ಆಕಸ್ಮಿಕಗಳು ಹೇಳಿ ಕೇಳಿ ಬರುತ್ತವೆಯೇ ?

ಆಕಸ್ಮಿಕಗಳು ಹೇಳಿ ಕೇಳಿ ಬರುತ್ತವೆಯೇ ?

ಬರಹ

ಇತ್ತೀಚೆಗೆ, ’ಹೋಳಿ ಹಬ್ಬ ’ ದಂದು, ಝಾರ್ಖಂಡ್ ರಾಜ್ಯದ ರಾಂಚಿ ನಿವಾಸಿ, ೬ ವರ್ಷ ಪ್ರಾಯದ ಮೆಹುಲ್ ಕುಮಾರ್ ನ ಹೊಟ್ಟೆಯಿಂದ ೨ ಮೀಟರ್ ( ೬ ಅಡಿ ) ಉದ್ದದ ಕಬ್ಬಿಣದ ಸಲಾಕೆಯನ್ನು ಶಸ್ತ್ರಚಿಕೆತ್ಸೆ ಮಾಡಿ ತೆಗೆದು, ಅವನ ಜೀವ ಉಳಿಸಿದ ಪ್ರಸಂಗವನ್ನು ಬೀ. ಬೀ.ಸಿ. ವರದಿಮಾಡಿದೆ. ಮನೆಯ ಟೆರೆಸ್ ನಿಂದ ಅಕಸ್ಮಾತ್ ಬಿದ್ದು, ಅವನ ಹೊಟ್ಟೆಯಲ್ಲಿ ಸಲಾಕಿ ನಾಟಿತು. ಕೂಡಲೇ ಅವನನ್ನು ಆಸ್ಪತ್ರೆಗೆ ದಾಖಲೆ ಮಾಡಲುಸಾಧ್ಯವಾದದ್ದು ಅವನ ಅದೃಷ್ಟ. ’ರಾಜೇಂದ್ರ ಇನ್ ಸ್ಟಿ ಟ್ಯೂಟ್ ಆಫ್ ಮೆಡಿಕಲ್ ಸೈನ್ ಸೆಸ್ ’ ನ ವೈದ್ಯರುಗಳು ಕೂಡಲೇ ನಿಗವಹಿಸಿ, ೪ ಗಂಟೆಗಳ ಅವಿಶ್ರಾಂತ ಆಪರೇಶನ್ ಬಳಿಕ, ಕಬ್ಬಿಣದ ರಾಡನ್ನು ಹೊರೆತೆಗೆದು ಜೀವದಾನಮಾಡಿದ್ದಾರೆ. ಮಗುವಿನ ದೇಹದಲ್ಲಿ ಬಹಳ ರಕ್ತಸ್ರಾವವಾಗಿದ್ದರಿಂದ ಸ್ವಲ್ಪ ಕಷ್ಟವಾಯಿತು. ಲಿವರ್, ಮತ್ತು ಹೊಟ್ಟೆಗೆ ಕೂಡ ಅಪಾಯವಾಗಿತ್ತು. ಮೆಹುಲ್ ಕುಮಾರ್, ಅವರ ಅಜ್ಜನವರ ಮನೆಯ ಟೆರೇಸ್ ಮೇಲೆ ಹೋಳಿಹಬ್ಬದ ದಿನ ಆಟವಾಡುತ್ತಿದ್ದಾಗ, ದಿಡೀರನೆ ಆಯತಪ್ಪಿ ಕಬ್ಬಿಣದ ಸಲಾಕೆಯಮೇಲೆ ಬಿದ್ದ ಹುಡುಗನಿಗೆ ಮೊದಲು ಪ್ರಥಚಿಕಿತ್ಸೆ ದೊರೆಯಿತು. ಸರ್ಜನ್ ಡಾ. ಸಂದೀಪ್ ಅಗರ್ವಾಲ್, ಹೋಳಿ ಹಬ್ಬದ ದಿನ ಆಗುವ ಅನೇಕ ಅನಾಹುತಗಳನ್ನು ಪಟ್ಟಿಮಾಡುವುದು ಕಷ್ಟವೆಂದು ನುಡಿದರು.

ಹೀಗೆಯೇ ಹಿಂದೆ, ದೆಹಲಿಯಲ್ಲಿ ಆದ ರಸ್ತೆ-ದುರ್ಘಟನೆಯಲ್ಲಿ, ೨೨ ವರ್ಷ ವಯಸ್ಸಿನ ಯುವಕನೊಬ್ಬನ ಎದೆಯಿಂದ ೫ ಅಡಿ ಉದ್ದದ ರಾಡ್ ತೆಗೆದ ಸಮಾಚಾರ ದಾಖಲಾಗಿದೆ.

ಪುಣೆ ನಗರದಲ್ಲಿ ಆದ ಇನ್ನೊಂದು ದುರ್ಘಟನೆಯಲ್ಲಿ, ಒಬ್ಬ ಕೆಲಸಗಾರನ ಭುಜದಲ್ಲಿ ಹೊಕ್ಕ ರಾಡ್, ಹೊಟ್ಟೆಯ ಮೂಲಕ ತೊಡೆಯವರೆಗೆ ಮುಟ್ಟಿದ ಘಟನೆಯಲ್ಲಿ ವೈದ್ಯರು, ಆಪರೇಶನ್ ಮಾಡಿ ಸಲಾಕೆಯನ್ನು ಹೊರ ತೆಗೆದು, ಅವನನ್ನು ಉಳಿಸಿದ ಸಮಾಚಾರ, ಸ್ಥಾನೀಯ ಪತ್ರಿಕೆ ವರದಿಮಾಡಿತ್ತು.

-ಕೃಪೆ : ಬೀ. ಬೀ. ಸಿ. ವರದಿ.