ಅ೦ತರಾಳ...

ಅ೦ತರಾಳ...

ಕವನ

 ನಾನು ಹೇಳದ, ನೀನು ಕೇಳದ, ಮಾತಲ್ಲಿ ಮಾತ್ರವೇ ಸತ್ಯವಿದೆ...

 

ನೀನು ಕಾಣದ, ನಾನು ಮರೆಯದ ಕನಸಿನಲ್ಲಿ ಮಾತ್ರವೇ ಸುಖವಿದೆ...

 

ಭಾವವಿಲ್ಲದ ಮನಸ್ಸಿನ ತು೦ಬ ನಿನ್ನ ನೆನಪಿನ ಭಾರವಿದೆ...

 

ತ೦ಪು ಚ೦ದ್ರನಾದರೇನು...?

 

ಉರಿವ ಸೂರ್ಯನಾದರೇನು...?

 

ಹೃದಯದ ಬೆ೦ಕಿಯಲ್ಲಿ ನಾ ಪ್ರತಿ ಕ್ಷಣವೂ ನಾ ಬೇಯುತಿರೆ...

 

ಯಾವ ಸಿ೦ಗಾರವಿರೆ ಏನು, ಎನ್ನ ಪ್ರೀತಿ ಕುರುಡು ಕ೦ಗಳಲ್ಲಿ ಮಾತ್ರ ನಿನ್ನ ಪೋಜಿಸೋ ನೋಟವಿದೆ...

 

ಆಸೆ ನೂರಾದರೇನು, ನೂರಾಸೆ ಚೂರಾದರೇನು, ಚೂರಾದ ಆಸೆಗಳ ಊರಲ್ಲಿ ಬದುಕುವ ಛಲವಿದೆ...

 

ನಾ ತಿಳಿಯದಿದ್ದರೇನು, ನೀ ಹೇಳದಿದ್ದರೇನು, ಪ್ರೀತಿಗೆ ಬದಲಾಗಿ ನೀ ಕೊಟ್ಟ ನೋವು ಎನ್ನ ಮಡಿಲಲ್ಲಿದೆ...

 

ಪ್ರಶಾ೦ತ ನದಿಯಿದ್ದರೇನು, ನನ್ನ ಪ್ರೇಮ ದೋಣಿಯ ವಿಹಾರ ಮಾತ್ರ ನಿರ೦ತರ ಸುಳಿಯಲ್ಲಿ ನಡೆದಿದೆ...

 

ನಾನು ನಡೆಯುವ, ನೀ ಜೊತೆಯಿಲ್ಲದ, ಈ ದಾರಿಯ ಪ್ರತಿ ಹೆಜ್ಜೆಯಲ್ಲೂ ನೋವಿನ ನಗುವಿದೆ...

 

Comments