ಆತ್ಮಸಖಿ

ಆತ್ಮಸಖಿ

ಬರಹ

ಕಾಯುತ್ತಿದೇನೆ
ಆತ್ಮ ಸಖಿಗಾಗಿ
ಹುಣ್ಣಿಮೆಯಲಿ
ಚಂದ್ರಿಕೆಯೇ ಇಳಿದು
ಬಂದಂತೆ ಬಂದಾಳು
ಹಾಲ್ಗೆನ್ನೆಯ
ಮಿಂಚುಕಂಗಳ ಚಲುವೆ
ಚಂದ್ರಮುಖಿ ನಿಜ ಸಖಿ
ಬರುವಳೋ, ಬಾರಳೋ
ಕಾಯುತ್ತಿದ್ದೇನೆ

ಗೆಜ್ಜೆನಾದ ಹೊಮ್ಮಿಸಿ
ಪ್ರೆಮದೊರತೆ ಚಿಮ್ಮಿಸಿ
ಹೃದಯದರಸಿ ಬಂದಳು
ಕಾವ್ಯ ಪೂರ್ಣಿಮಾ
ಪೂರ್ಣ ಚಂದ್ರಿಕಾ
ಎನ್ದೊರಲಿದರೂ
ದನಿಯಿಲ್ಲ , ಎಲ್ಲಿ
ಅವಳೆಲ್ಲಿ ಕಾಣಳು?
ಹ್ರುದ್ಯವೇದ್ಯೆ, ಸತ್ಯ ಕಾವ್ಯೆ
ನನ್ನ ಆತ್ಮಸಖಿ ಎಲ್ಲಿ

ಧ್ಯಾನಕ್ಕೆಂದು ಕಣ್ಮುಚ್ಚಿ ಕುಳಿತಾಗ ಕಂಡ ಮುಖ ಕಣ್ಬಿಟ್ಟಾಗ ಮಾಯವಾದದ್ದೆಲ್ಲಿ?. ಹುಡುಕಾಟದಲ್ಲಿ ಹೊಳೆದ ಗೀಚುಗಳು .