ಆತುರ --ಒ೦ದು ಜ಼ೆನ್ ಕಥೆ
ಬರಹ
ಯುದ್ಧಶಸ್ತ್ರಾಭ್ಯಾಸದ ವಿದ್ಯಾರ್ಥಿಯೊಬ್ಬ ತನ್ನ ಗುರುವಿನ ಬಳಿ ಹೋಗಿ ನಮ್ರನಾಗಿ ಕೇಳಿದ,'
' ನಿಮ್ಮ ಯುದ್ಧ ಕೌಶಲದ ಕಲೆಯನ್ನು ಕಲಿಯಲು ನಾನು ಬದ್ಧನಾಗಿದ್ದೇನೆ. ಅದರ ಪರಿಣಿತಿ ಪಡೆಯಲು ಎಷ್ಟು ಕಾಲ ಬೇಕಾದೀತು?
ಗುರುವಿನ ಉತ್ತರ ಬಹಳ ಸರಳವಾಗಿತ್ತು,
'ಹತ್ತು ವರ್ಷಗಳು.'
ಅಸಹನೆಯಿ೦ದ ವಿದ್ಯಾರ್ಥಿ ಉತ್ತರಿಸಿದ,
'ಆದರೆ ನಾನು ಆ ಪರಿಣಿತಿಯನ್ನು ಅದಕ್ಕಿ೦ತಲೂ ಮು೦ಚೆಯೇ ಸಾಧಿಸಬೇಕೆ೦ದಿದ್ದೇನೆ. ಅದಕ್ಕೋಸ್ಕರ ನಾನು ಬಹಳ ಕಷ್ಟ ಪಡಬಲ್ಲೆ. ಪ್ರತಿ ದಿನ ಅಭ್ಯಾಸ ಮಾಡುತ್ತೇನೆ, ದಿನಕ್ಕೆ ಹತ್ತು ಅಥವಾ ಅದಕ್ಕಿ೦ತಲೂ ಹೆಚ್ಚು ಗ೦ಟೆಗಳು ಬೇಕಾದರೆ . ಹಾಗಾದಲ್ಲಿ ನನಗೆ ಎಷ್ಟು ಸಮಯ ಬೇಕಾದೀತು?
ಆ ಗುರು ಕೆಲ ಕ್ಷಣ ಕಾಲ ಯೋಚಿಸಿ ಮರುನುಡಿದರು.
"ಇಪ್ಪತ್ತು ವರ್ಷಗಳು."
***