ಅಹಲ್ಯೆಯ ಸ್ವಗತ..
ಬರಹ
ಕತ್ತಲ ಬದುಕಿನ
ಸುತ್ತಲೂ ಹಾರುವ
ಬೆಳಕಿನ ಹಕ್ಕಿಗಳು
ಮಾನ ಕಳೆಯುತ್ತವೆ
ಕತ್ತಲಿನಲ್ಲಿ ಎಣ್ಣೆಯನ್ನು
ಸೆಳೆಯುತ್ತಾ ನಗುವ
ದೀಪದ ಕುಡಿಗಳು
ನನ್ನದೆ ಬಟ್ಟೆಯ ಚೂರುಗಳಿಂದ
ನನ್ನೆದೆಯನ್ನು ಸುಡುತ್ತವೆ
ಆಗೆಲ್ಲಾ ವ್ಯರ್ಥವಾಗುತ್ತಿದ್ದ
ಕಣ್ಣೀರಿನ ಹನಿಗಳೆ ಈಗ
ಬೆಂಕಿಯಾರಿಸಿ ಕತ್ತಲಾಗಿಸುತ್ತವೆ
ಕೆಂಡ ಸುಂಯ್ಯ್ ಎನ್ನುತ್ತಾ
ಇದ್ದಿಲಾಗುತ್ತದೆ
ನಾನು ಕೂತಲ್ಲೆ
ತಣ್ಣಗಾಗುತ್ತೇನೆ,
ಮಂಜುಗಡ್ಡೆಯ
ಕಲ್ಲಾಗುತ್ತೇನೆ
ಕೊನರುವ ಆಸೆಯೊಂದಿಗೆ
ಕೊರಡಾಗುತ್ತೇನೆ
ಬೆಳಕ ಹರಡುವ ಸೂರ್ಯ
ಸುಡತೊಡಗುತ್ತಾನೆ...
(ಇದು ನನ್ನ ಬ್ಲಾಗ್ನಲ್ಲಿ ಈಗಾಗಲೆ ಪ್ರಕಟಗೊಂಡಿದೆ)