ಅವಳೆ ಇವಳು

ಅವಳೆ ಇವಳು

ಕವನ

ಅವಳೆ ಇವಳು ಇವಳೆ ಅವಳು

ನನ್ನ ಮೋಹ ರಾಗಿಣಿ

ಒಲುಮೆ ಬಲುಮೆ ಚಿಲುಮೆಯರಳೆ

ಚೆಲುವ ಪಡೆದ ಮೋಹಿನಿ 

 

ಅಂತರಂತರಂಗದೊಳಗೆ 

ಮೀಟಿ ಪ್ರೇಮ ಹೂ ನಗೆ

ಬಂತು ಮನಕೆ ವೇಣುಗಾನ 

ಚಿತ್ತದೊಳಗೆ ಸವಿಬಗೆ

 

ರೂಪವರಳಿ ತನುವು ಹೊರಳಿ 

ತೀರ ಸೇರಿ ನಲಿಯಿತು 

ಬಾಳ ಪಯಣದೊಳಗೆ ಭಾವ

ವಿಶ್ವರೂಪ ತಳೆಯಿತು

 

ಎಂಥಯೆಂಥ ಪ್ರೀತಿಯೆಂಥ 

ತಾರೆಯಂತೆ ಮಿನುಗಿದೆ

ಬೆಸುಗೆಯೊಳಗೆ ಹೊಸತು ಜೀವ

ಪೂರ್ಣ ರೂಪ ಪಡೆದಿದೆ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್