ಆಕೆಗಿಲ್ಲದ ಅಹಂಕಾರ ನನಗ್ಯಾಕೆ ??
ಅದು ನಾನು,,,,,ಇದು ನೀನು,,,,,
ನಾನು ಮಹಾ,,,, ನೀನು ಸ್ವಾಹ,,,
ವ್ಯಂಗ್ಯ ಹ್ಹ ಹ್ಹ ಹ್ಹ
ನಾನು ಈ ಪಕ್ಷ,,,, ನಿನಗಿಲ್ಲ ಮೋಕ್ಷ
ನನ್ನದು ಆ ದೇವರು,,, ನಿನ್ನದು ಉದುರಿದೆ ಹಲ್ಲು,
ಮೆಟ್ಟಿ ಮೆರೆಯುವವ ಮಹಾ ಆತ್ಮ,,,
ಶಾಂತಿ ನೀಡುವವ "ದುಡ್ಡಿನ ಆದ್ಯಾತ್ಮ "
ಗಡ್ಡಕ್ಕೆ ಬೆಂಕಿ ಬಿದ್ದರೂ, ಪಕ್ಕದ ಗುಡ್ಡ
ಹತ್ತಿ ಉರಿಯುತ್ತಿದೆ ಎನ್ನುವ
ನರ (ವಿಲ್ಲದ) ಮಾನವ
"ಪೂರ್ವಗ್ರಹ ಪೀಡಿತರ" ಪಾಂಡಿತ್ಯ
ಗ್ರಹವಾಸಿಗಳ ದಾಂಪತ್ಯ
ಮೇಕೆಯ ಮೇಲಿನ ಮರಣ ಮೃದಂಗ
ಸೋತವಗೆ ಬರಿ ಕಾಲಿನ ಒದೆತ
ವಿದ್ಯೆ ಸತ್ತು,,,,,,,,, ಹಣವಾಗಿ
ಗುಣ ಸುಟ್ಟು,,,,,,,, ಹೆಣವಾಗಿ
ಬಣ ಬಣ ಸುಡುವ ನಗರದ ಮದ್ಯಕ್ಕೆ
ಹೆತ್ತ ಮಕ್ಕಳನು ಅಖಾಡಕ್ಕಿಳಿಸಿ
ಕೊತ ಕೊತ ಕುಡಿಯುವ ನೀರಿನ
ಒಳಗೆ ಕೈ ಇಟ್ಟು ಸತ್ತವರು
ಹೆಣ ಸುಡಲೂ, ಸಣ್ಣವರಿಲ್ಲ
ನನ್ನೊಳಗೆ ನಾ ಸತ್ತು
ಪರಕೀಯರ ಚಪ್ಪಲಿಯ ತಲೆಮೇಲೆ ಹೊತ್ತು
ತಿರುಗಿ ತಿರುಗಿ ಮೋಕ್ಷದ ಕಾಲಕ್ಕೆ
ಮಡಿದು, ಮಣ್ಣು ಸೇರಿದೆ,
ಉಳಿದದ್ದು ಚಪ್ಪಲಿಯ ಕುರುಹು
ಬಿಚ್ಚುವ ದಾವಂತದಲಿ
ವರ್ಷಗಳಿಂದಾ ಬಚ್ಚಿಟ್ಟ
ಹಚ್ಚೆ ಬೆತ್ತಲೆಯಾಗಿದೆ,,,
ಅದು ನಾನು,,,,,ಇದು ನೀನು,,,,,
ನಾನು ಮಹಾ,,,, ನೀನು ಸ್ವಾಹ,,,
ವ್ಯಂಗ್ಯ ಹ್ಹ ಹ್ಹ ಹ್ಹ
ನನ್ನಷ್ಟು ಮಹಾ ಯಾರು ?
ನನ್ನದಲ್ಲದ ಯೋಚನೆ ಬರಿಯ ಗೌಣ.
ನಾನೇ ಮಧುರ, ನಾನೇ ಚತುರ,,
ನಾನೇ ಸತ್ಯ,,
ಯುಗಗಳಿಂದಾ ನನ್ನಂತವರನು
ಹೆತ್ತು-ಹೊತ್ತ ದೊಡ್ಡ ಭೂಮಿಕೆ ನಕ್ಕಿಹಳು
ಆಕೆಗಿಲ್ಲದ ಅಹಂಕಾರ
ನನಗ್ಯಾಕೆ ??
Comments
ಉ: ಆಕೆಗಿಲ್ಲದ ಅಹಂಕಾರ ನನಗ್ಯಾಕೆ ??
ನಿದ್ದೆಯಲ್ಲಿ ನಾನು, ನೀನುಗಳು ಇರುವುದೇ ಇಲ್ಲ. ಎಚ್ಚರವಾಯಿತೋ, ನಾನು ಆಫೀಸರ್, ನೀನು ನೌಕರ, ನಾನು ಪ್ರಧಾನಿ, ನಾನು ರಾಷ್ಟ್ರಪತಿ ಅನ್ನುವುದು ಬಂದುಬಿಡುತ್ತದೆ. ಇದನ್ನೇ ಮಾಯೆಯ ಚಮತ್ಕಾರವೆನ್ನುವರು. ಜಗತ್ತನ್ನು ಅರಿಯಬೇಕಾದರೆ ಮೊದಲು ನಮ್ಮನ್ನು ನಾವು ಅರಿಯಬೇಕು. ನಮ್ಮನ್ನು ಅರಿಯಲು ನಾವು ನಮ್ಮೊಳಗೇ ಹುಡುಕಬೇಕು! ನಿಮ್ಮ ಅನ್ವೇಷಣೆ ಹೀಗೆಯೇ ಮುಂದುವರೆಯಲಿ.
In reply to ಉ: ಆಕೆಗಿಲ್ಲದ ಅಹಂಕಾರ ನನಗ್ಯಾಕೆ ?? by kavinagaraj
ಉ: ಆಕೆಗಿಲ್ಲದ ಅಹಂಕಾರ ನನಗ್ಯಾಕೆ ??
ಕವಿಗಳೇ ನಮಸ್ತೆ,,,, ನಿದ್ದೆಯ ಮಹತ್ವ ದ ವರ್ಣನೆ ಕಂಡು ಬೆರಗಾದೆ,,,, ಹೌದಲ್ಲವೇ,,,, ನಿದ್ರೆಯ ನಂತರದ ಬದುಕಷ್ಟೇ ನಮದು,,,, ಧನ್ಯವಾದಗಳು ಕವಿಗಳೇ,,,,