ಅಶ್ರು ತರ್ಪಣ
ಬರಹ
ಅಶ್ರುತರ್ಪಣ:
ಭಯೋತ್ಪಾದಕರ ಗುಂಡಿಗೆ ಬಲಿಯಾದ ಮುಂಬೈ ಪೋಲೀಸರಿಗೆ,
ಅಮಾಯಕರಿಗೆ.
ಇಲ್ಲಿತನಕ ೧೦೧ ಜನರ ಬಲಿ
೩೦೦ ಜನರಿಗೆ ಗಾಯ; ಬದುಕುಳಿಯುವವರೆಷ್ಟೋ, ಬಲಿಯಾಗುವವರೆಷ್ಟೋ;
ಏನೀ ಹುಚ್ಚಾಟ?
ಯಾರ ಸಿಟ್ಟಿಗೆ ಯಾರ ಬಲಿ?
ಇನ್ನಾದರೂ ಎಚ್ಚರ! ಎಚ್ಚರ! ಎಚ್ಚರ!!
ದೇಶದ ಉಳಿವಿಗಾಗಿ ಸಂಪದಿಕರ ಕೊಡುಗೆ ಏನು?
- ಹುಚ್ಚಾಟದ ಲೇಖನ ಬೇಡ
- ಭಯೋತ್ಪಾದನೆ ಯಾರು ಮಾಡಿದರೂ ದೇಶಕ್ಕೆ ಹಾನಿಯೇ, ಬಲಿಯಾಗುವವರು ಸಾಮಾನ್ಯವಾಗಿ ಅಮಾಯಕರು.
- ರಾಜಕೀಯ ಪಕ್ಷಗಳು ಇದರ ದುರ್ಲಾಭ ಪಡೆಯುವಂತಾಗ ಬಾರದು
- ರಾಜಕಾರಣ ಮರೆತು ನಿಜವಾದ ರಾಷ್ಟ್ರಭಕ್ತರೆಲ್ಲಾ ಒಂದಾಗಿ ಭಯೋತ್ಪಾದನೆಗೆ ಪರಿಹಾರ ಕಂಡುಕೊಳ್ಳಲು ಒತ್ತಾಸೆ.
- ಆಡಳಿತ ಪಕ್ಷ,ಪ್ರತಿಪಕ್ಷ ಬೇಧ ಮರೆತು ಒಟ್ಟಾಗಿ ಕುಳಿತು ಚಿಂತಿಸುವ ಕಾಲ ಬಂದಿದೆ.
- ನಾವೆಲ್ಲಾ ಮೊದಲು ಭಾರತೀಯರು,ನಂತರವೂ ಭಾರತೀಯರೇ.
ಹಿಂದು-ಮುಸ್ಲಿಂ-ಕ್ರೈಸ್ತ ಮತಗಳ ಬದಿಗಿಟ್ಟು ಭಾರತ ಮಾತೆಯ ಕಣ್ಣೀರು ಅಳಿಸುವ ಪಣತೊಟ್ಟು||
||ಮಾ ಕಶ್ಚಿತ್ ದು:ಖ ಭಾಗ್ಭವೇತ್||
ಹರಿಹರಪುರಶ್ರೀಧರ್