ಅವಳೇ ಇಲ್ಲದಾ ಇರುಳಿನಲ್ಲಿ

ಅವಳೇ ಇಲ್ಲದಾ ಇರುಳಿನಲ್ಲಿ

ಬರಹ

ಅವಳೇ ಇಲ್ಲದಾ ಇರುಳಿನಲ್ಲಿ
ಸೊಗಸು ಏಕೋ ಕಾಣದು
ಅವಳ ಕಾಣದ ಕಣ್ಣುಗಳಿಗೆ
ನಿದಿರೆ ಏಕೋ ಬಾರದು

ಆವ ಹಾಡೂ ಇಂಪು ತರದು
ಅವಳು ಬಳಿಯೆ ಸುಳಿಯದಿರಲು
ಆವ ನುಡಿಯು ಮನವ ಗೆಲದು
ಅವಳ ನುಡಿಯ ಕೇಳದಿರಲು

ಆವ ಗುರಿಯು ಗರಿಯೆನಿಸದು
ಅವಳು ಜೊತೆಗೆ ನಡೆಯದಿರಲು
ಆವ ಪರಿಯ ನಾನು ಅರಿಯೆ
ಅವಳ ಮತ್ತೆ ಹಿಂಪಡೆಯಲು

ಅವಳೇ ಇಲ್ಲದಾ ದಾರಿಯಲ್ಲಿ
ಪಯಣ ಮುಂದೆ ಸಾಗದು
ಅವಳೇ ಇಲ್ಲದಾ ಬದುಕಿನಲ್ಲಿ
ಕನಸು ಏಕೋ ಕೊನರದು
--ಜಯಪ್ರಕಾಶ ನೇ ಶಿವಕವಿ