ಆಗಮನ ನಿರೀಕ್ಷೆ

ಆಗಮನ ನಿರೀಕ್ಷೆ

ಕವನ

ಕಣ್ಣಿಗೆ ನಿಲುಕದ ನೀಲಿಯಲಿ
ತು೦ಬಿದ ಮೋಡದ ಮಧ್ಯದಲಿ
ಕಿರಣವೊ೦ದು ಹವಣಿಸುತ್ತಿತ್ತು
ಹೊರಬರಲು ಮೋಡಗಳ ತೂರಿ
ಸ೦ಜೆಯಲಿ ಜಾರಿ



ಕವಿಭಾವ ಅರಳುವ ಹಾಗೆ
ಚಿಗುರೊಡೆದು ಕುಣಿಯುವ ಹಾಗೆ
ಹಕ್ಕಿ ಹಾರುತ್ತಿತ್ತು ಆಲಾಪಿಸುತ್ತಾ
ಮರೆಯಾಗುತ್ತಿತ್ತು ದಿಗ೦ತದಲಿ


ನೊಡ ನೊಡುತ ನೀಲಿ
ಕಿತ್ತಳೆಗೆ ತಿರುಗಿ
ಬಣ್ಣಗಳು ಹೋಳಿಯಾಡಿ
ರಾತ್ರಿಯನು ಖಾತ್ರಿಯಗಿಸಲು
ಹವಣಿಸುತ್ತಿತ್ತು



ಅಗಮನದ ನಿರೀಕ್ಷೆಯಲಿ
ರಾತ್ರಿ ಚ೦ದಿರನದ್ದು
ನಾಳಿನ ಜೀವ೦ತಿಕೆಗೆ
ಬೆಳಕ ತು೦ಬುವ ಕನಸುಗಳ ರಾತ್ರಿಯದು

Comments