ಅವಳ‌ ಕಣ್ಣುಗಳವು...

ಅವಳ‌ ಕಣ್ಣುಗಳವು...

ಕವನ

ಕಮಲದ‌ ದಳಗಳವು.

ರವಿಯ ಸರಸಕೆ ಅರಳಿ

ಸರೋವರದಲ್ಲಿ ಶುಭ್ರವಾಗಿ

ಶೋಭಿಸುವ‌ ತಾವರೆಯ‌ ಎಸಳುಗಳವು.

 

ತು0ಟನೋಟದಲ್ಲೊ0ದು ಸೆಳೆತ

ಗ0ಭೀರವಾದರೂ ಸ್ಮಿತ ದ್ರಷ್ಟಿ

ಹಿತವಾದ‌ ಆಲಾಪ‌

ಹಿಡಿದಿಟ್ಟುಕೊಳ್ಳಲಾರದಷ್ಟು 

 ಚುರುಕು ಚೆಲುವು

ಕಮಲದ‌ ದಳಗಳವು.

 

ಪೂರ್ಣಿಮೆಯ‌ ಚ0ದ್ರನ0ತೆ ಸೊಗಸಾದ‌

ಮಲ್ಲಿಗೆಯ‌ ಮ್ರಿದುವ0ತೆ ತೋರುವ‌

ನನ್ನ‌ ಸೆಳೆಯಲ್ಲೆ0ದೇ ಸ್ರಷ್ಟಿಯಾದ

ತಾವರೆಯ‌ ಎಸಳುಗಳವು, ಅಲ್ಲಲ್ಲ

ಅವಳ‌ ಕಣ್ಣುಗಳವು....