ಆಂಡ್ರಾಯ್ಡ್ ನಲ್ಲಿ ಕನ್ನಡ ಮತ್ತು ಹಿಂದಿ ಅಕ್ಷರ ಸುಡೊಕು
ಸುಡೊಕು ಮೂಲತಃ ಒಂದು ತಾರ್ಕಿಕ ಒಗಟು ಆಟ. ವಾಸ್ತವವಾಗಿ ಈ ಒಗಟು ಸಮಾಧಾನ ಮಾಡಲು ಯಾವುದೇ ಅಂಕಗಣಿತದ ಅಗತ್ಯವಿರುವುದಿಲ್ಲ. ಕೇವಲ ನಿರ್ಣಯ ಮತ್ತು ತರ್ಕದಿಂದ ಸುಲಭವಾಗಿ ಆಡಬಹುದು.ಇಲ್ಲಿ ಆಯ್ಕೆ ಮಾಡಿದ ಕೆಲವು ಶಬ್ದಗಳನ್ನು ಅವಗಳ ಮೂಲರೂಪದಿಂದ ಅಲ್ಪ ಸ್ವಲ್ಪ ಬದಲಾವಣೆ ಮಾಡಲಾಗಿದೆ, ಇದು ಕೇವಲ ಎಲ್ಲ ೯ ಅಕ್ಷರಗಳು ವಿಭಿನ್ನ ವಾಗಿ ಕಾಣಲು ಮಾತ್ರ.
ವೈಶಿಷ್ಟ್ಯಗಳು
- ವಿಶಿಷ್ಟ ರೀತಿಯ ಸುಡೊಕು . ಅರ್ಥಪೂರ್ಣವಾಗಿರುವ ಪದಗಳು ಮತ್ತು ಅವಗಳ ಅಕ್ಷರಗಳು.
- ಆಯ್ಕೆಗೆ 15 ವಿಭಿನ್ನ ಪದಗಳು .
- ಪ್ರತಿ ಬಾರಿ ಪದ ಆಯ್ಕೆಗೆ ಹೊಸ ಒಗಟು ಮತ್ತೇ ಅನಂತ ಒಗಟುಗಳು.
- ಸಂಖ್ಯೆಗಳ ಬದಲಾಗಿ ಅಕ್ಷರಗಳು.
- ಸುಲಭವಾದ ಕೀ ಬೋರ್ಡ್
- ನಿಮ್ಮ ಸುಡೋಕು ನೀವೇ ಸ್ರಷ್ಟಿಸಿ
- ಟೈಪ್ ಮಾಡಿದ ಅಕ್ಷರದ ಎಲ್ಲ ಸೆಲ್ ಗಳಲ್ಲಿ ಹುಡುಕಿ ತೋರಿಸುವುದು.
- ಸುಡೋಕು ನಿಯಮಗಳು ಇಲ್ಲಿ ಅನ್ವಯವಾಗುತ್ತವೆ
- ಆಟದಲ್ಲಿ ಸಹಾಯ ಮಾಡಲು ಅಕ್ಷರ ಹಾಗೂ ಅಡ್ಡಸಾಲು ಸುಳಿವು ನೀಡಲಾಗಿದೆ.
- ನಿಮ್ಮ ಸಮಾಧಾನ ಪರಿಶೀಲಿಸಿ, ಸರಿ ಇದೆ ಎಂದು ನೋಡಬಹುದು.
ನಿಮಗೆ ಗೊತ್ತೇ ? ೯* ೯ ಸುಡೊಕೋ ಗೆ ಸುಮಾರು 6,670,903,752,021,072,936,960 ರೀತಿಯಲ್ಲಿ ಸಮಾಧಾನ ಮಾಡಬಹುದು. ನೀವು ಎಷ್ಟು ಸಮಾಧಾನ ಕಂಡು ಹಿಡಿಯುತ್ತಿರಿ ಎಂದು ಪ್ರಯತ್ನಿಸಿ. ಒಂದು ರೀತಿಯಲ್ಲಿ ಇದು ಬುದ್ದಿವಂತರ ಆಟ ಎನ್ನಬಹುದು. ನೀವೆಷ್ಟು ಬುದ್ಧಿವಂತರು ಎಂದು ಪರೀಕ್ಷಿಸಿ ;)
ಕನ್ನಡ ಸುಡೊಕು
https://play.google.com/store/apps/details?id=com.nimblevision.kannadaak...
ಹಿಂದಿ ಸುಡೊಕು
https://play.google.com/store/apps/details?id=com.nimblevision.hindiaksh...
Comments
ಉ: ಆಂಡ್ರಾಯ್ಡ್ ನಲ್ಲಿ ಕನ್ನಡ ಮತ್ತು ಹಿಂದಿ ಅಕ್ಷರ ಸುಡೊಕು
ಅಯ್ಯಪ್ಪಾ! ತಲೆಗೆ ಕೆಲಸ ಕೊಡುವ ಕೆಲಸವಿದು! ಬುದ್ಧಿವಂತರಿಗೆ ಮಾತ್ರ. ನನ್ನಂತಹವರಿಗೆ ಕಷ್ಟ.