ಆಡಿ ಬಾ ಕಂದ...

ಆಡಿ ಬಾ ಕಂದ...

ಬರಹ

ಆಡಿ ಬಾ ಕಂದ... ಈ ವಾಕ್ಯವನ್ನು ಕೇಳಿದಾಗ ಅಥವಾ ಓದಿದಾಗ ತಕ್ಷಣ ನಮ್ಮ ಕಣ್ಮುಂದೆ ಬರುವ ದೃಶ್ಯ, ತಾಯಿ-ಮಗುವಿನ ಬಾಂಧವ್ಯ, ಪ್ರೀತಿ, ವಾತ್ಸಲ್ಯ. ತಾಯಿ ಮಗುವಿಗೆ ಹೇಳುತ್ತಾಳೆ, ಆಟವಾಡಿ ಬಾ ಕಂದ ಹಾಲಿನಲ್ಲಿ ಬಂಗಾರದ ಮೋರೆಯನ್ನು ತೊಳೆದೇನು ಎನ್ನುತ್ತ ಕಂದಮ್ಮನಿಗೆ ಪ್ರೀತಿಯಿಂದ ಕರೆ ನೀಡುತ್ತಾಳೆ.

ಹೀಗೆ ಒಂದು ಟಿ ವಿ ಚಾನೆಲ್ ನ ಹರಟೆ ಕಾರ್ಯಕ್ರಮದ ರೆಕಾರ್ಡಿಂಗಿಗೆ ಹೋಗಿದ್ದೆ, ನನಗೂ ಟಿವಿಯಲ್ಲಿ ಕಾಣಿಸಿಕೊಳ್ಳುವ ಆಸೆ ಜೊತೆಗೆ, ಒಂದು ವಿಷಯವಾಗಿ ಚರ್ಚೆ ಕೇಳಲು ತುಂಬಾ ಆಸಕ್ತಿ. "ಹೆಂಡತಿ ಮನೆಯ ಒಡತಿಯಾಗಿರಬೇಕೆ, ಅಥವಾ ಕೆಲಸಕ್ಕೆ ಹೋಗಿ ತಾನು ಕೂಡ ಸಂಪಾದಿಸಬೇಕೆ? "ಆ ಚರ್ಚೆ ಇಂದ ತಿಳಿದು ಬಂದದ್ದು ಕೆಲವರಿಗೆ ತಿಳಿದಿರುವುದು, ಕಿಂಡರ್ ಗಾರ್ಡೆನ್ ಗೆ ಹೋಗುವ ಮಕ್ಕಳು ಮಾನಸಿಕವಾಗಿ ಹಿಂಸೆ ಪಡುತ್ತಾರೆ. ಏಕೆಂದರೇ, ಮನೆಯಲ್ಲಿ ಗಂಡ-ಹೆಂಡತಿ ಇಬ್ಬರು ಕೆಲಸಕ್ಕೆ ಹೋಗುವವರು ತಮ್ಮ ಮಕ್ಕಳನ್ನು "ಕಿಂಡರ್ ಗಾರ್ಡೆನ್" ಗೆ ಸೇರಿಸುತ್ತಾರೆ, ಅಲ್ಲಿ ಮಕ್ಕಳು ಗಲಾಟೆ ಮಾಡಿದಾಗ, ಮಕ್ಕಳಿಗೆ ನಿದ್ರೆ ಬರುವ ಮಾತ್ರೆಯನ್ನು ನೀಡಿ ಮಲಗಿಸಲಾಗುತ್ತದೆ,ಹೀಗೆ ಮಾಡುವುದರಿಂದ ಆಟವಾಡುವ ಮಕ್ಕಳಿಗೆ ಕಟ್ಟಿಹಾಕಿದಂತೆ ಆಗಿ, ತಮ್ಮ ಉತ್ಸಾಹ, ಲವಲವಿಕೆ ಎಲ್ಲವು ಒಂದು ಕಡೆ ಬಂದಿತವಾಗಿ ಕೊನೆಗೆ ಸಾಯಂಕಾಲ ಮನೆಗೆ ಕರೆದೊಯ್ದಾಗ ಮಕ್ಕಳು ಚೀರುತ್ತಾರೆ ಹೆಚ್ಚು ಹಟಮಾಡುತ್ತಾರೆ.

ಈ ವಿಷಯವನ್ನು ಹೇಳುವ ಕಾರಣವೇನೆಂದರೆ ಈಗಿನ ಕಾಲದ ಮಕ್ಕಳು ಬಹಳ ಚುರುಕು ಹಾಗು ಬುದ್ದಿವಂತರು ಕೂಡ, ಅವರಿಗೆ ಬೆಳೆಯುವ ವಯಸ್ಸಿನಲ್ಲಿ ಸರಿಯಾದ ಪೋಷಣೆ, ಪ್ರೀತಿ ಸಿಗಬೇಕು, ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂಬುದನ್ನು ತಿಳಿಹೇಳಬೇಕು, ಇದು ತಾಯಿ ಇಂದ ಮಾತ್ರ ಸಾಧ್ಯವಾದೀತು.

ಒಂದು ಮಗುವಿನ ಹುಟ್ಟು, ಬೆಳವಣಿಗೆ, ಸರಿಯಾದ ದಾರಿಯಲ್ಲಿ ನಡೆಯೋದು, ಉತ್ತಮ ಪ್ರಜೆಯಾಗಿ ದೇಶದ ಆಸ್ತಿ ಯಾಗಬೇಕು, ಇದೆಲ್ಲವು ಒಬ್ಬ ತಾಯಿಯ ಪ್ರೀತಿ, ವಾತ್ಸಲ್ಯದಿಂದ ಮಾತ್ರ ಸಾಧ್ಯ.

- ಸೋಮಶೇಖರ್.ಕೆ