ಅಸಾಮಾನತೆ

ಅಸಾಮಾನತೆ

"ನಮಸ್ತೆ , ಏನು ಮೂರು ದಿನ ದಿಂದ ಯಾರಿಗೋ ಹುಷಾರು ಇಲ್ಲ ಅನ್ನಿಸುತ್ತೆ , ಯಾರನ ಅಡ್ಮಿಟ್ ಮಾಡಿದಿರಿ, ನಾನು ಪ್ರಭು ಅಂತ "
"ಹ , ನಾನು ಅಮರ್ ಅಂತ , ಮೊನ್ನೆತಾನೆ ನನಗೆ ಮಗು ಆಯಿತು ಸರ್, ಆದರೆ ಹುಟ್ಟಬೇಕೆಂದರೆ ಏನು ಪ್ರಾಬ್ಲಮ್ ಆಗಿ , ಉಸಿರಾಟ್ಟಕ್ಕೆ ತೊಂದರೆ ಆಗಿದೆ , ಇಂಟೆನ್ಸಿವ್ ಕೇರ್ ನಲ್ಲಿ ಇಟ್ಟಿದಾರೆ , ತುಂಬ ಖರ್ಚು ಬೇರೆ ಆಗುತ ಇದೆ , ಇರಲಿ ಮಗ ಉಳ್ಳಿದ್ದರೆ ಸಾಕು"

"ನಿಮ್ಮಲಿ ಯಾರು ಪ್ರಭು ಅಂದರೆ ಯಾರು ಡಾಕ್ಟರ್ ಕರೀತಾ ಇದ್ದಾರೆ ಬನ್ನಿ " ಅಂತ ನರ್ಸ್ ಕರೆದರೂ

"ನಾನೇ , ಬಂದೆ ಸರ್ , ಏನು ಕೇಳಿಕೊಂಡು ಬರುತೀನಿ"

"ನಮಸ್ತೆ ಡಾಕ್ಟರ್ , ನಾನು ಪ್ರಭು ಅಂತ ಬರೋಕ್ಕೆ ಹೇಳಿದಿರಿ , ಏನು ಹೇಳಿ"

" ನೀವು ರೇಖಾ ಹಸ್ಬೆಂಡ್ , ನೋಡಿ ನಿಮ್ಮ ಮಗು ಹುಟ್ಟ ಬೇಕಾದರೆ , ಗಲೀಜು ನುಂಗಿ , ಉಸಿರು ಆಡೋಕ್ಕೆ ಕಷ್ಟ ಆಗಿದೆ , ನೀವು ಓಕೆ ಅಂದರೆ ಇಂಟೆನ್ಸಿವ್ ಕೇರ್ ಗೆ ಹಾಕುತೀನಿ , ದಿನಕ್ಕೆ ೩೦ ಸಾವಿರ ಆಗುತ್ತೆ , ಬೇಗ ಹೇಳಿ , ಇಲ್ಲ ಅಂದರೆ ಡಿಸ್ಚಾರ್ಜ್ ಮಾಡಿಕೊಂಡು ಪಕ್ಕದಲ್ಲಿ ಇರೋ ಸರ್ಕಾರೀ ಹಾಸ್ಪಿಟಲ್ ಗೆ ಹೋಗಿ , ಹೇಳಿ"

"ಇಲ್ಲ ಡಾಕ್ಟ್ರೇ , ಡಿಸ್ಚಾರ್ಜ್ ಮಾಡಿ , ನನ್ನಗೆ ಅಷ್ಟು ಕಟ್ಟೋಕ್ಕೆ ಆಗೋಲ"

"ಸರಿ , ಸಿಸ್ಟೆರ್ ಇವರ ಮಗ ನ ಡಿಸ್ಚಾರ್ಜ್ ಮಾಡಿ ಕಳಿಸಿ , ರೇಮೈನಿಂಗ್ ಬಿಲ್ ಕ್ಲಿಯರ್ ಮಾಡಿ "
"ಬನ್ನಿ , ಬಿಲ್ ಕೌಂಟರ್ ಗೆ"
"ಎಷ್ಟು ಆಗಿದೆ ಸಿಸ್ಟೆರ್ "
"ಕೌಂಟರ್ ಅಲ್ಲಿ ಕೇಳಿ "

ಪ್ರಭು ಕೌಂಟರ್ ಹತ್ತೀರ ಹೋಗಿ ಬಿಲ್ ಕ್ಲಿಯರ್ ಮಾಡಿಸಿ ಅಳುತ್ತಾ ಬಂದರು. ಇದನ್ನೆ ನೋಡುತ ಇದ ಅಮರ್ ಪ್ರಭು ಹತ್ತೀರ ಬಂದು ಏನು ಆಯಿತು ಅಂತ ಕೇಳಿದರು

"ಏನು ಅಂತ ಹೇಳಲಿ ಸರ್ , ನಿಮ್ಮ ಮಗು ಗೆ ಆಗಿರೋ ಪ್ರಾಬ್ಲಮ್ ನನ್ನ ಮಗು ಗು ಆಗಿದೆ , ಆದರೆ ನನ್ನಗೆ ಇಲ್ಲಿ ಟ್ರೀಟ್ ಮಾಡಿಸೋಕ್ಕೆ ಆಗೋಲ ಅದಕ್ಕೆ ಡಿಸ್ಚಾರ್ಜ್ ಮಾಡಿಸಿಕೊಂಡು ಸರಕಾರಿ ಹಾಸ್ಪಿಟಲ್ ಗೆ ಹೋಗುತ ಇದೀನಿ , ಮತ್ತೆ ಸಿಗೋಣ ಬರುತೀನಿ "

ಮೂರು ದಿನ ಆದ ಮೇಲೆ , ಪಕ್ಕದ್ಲಲಿ ಇದ್ದ ಹಾಸ್ಪಿಟಲ್ ಗೆ ಅಮರ್ ತಿಂಡಿ ತಿನ್ನೋಕ್ಕೆ ಅಂತ ಹೋದರು ,ಅಲ್ಲಿ ಪ್ರಭು ನೋಡಿ , ಹತ್ತೀರ ಬಂದು , " ಹೇಗಿದ್ದೆ ಮಗು " ಅಂತ ಕೇಳಿದರು. ಅದಕ್ಕೆ ಪ್ರಭು , "ಒಹ್ ನೀವಾ ಬನ್ನಿ , ಹೇಗಿದೆ ನಿಮ್ಮ ಮಗು ಹೇಳಿ ಮೊದಲು "

"ನನ್ನ ಮಗು ಹುಷಾರು ಆಯಿತು , ಇವತ್ತು ಡಿಸ್ಚಾರ್ಜ್ , ಮೂರು ದಿನ ಇಂಟೆನ್ಸಿವ್ ಕೇರ್ , ಸುಮಾರು ೧ ಲಕ್ಷ ಆಯಿತು , ಇರಲಿ , ಮಗು ಉಳೀತು ಅಷ್ಟೇ ಸಾಕು , ನಿಮ್ಮ ಮಗು ಹೇಗಿದೆ"
"ಉಳಿಲಿಲ ಸರ್ , ಈಗತಾನೇ ಮಣ್ಣು ಮಾಡಿ ಬರ್ತಾ ಇದೀನಿ , ಇವಾಗ ಹೆಂಡತಿ ಗೆ ಏನು ಹೇಳೋದು ಅಂತ ಯೋಚಿಸುತ್ತ ಇದೀನಿ ಸರ್ "
"ಯಾಕೆ ಏನು ಆಯಿತು , ನಿಮ್ಮ ಸಂಕಟ ಅರ್ಥ ಆಗುತ್ತೆ , ಆದರೆ , ಏನು ಹೇಳಬೇಕು ಗೊತ್ತಿಲ್ಲ "

"ಇಲ್ಲ ಸರ್ , ಡಾಕ್ಟರ್ ನನ್ನಗೆ ಹೇಳಿದು ಒಂದೇ , ಪ್ರೈವೇಟ್ ಹಾಸ್ಪಿಟಲ್ ಗೆ ತೋರಿಸಿ , ಇಲ್ಲಿ ಅಂತ ವ್ಯವಸ್ಥೆ ಇಲ್ಲ , ನಾವು ನಮ್ಮ ಪ್ರಯತ್ನ ಮಾಡುತ್ತೀವಿ , ದೇವರ ಮೇಲೆ ಭಾರ ಹಾಕಿ ಅಂತ "

"ಅಂದರೆ"

"ಮೆಡಿಸಿನ್ ಬೇಕು ಅಂದರೆ ಲಂಚ್ ಕೊಡಬೇಕು , ಇಲ್ಲ ಅಂದರೆ ಏನು ಸಿಗೋಲ್ಲ , ಮಗು ನ ಯಾವುದೊ ರೂಮ್ ನಲ್ಲಿ ಹಾಕಿದರು , ಲಂಚ ಕೊಡೋಕ್ಕೆ ನನ್ನ ಹತ್ತಿರ ಹಣ ಇರಲಿಲ್ಲ "

"ಒಹ್ , ಆಮ್ ವೆರಿ ಸಾರೀ "

ಇದು ನಮ್ಮ ಎಲ್ಲರ ಸಮಸ್ಯೆ ಆಗಿದೆ , ಒಂದು ಕಡೆ ಲಂಚ , ಇನ್ನೊಂದು ಕಡೆ ಬಡವನಿಗೆ ಯಾವ ಸೌಕರ್ಯನು ಇಲ್ಲ , ಈ ಅಸಾಮಾನತೆ ಯಾವಾಗ ದೂರ ಆಗುತ್ತೋ ಗೊತ್ತಿಲ , ಎಲ್ಲರಿಗೆ ಸಮಾನ ಜೀವನ ಸಿಗಬೇಕು ಅಂತ ಆಶಿಸುತ್ತಾ , ನನ್ನ ನೋವಿನ ನಮಸ್ಕಾರಗಳು

ಇಂದ
ಹರೀಶ್ ಯಸ್ ಕೆ