ಅವಳೇನಾದಳೋ

ಅವಳೇನಾದಳೋ

ಕವನ

 

ನೂರಾರುವರುಸ ಹರುಸದಿಂದಿರುವಳು

ಹಣ್ಣಣ್ಣು ಮುದುಕಿ, ಚಿರಯುವಕಿ ಭಾಗೀರಥಿ

ಆ ಪಾರ್ಕಿನ ಮೂಲೆ ಮರದಲ್ಲವಳ ವಾಸ

ಕಾಣುವಳು ಕತ್ತಲೆಯ ರಾತ್ರಿಯಲಿ

ಎಲೆಗಳ ಸರ ಸರ ಸದ್ದಿನಲಿ,

ಮಿಂಚುಳಗಳ ಪಕ ಪಕ ಬೆಳಕಿನಲಿ

 

ಯಾರೊ ಬಂದರು

ಎನೊ ಎಂದರು

ಬೆಳಗುವ ಸೊರ್ಯನ 

ಬೆಳಂಬೆಳಗಲಿ

ಕಾಣಲು ಹೊದರೆ

ಕಾಣದ ಕೈಗಳ ಮಾಯದ  ಮಾಯಕೆ, ಅವಳೇನಾದಳೊ