ಅವಳು ಸಿಕ್ಕಾಗ ಎಲ್ಲ ಅಷ್ಟಕಷ್ಟೇ...
ಅವತ್ತು ರಾತ್ರಿ. ಹಾಗಂತ ಮಧ್ಯ ರಾತ್ರಿ ಅನ್ಕೋಬೇಡಿ. ಅದು 8 PM. ಎರಡು ಪೆಗ್ ಇಳಿಸಿ ಸ್ವರ್ಗಕ್ಕೆ ಮೊದಲ ಸ್ಟಪ್ ಇಡೋ ವೇಳೆ. ಆದ್ರೆ, ಅವತ್ತು ಕುಡಿಯೋ ಮನಸ್ಸು ಇರಲಿಲ್ಲ. ಕುಡಿದು ತೂರಾಡೋ ಇರಾದೇನೂ ಬಂದಿರಲಿಲ್ಲ.
ಮನೆಗೆ ಕಡೆಗೆ ಬರುವ ದಾವಂತ. ಬಸ್ ಹತ್ತಿದೆ. ಅದು ಫುಲ್ ಟೈಟ್. ಆರಾಮ ಆಗಿ ಸಾಗುತ್ತಿತ್ತು. ಇದರ ಓಟಕ್ಕೆ ಏನೋ. ಮಳೆ ಸುರಿಯಲು ಆರಂಭಿಸಿತು. ಜಡಿ ಮಳೆಯೋ...ಬಾಪ್ ಕಟ್ ಮಳೆನೋ. ನನಗೆ ಇನ್ನು ಅರ್ಥವಾಗಿಲ್ಲ. ಸುರಿಯುತ್ತಲೇ ಇತ್ತು...
ಆ ಹೊತ್ತಿಗೆ ನಾ ಇಳಿಯೊ ಬಸ್ ಸ್ಟಾಪ್ ಬಂದು ಬಿಡ್ತು. ಇಳಿದು ಬಿಟ್ಟೆ. ಆಗ ನನಗೆ ಅಲ್ಲೊಂದು `ಸುಂದರ ಆಶ್ಚರ್ಯ'. ಆಕೆ ಯಾರು..? ಗೊತ್ತಿಲ್ಲ. ಒಂದು ಸಣ್ಣ ಕಲ್ಪನೆ ಕೂಡ ಇಲ್ಲ. ತಟ್ಟನೆ ಕಣ್ಣಿಗೆ ಬಿದ್ದಳು. ಅಪರೂಪದ ಸುಂದರಿನಾ..? ದೇವರಾಣೆ ತಿಳಿದಿಲ್ಲ. ಮಳೆ ಹನಿಗೆ ಆಕೆ ಮಿಂದು ಹೋಗಿದ್ದಳು. ಚಂದನೆಯ ಮೊಗದ ಮೇಲೆ ಮಳೆ ಹನಿಗಳ ಹನಿಗವನ...
ಇಷ್ಟೇನೆ. ನಾನು ಮುಂದೆ ಸಾಗಿದಾಗ ಅವಳು ಮರೆತೆ ಹೋದಳು. ನನ್ನ ಜೀನ್ಸು ಪ್ಯಾಂಟು ಮಳೆಯ ನೀರಿಗೆ ತೊಯುತ್ತಿತ್ತು. ಸರಿ..!!! ಮೇಲಕ್ಕೆ ಮಡಿಚಿಕೊಂಡರೆ ಸೂಕ್ತ ಅಂತಲೇ ಆಗ ರಸ್ತೆ ಮಧ್ಯೆ ನಿಂತು, ಕಳೆಗೆ ಬಾಗಿ ಪ್ಯಾಂಟ್ ಮೇಲಕ್ಕೆ ಮಡಚಿಕೊಂಡೆ. ಅಷ್ಟೆ..!!!
ಆಗ ಒಮ್ಮೆ ಹಿಂದಕ್ಕೂ ತಿರುಗಿದ್ದೇ. ಅಲ್ಲೂ ಒಂದು ಹೊಸ ಖುಷಿ. ನೀಲಿ ಬಣ್ಣದ ಟೀ ಶರ್ಟ್ ನ ಹುಡುಗಿ ಅವಳು. ಕಾಲುಗಳಿಗೆ ಅಂಟಿಕೊಂಡ ಜೀನ್ಸು. ಹಾಗೆ ಬಂದಳು ನನ್ನ ಬಳಿ. ಕರ್ಮಕ್ಕೆ ಬಹುಬೇಗ ನನನ್ನೂ ದಾಟಿ ಸಾಗಿಯೇ ಬಿಟ್ಟಳು. ನನ್ನಲ್ಲಿ ಛತ್ರಿ ಇರಲಿಲ್ಲ. ಅವಳನ್ನ ಪುಟ್ಟ ಛತ್ರ ರಕ್ಷಿಸುತಿತ್ತು. ಅವಳು ಮುಂದೆ..ನಾನು ಅವಳ ಹಿಂದೆ..ಹಿಂದೆ. ಪ್ರತಿ ಹೆಜ್ಜೆಗೂ ಆ ಹುಡಿಗಯ ಸೌಂದರ್ಯ ಅನಾವರಣ. ತಪ್ಪು ತಿಳಿಬೇಡಿ. ಇದು ನಾಚಿ ನಡಿಯೋ ಥರದ ವಾಕಿಂಗ್ ಸ್ಟೈಲ್..
ಮೇಲೆ ಮಳೆ ಹನಿ. ಛತ್ರಿ ಕೆಳಗೆ ಸಾಗುತ್ತಿದ್ದ ಅವಳು. ಹಿಂದೇನೆ ಸಾಗೀತ್ತು ನಮ್ಮ ಆರಾಧನೆ. ಅವಳು ಬಹುತೇಕ ನಮ್ಮ ಮನೆ ಹತ್ತಿರವೇ ಬಂದಳು. ಆದ್ರೂ ಅವಳ ಮುಖ ದರ್ಶನ ಆಗಲೇ ಇಲ್ಲ. ಕಾರಣ ಇಷ್ಟೆ. ಅವಳು ನನಗಿಂತಲೂ ಮೊದಲು ತನ್ನ ಮನೆ ಸೇರಿದಳು. ಅಷ್ಟೆ..!!!
ಬೆನ್ನುಡಿಯನ್ನಷ್ಟೇ ಪರಿಚಯಿಸಿದ ಆ ಹುಡುಗಿನ ಹಿಂದೇನೆ `ಡ್ರಾಪ್" ಮಾಡಿದ ಬಳಿಕ, ಒಂದು ಬ್ಯೂಟಿಫುಲ್ ಜೋಡಿಯ ದರುಶನವಾಯಿತು. ಅವರು ತುಂಬಾ ಪ್ರೀತಿಸೊ ದಂಪತಿಯಂತೆ ಕಂಡ್ರು. ಮಳೆ ಬರುತ್ತಲೇ ಇದೆ. ಒಂದು ಕೈಯಲ್ಲಿ ಛತ್ರಿ. ಇನ್ನೊಂದು ಕೈಯಲ್ಲಿ ಬ್ಯಾಗ್. ಪಕಕ್ಕೆ ಮಡದಿ. ಆ ಹೆಣ್ಮಗಳಿಗೆ ಗಂಡನ ಜೇಬಿನಿಂದ ದುಡ್ಡು ತೆಗೆದುಕೊಳ್ಳುವ ಅವಶ್ಯಕತೆ. ಈ ವ್ಯಕ್ತಿಗೆ ಬೇಗ ತೆಗೆದುಕೊಂಡು ಬಿಡು ಎಂದು ಹೇಳೊ ಆತುರ. ಅಷ್ಟೆ. ಅವರು ಯಾರು.? ಮಳೆಯಲ್ಲಿ ನನಗೆ ಏಕೆ ಎದುರಾದ್ರು. ಎಲ್ಲವೂ ಅಷ್ಟಕಷ್ಟೆ..!!!
ತಕ್ಷಣವೇ ಮನಸ್ಸಿನ ಮೂಡ್ ಅದಲು-ಬದಲು. ಮನೆ ಬಂತು. ನಾನು ಪ್ರೀತಿಸಿದ ನನ್ನ ಹುಡುಗಿ ನೆನಪಾದಳು...ಮುಂದೆ ಎಲ್ಲವೂ ಅಷ್ಟೇ..!!
-ರೇವನ್ ಪಿ.ಜೇವೂರ್
Comments
ಉ: ಅವಳು ಸಿಕ್ಕಾಗ ಎಲ್ಲ ಅಷ್ಟಕಷ್ಟೇ...