ಅಶ್ವತ್ಥ ಮರದ ಆರೋಗ್ಯದಾಯಕ ಗುಣಗಳು
ಅಶ್ವತ್ಥ (ಅರಳಿ) ಮರ ಪಂಚವೃಕ್ಷಗಳಲ್ಲಿ ಒಂದು. ಉಪನಯನ, ಚೌಲ, ಮದುವೆ, ಹೋಮಗಳಿಗೆ ಸಮೀಧವಾಗಿ ಬಳಸಲ್ಪಡುವ ಇದು ಔಷಧಿ ಗುಣಗಳನ್ನು ಹೊಂದಿರುವ ವೃಕ್ಷ. ಎಲೆ, ಚಕ್ಕೆ, ಬೇರು, ಹಾಲು, ಕಾಯಿಗಳನ್ನು ಔಷಧಿಯಾಗಿ ಉಪಯೋಗಿಸಬಹುದು.
1) ಇದರ ಚಕ್ಕೆಯ ಕಷಾಯದಲ್ಲಿ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿದರೆ ಉರಿಮೂತ್ರ ಗುಣವಾಗುತ್ತದೆ.
2) ಹಾಲನ್ನು ಕಣ್ಣಿಗೆ ಅಂಜನ ಇಡುವುದರಿಂದ ಕಣ್ಣಿನ ದೋಷ ನಿವಾರಣಿ ಆಗುತ್ತದೆ.
3) ಚಕ್ಕೆಯ ಕಷಾಯ ಅಥವಾ ನೆರಳಿನಲ್ಲಿ ಒಣಗಿಸಿದ ಪುಡಿಯನ್ನು ಬೆಲ್ಲ ಸೇರಿಸಿ ಆಗತಾನೇ ಕರೆದ ದೇಸಿ ಹಸುವಿನ ಹಾಲು ಸೇರಿಸಿ ತೆಗೆದುಕೊಂಡರೆ ಕಾಮಾಲೆ ಗುಣವಾಗುತ್ತದೆ.
4) ಮರದ ಮೇಲಿನ ಹುರುಪೆಯನ್ನು ತುಪ್ಪದ ಜೊತೆಗೆ ಸೇರಿಸಿ ನುಣ್ಣಗೆ ಅರೆದು ಪೇಸ್ಟ್ ಮಾಡಿ ಹಚ್ಚಿದರೆ ಗಾಯದಿಂದ ವಿಷ ರಕ್ತಕ್ಕೆ ಸೇರುವುದಿಲ್ಲ.
5) ಚಕ್ಕೆಯನ್ನು ಬೂದಿ ಮಾಡಿ ಸಮಪ್ರಮಾಣದಲ್ಲಿ ಬೆಣ್ಣೆ ಮತ್ತು ಸುಣ್ಣ ಸೇರಿಸಿ ಮೂಲಾಮು ಮಾಡಿ ಹಚ್ಚಿದರೆ ಚರ್ಮದ ಕಾಯಿಲೆ ಗುಣವಾಗುತ್ತದೆ.
6) ಅರಳಿಯ ಮೃದು ಕಡ್ಡಿಯನ್ನು ಹಲ್ಲು ಉಜ್ಜಲು ಉಪಯೋಗಿಸಿದರೆ ಹಲ್ಲಿನ ರೋಗಗಳು ಗುಣವಾಗುತ್ತದೆ.
7) ಇದರ ಅಂಟಿನ ಪುಡಿಯನ್ನು ಬೆಣ್ಣೆ ಸೇರಿಸಿ ತಿನ್ನುವುದರಿಂದ ನಾಯಿ ಕೆಮ್ಮು ಗುಣವಾಗುತ್ತದೆ.
8) ಇದರ ಚಕ್ಕೆಯ ಭಸ್ಮಕ್ಕೆ ಜೇನುತುಪ್ಪ ಸೇರಿಸಿ ನೆಕ್ಕುತ್ತಿದ್ದರೆ ಬಿಕ್ಕಳಿಕೆ ನಿಲ್ಲುತ್ತದೆ.
9) ನೆರಳಿನಲ್ಲಿ ಒಣಗಿಸಿದ ಬೀಜವನ್ನು ಪುಡಿಮಾಡಿ ದನಿಯಾ ಪುಡಿಯನ್ನೂ ಸೇರಿಸಿ ಬೆಲ್ಲ ಸೇರಿಸಿ ಕಷಾಯವನ್ನು ಮಾಡಿ ಕುಡಿದರೆ ರಕ್ತಾತಿಸಾರ ಗುಣವಾಗುತ್ತದೆ.
10) ಮಲಬದ್ಧತೆಗೆ ಬೀಜದ ಪುಡಿಯನ್ನು ಹಾಲು ಅಥವಾ ನೀರಿನಲ್ಲಿ ಸೇವಿಸಿದರೆ ಗುಣವಾಗುತ್ತದೆ.
11) ಬೀಜವನ್ನು ನೀರುಹಾಕಿ ನೂಣ್ಣಗೆ ಅರೆದು ಬೆಲ್ಲ ಅಥವಾ ಕೆಂಪು ಕಲ್ಲು ಸಕ್ಕರೆ ಸೇರಿಸಿ ಕುಡಿದರೆ ಹೊಟ್ಟೆಯಲ್ಲಿ ಗುಣವಾಗದ ಉರಿ ಗುಣವಾಗುತ್ತದೆ.
12) ಇದರ ಚಕ್ಕೆ ಅಥವಾ ಎಲೆಗಳನ್ನು ಕಷಾಯ ಮಾಡಿ ಹಾಲು ಮತ್ತು ಬೆಲ್ಲ ಸೇರಿಸಿ ಕುಡಿಯುವುದರಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
13) ಇದರ ಹಣ್ಣಿನ ಪೇಸ್ಟ್ ಗೆ ಅಶ್ವಗಂಧ ಪುಡಿ, ತುಪ್ಪ ಮತ್ತು ಕಲ್ಲು ಸಕ್ಕರೆ ಹಾಕಿ ಹಲ್ವಾ ಮಾಡಿ ತಿಂದರೆ ಶಕ್ತಿ ವೃದ್ಧಿಸುತ್ತದೆ. ಇದು ಶುಕ್ರ (ವೀರ್ಯ)ದೋಷ ನೀವಾರಿಸುತ್ತದೆ.
14) ಚಕ್ಕೆಯ ಕಷಾಯವನ್ನು ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ನೀವಾರಣೆಯಾಗುತ್ತದೆ.
15) ತೊಗಟೆ ಅಥವಾ ಎಲೆಯ ಕಷಾಯದಿಂದ ಯೋನಿಸ್ರಾವದಲ್ಲಿ ಇರುವ ತುರಿಕೆ ನಿವಾರಣೆಯಾಗುತ್ತದೆ.
-ಸುಮನಾ ಮಳಲಗದ್ದೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ