರಿದಾಗಿದೆ ಬಡವಾಗಿದೆ ಮಸುಕಾಗಿದೆ ಮಬ್ಬಾಗಿದೆ
ಮಂಕಾಗಿದೆ ಡೊಂಕಾಗಿದೆ ಮಾತಾಡದೆ ಮೂಕಾಗಿದೆ
ಅವಳ ನೆನಪಲಿ ಮನವು ಅತ್ತು ಕೊರಗಿದೆ ಸತ್ತೋಗಿದೆ
ಚುಕ್ಕಿಯಾಗಿ ಮೇಲಿರುವ ಅವಳು ಇಂದು ಜೋತೆಗಿಲ್ಲವೋ.............
...ಪ್ರವೀಣ್.ಎಸ್.ಕುಲಕರ್ಣಿ(ಚುಕ್ಕಿ)
Comments
ಉ: ಅವಳಿಲ್ಲವೋ ಜೊತೆಗೆ......
In reply to ಉ: ಅವಳಿಲ್ಲವೋ ಜೊತೆಗೆ...... by roopasagar
ಉ: ಅವಳಿಲ್ಲವೋ ಜೊತೆಗೆ......