ಅಸ್ಪೃಶ್ಯ

ಅಸ್ಪೃಶ್ಯ

ಕವನ
 
ಭುದ್ದ ಬಸವ
ಅಸ್ಪೃಶ್ಯರಾಗಿದ್ದಾರೆ,
ಕಾವಿ ಸುತ್ತಿದವರೆಲ್ಲ
ಕಾಮಿಗಳಾಗಿದ್ದಾರೆ
 
ಪ್ರಬುತ್ವಕ್ಕೆ ಜಾತಿಯ
ಸುಗ೦ಧ,
ಧರ್ಮಕ್ಕೆ ನೆತ್ತರ
ಸಮರ್ಪಣೆ
 
ಮನೆ ಮನೆಗೆ ಕ್ರೌರ್ಯ
ಬಿತ್ತುವ ಬಣ್ಣದ ಡಬ್ಬಿ,
ಕಾವ್ಯಕ್ಕೆ ಹಣದ
ವ್ಯಾಮೋಹ
 
ಜಗದೊಡಲಲಿ ಅಣು ವಿಕಿರಣ
ರಕ್ತ ಬೀಜಾಸುರನ ಅವಾಹನೆ,
ಜ್ಞಾನ-ವಿಜ್ಞಾನ, ಮಾರಾಟದ
ಮಾಯದ ತಕ್ಕಡಿಯ ತೆಕ್ಕೆಗೆ
 
ಸಮತೋಲನ
ತಪ್ಪಿದ
ಸಮಾಜ,
ಪ್ರಕೃತಿ! 
 
ನಿಮ್ಮಿಪ್ಪಮ್ಮ೦ದಿರಿ೦ದಲೆ
ನಿಮ್ಮ ಬಾಲ್ಯದ ಕಗ್ಗೊಲೆ,
ಅಯ್ಯೋ ಮುದ್ದಿನ ಮಕ್ಕಳೇ
ಈ ಕಸ ತೊಲಗಿಸುವ ಹೊಣೆ,ನಿಮ್ಮ ಹೊಣೆ
 
ಭೂಮಿ, ಈ ಜಲ
ಈ ಸಕಲ ಸ೦ಪತ್ತು 
ಈ ಮನೆ ನನ್ನದು
ಆದರೂ, ನಮ್ಮವರಿ೦ದಲೇ
ನನ್ನಿ೦ದಲೇ ಅಸ್ಪೃಶ್ಯ
 
 

 

 

Comments