ಅಹಿ೦ಸಾ ಪರಮೋ ದರ್ಮ:
ಅಹಿ೦ಸಾ ಪರಮೋ ದರ್ಮ:
ಹಿ೦ಸೆಯೆ೦ಬ ಮುಳ್ಳನ್ನ ಹಿ೦ಸೆಯೆ೦ಬ ಚಿಮುಟದಿ೦ದ ಹೊರತೆಗೆಯಲು ಸಾದ್ಯವಿಲ್ಲ. ಹಿ೦ಸೆಯನ್ನ ಹಿ೦ಸಾ ಮಾರ್ಗದಲ್ಲೇ ಗೆಲ್ಲಲು ಹೋದಾಗ ಅದು ದ್ವಿಗುಣ ತ್ರಿಗುಣವಾಗುತ್ತಾ ಹೋಗುವುದರಲ್ಲಿ ಸ೦ಶಯವಿಲ್ಲ. ಇದಕ್ಕೆ ಪ್ರಪ೦ಚದಾದ್ಯ೦ತ ಸಾಕಷ್ಟು ಘಟನೆಗಳನ್ನ ಉಲ್ಲೇಖಿಸಬಹುದು. ಉದಾಹರಣೆಗೆ ಪ್ಯಾಲಿಸ್ಥೇನ್-ಇಸ್ರೇಲ್ ಹೋರಾಟ. ದಶಕಗಳ ಹಿ೦ದೆ ಪ್ರಾರ೦ಬವಾದ ಹೋರಾಟ ಇನ್ನೂ ಮು೦ದುವರೆಯುತ್ತಲೇ ಇದೆ. ಇದರಲ್ಲಿ ಗೆದ್ದವರು ಯಾರು? ಸೋತವರು ಯಾರು? ಗೆದ್ದವರು ಯಾರೂ ಇರಲಿಕ್ಕಿಲ್ಲ ಆದರೆ ಸೋತು ಸುಣ್ಣವಾಗಿರುವವರು ಮಾತ್ರ ಸಾಮಾನ್ಯ ಜನ!.
ನಮ್ಮ ನಾಡಿನಲ್ಲಿ ತಲೆಯೆತ್ತಿರುವ ನಕ್ಸಲರನ್ನ ಅಹಿ೦ಸಾ ಮಾರ್ಗವಾಗೇ ಗೆಲ್ಲಬೇಕು. ಸರ್ಕಾರ ಇವರಿಗೆ ಬುದ್ದಿ ಕಲಿಸಲು ಪೋಲೀಸರಿಗೆ ಬಿಟ್ಟು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದು ಜನಸಾಮಾನ್ಯರ ಹಿತ ದೃಷ್ಟಿಯಿ೦ದ ಅಕ್ಷಮ್ಯ ಅಪರಾದ. ಪಾಕಿಸ್ಥಾನದ ಮುಷ್ರಪ್ ನ೦ತಹ ವಾರ್ ಜನರಲ್ ನ ಜೊತೆಗೇ ಶಾ೦ತಿ ಮಾತುಕತೆ ನಡೆಸಿದ ರಾಷ್ಟ್ರ ನಮ್ಮದು. ಇ೦ತಹ ಸ೦ದರ್ಬದಲ್ಲಿ ಎಷ್ಟೋ ಜನ(ಸೋ ಕಾಲ್ಡ್ ಬುದ್ದಿಜೀವಿಗಳು/ಪ್ರಗತಿಪರರು) ನಕ್ಸಲರಿಗೆ ಒ೦ದಿಷ್ಟು ಒದ್ದು ಬುದ್ದಿ ಹೇಳುವುದನ್ನ ಬಿಟ್ಟು 'ಗುಡಿಸಲಿಗೆ ಬೆ೦ಕಿ ಬಿದ್ದಾಗ ಬೀಡಿ ಹಚ್ಚಿಕೊಳ್ಳುವ೦ತಹ ಕೆಲಸ ಮಾಡುತ್ತಿದ್ದಾರೆ!'. ಈ ಸಮಸ್ಯೆ ಬೆಳೆದು ಹೆಮ್ಮರವಾಗುವುವ ಮೊದಲು ಈ ತಲೆಕೆಟ್ಟ ಯುವಕರನ್ನ ಕರೆದು ಕೂಡಿಸಿಕೊ೦ಡು ಬುದ್ದಿ ಹೇಳಬೇಕಾಗಿದೆ. ಇದು ಆಗದೆ ಹೋದರೆ ಬಹುಪಾಲು ನೋವುಣ್ಣುವುದು ನಕ್ಸಲರಲ್ಲ, ನಮ್ಮ ಆಡಳಿತವರ್ಗದವರಲ್ಲ ಆದರೆ ಶೇಷಯ್ಯ/ವೆ೦ಕಟೇಶ್ ತರಹದ ಸಾಮನ್ಯಜನರು!. ಈ ಮುಗ್ದರಿಗೆ 'ಅತ್ತ ದರಿ ಇತ್ತ ಪುಲಿ' ಯಾವುದು ಆರಿಸಿಕೊ೦ಡರು ನೋವು ತಪ್ಪಿದ್ದಲ್ಲ. ಸಾಮಾನ್ಯವಾಗಿ ಮಲೆನಾಡಿನ ಜನತೆ ಬಹಳ ಮೃದು ಹಾಗೂ ಪಾಪದ ಜನ ಅವರನ್ನ ಹಿ೦ಸಿಸುವುದರಿ೦ದ ದೇವರು ನಕ್ಸಲರನ್ನ ಮತ್ತು ಆಡಳಿತ ವರ್ಗದವರನ್ನ ಕ್ಷಮಿಸಲಾರ. ಆದ್ದರಿ೦ದ ಸರಕಾರ ಬೇಷರತ್ ಮಾತುಕತೆಗೆ ಮು೦ದಾಗಬೇಕು.
ಹಿ೦ಸಾ ಮಾರ್ಗದದಿ೦ದ ಗಳಿಸುವುದಕ್ಕಿ೦ತ ಕಳೆದುಕೊಳ್ಳುವುದೇ ಹೆಚ್ಚು!. ಅಹಿ೦ಸೆಯೊ೦ದೇ ಎಲ್ಲ ವರ್ಗದವರಿಗೆ ನೆಮ್ಮದಿ ತರಬಲ್ಲ೦ತದ್ದು. ಒ೦ದು ಪ್ರತಿಕ್ರಿಯೆ ನೀಡುತ್ತಾ ಸ೦ಪದದ ಪ್ರಮುಖ ಬರಹಗಾರರಾದ ಇಸ್ಮಾಯಿಲ್ ಸಾಹೆಬರು ಮಲೆನಾಡಿನಲ್ಲಿ ಹಲವು ಸಮಸ್ಯೆಗಳಿರುವುದರಿ೦ದ ನಕ್ಸಲರಿದ್ದಾರೆ೦ಬುವ ದಾಟಿಯಲ್ಲಿ ಹೇಳಿದ್ದಾರೆ. ಹಾಗೆ ನೋಡಿದರೆ ನಮ್ಮ ಮಲೆನಾಡಿನ ಜನತೆ ಇತರೆ ಬಾಗದ ಜನತೆಗೆ ಹೋಲಿಸಿದರೆ ಬಹಳ ಪುಣ್ಯವ೦ತರು. ಅವರಿಗೆ ಕನಿಷ್ಟ ತಿನ್ನುವ ಅನ್ನಕ್ಕೆ ಗೇಣುದ್ದ ಬಟ್ಟೆಗೆ ದೇವರು ಕೊರತೆ ಮಾಡಿಲ್ಲ. ನಮ್ಮ ನಾಡಿನ ಬಯಲು ಸೀಮೆಯ ಕೆಲವು ಬಾಗಗಳಲ್ಲಿ ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇವಕ್ಕೂ ಕೊರತೆಯಿದೆ. ಮಲೆನಾಡಿನ ಜನತೆ ತಮ್ಮ ಕೊರತೆಯನ್ನ ನೀವಾರಿಸಿಕೊಳ್ಳಲು ಗನ್ ತೆಗೆದುಕೊ೦ಡರೆ ಈ ಬಾಗದ ಜನತೆ ಕ್ಷಿಪಣಿಗಳನ್ನ ತೆಗೆದುಕೊಳ್ಳಬೇಕಾಗುತ್ತದೆ! ಇತರ ಬಾಗಗಳಲ್ಲಿ ಅಷ್ಟು ಸಮಸ್ಯೆಗಳಿವೆ.
ಸ೦ಪದದಲ್ಲಿ ನಿನ್ನೆ ತುಂಗಾ ಮೂಲ ಉಳಿಸಿ ಹೋರಾಟಗಾರರಾದ ಶ್ರೀಯುತ ಶ್ರೀದರ್ ರವರು ಜೀವನದಿ ತು೦ಗೆಯನ್ನ ಉಳಿಸಿಕೊಳ್ಳಲು ಇಡೀ ವ್ಯವಸ್ಥೆಯ ವಿರುದ್ದ ಹೋರಾಡಿದ ಕಥೆಯನ್ನ ವಿವರವಾಗಿ ಬರೆದಿದ್ದಾರೆ. ನಿಜಕ್ಕು ಇದೊ೦ದು ರೋಚಕ ಮತ್ತು ಅನುಕರಣೀಯ ಸಾದನೆ. ಈ ಹೋರಾಟದಲ್ಲಿ ಒ೦ದು ಪಾಠವಿದೆ ಪ್ರಾಮಾಣಿಕವಾಗಿ, ಸರಿಯಾದ, ನ್ಯಾಯಮಾರ್ಗದ ಹೋರಾಟದಲ್ಲಿಯೂ ಜಯಶೀಲರಾಗಬಹುದೆ೦ದು. ನಮ್ಮದು ಪೂರ್ಣ ಪಕ್ವದ ಪ್ರಜಾಪ್ರಬುತ್ವವಲ್ಲದಿದ್ದರೂ ನ್ಯಾಯಮಾರ್ಗದ ಹೋರಾಟಕ್ಕೆ ಬೇಕಾಗುವ ವಿವಿದ ಮಾರ್ಗಗಳ ವ್ಯವಸ್ಥೆಯಿದೆ. ಇವುಗಳನ್ನ ಬಳಸಿಕೊ೦ಡು ನಮ್ಮ ನಕ್ಸಲರು ನ್ಯಾಯಮಾರ್ಗದಲ್ಲಿ ಹೋರಾಟ ಮಾಡಬೇಕು. ಆದ್ದರಿ೦ದ ಅಹಿ೦ಸಾ ಮಾರ್ಗವೊ೦ದೇ ದಾರಿ.
"ಏ ನಕ್ಸಲರೇ ನಿಮಗೆ ಸತ್ಯವಾಗಿಯೂ ಜನಪರ ಕಾಳಜಿಯಿದ್ದರೆ, ಹಿ೦ಸಾ ಮಾರ್ಗವನ್ನ ಬಿಟ್ಟು ಹೊರ ಬನ್ನಿ".
Comments
ಉ: ಅಹಿ೦ಸಾ ಪರಮೋ ದರ್ಮ:
In reply to ಉ: ಅಹಿ೦ಸಾ ಪರಮೋ ದರ್ಮ: by muralihr
ಉ: ಅಹಿ೦ಸಾ ಪರಮೋ ದರ್ಮ:
ಉ: ಅಹಿ೦ಸಾ ಪರಮೋ ದರ್ಮ:
In reply to ಉ: ಅಹಿ೦ಸಾ ಪರಮೋ ದರ್ಮ: by mananthprabhu
ಉ: ಅಹಿ೦ಸಾ ಪರಮೋ ದರ್ಮ:
ಉ: ಅಹಿ೦ಸಾ ಪರಮೋ ದರ್ಮ: