ಆತ್ಮೀಯ ಸಂಪದಿಗರೆ, ಸಂಪದದಲ್ಲಿ ನಾವು ತರಲು ಪ್ರಯತ್ನಿಸುತ್ತಿರುವ ಹೊಸತುಗಳ ಕುರಿತು...

ಆತ್ಮೀಯ ಸಂಪದಿಗರೆ, ಸಂಪದದಲ್ಲಿ ನಾವು ತರಲು ಪ್ರಯತ್ನಿಸುತ್ತಿರುವ ಹೊಸತುಗಳ ಕುರಿತು...

ಬರಹ

ಆತ್ಮೀಯ ಸಂಪದಿಗರೆ,

ಸಂಪದ ಪ್ರಾರಂಭವಾಗಿ ಇಲ್ಲಿಗೆ ಹದಿನೈದು ವರ್ಷಗಳೇ ಆಗಿಹೋದುವು. ಕೆಲವು ವರ್ಷಗಳ ಕಾಲ ಇಲ್ಲಿ ಚಟುವಟಿಕೆ ಎಷ್ಟಿತ್ತೆಂದರೆ ಇದನ್ನು ನಡೆಸಿಕೊಂಡು ಹೋಗುವುದು ನಾಡಿಗರಿಗೆ ತೀರ ಕಷ್ಟವಾಗಿತ್ತು. ವಾಣಿಜ್ಯ ಯೋಜನೆಯಲ್ಲದ ಕಾರಣ ನಡುವೆ ಹಲವು ಕಾರಣಗಳಿಂದ ಇದನ್ನು ಪೂರ್ಣ ಪ್ರಮಾಣದಲ್ಲಿ ನಡೆಸಿಕೊಂಡು ಹೋಗಲು ಅವರಿಗೆಸಾಧ್ಯವಾಗಿರಲಿಲ್ಲ. ಅದರೆ ಬಹಳಷ್ಟು ಸಂಖ್ಯೆಯಲ್ಲಿ ಸಂಪದಿಗರು ಇನ್ನೂ ಇದರಲ್ಲಿ ಭಾಗವಹಿಸುತ್ತಿದ್ದು, ಹಲವರು ಮತ್ತೊಮ್ಮೆ ಸಂಪದ ಓದಬೇಕು, ನೋಡಬೇಕು ಎಂಬ ತಮ್ಮ ಬಯಕೆಯನ್ನು ಬರೆದುಕಳುಹಿಸುತ್ತಿದ್ದರು. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಸಂಪದ ಮತ್ತೊಮ್ಮೆ ಬರಬೇಕು ಎಂಬ ಧ್ಯೇಯ ಇಟ್ಟುಕೊಂಡು ಸಾಕಷ್ಟು ಪರಿಶ್ರಮ ಮತ್ತೊಮ್ಮೆ ಹಾಕಿ ಹೊಸ ಸಂಪದವನ್ನು ನಿಮ್ಮ ಮುಂದೆ ತಂದಿದ್ದೇವೆ. ಹಲವು ಕೆಲಸಗಳು ಇನ್ನೂ ನಡೆಯುತ್ತಿದ್ದು ನಾವು ವಹಿಸಿಕೊಂಡಿದ್ದ ಕೆಲಸಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ.

ಆದರೆ ಈಗಾಗಲೆ ಸಂಪದ ಆಪ್ ನ ಹೊಸ ಆವೃತ್ತಿ ನಿಮ್ಮ ಮೊಬೈಲಿನಲ್ಲಿ ಕಾಣಿಸಿಕೊಂಡಿರಬೇಕು. ಇಲ್ಲದಿದ್ದಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವ ಆಪಲ್ ಸ್ಟೋರಿನಿಂದ ಸಂಪದದ ಆಪ್ ಡೌನ್ಲೋಡ್ ಮಾಡಿಕೊಳ್ಳಿ.

ಸಂಪದವನ್ನು ಬಳಸುವಾಗ ಯಾವುದೇ ತೊಂದರೆಯಾದಲ್ಲಿ ಅಥವ ಬಗ್ಸ್ ಕಂಡುಬಂದಲ್ಲಿ support@sampada.net ವಿಳಾಸಕ್ಕೆ ಬರೆದು ಕಳುಹಿಸಿ. ಅದು ತಕ್ಷಣ ಸರಿಯಾಗದೆ ಇದ್ದರೂ ಕಾಲಕ್ರಮೇಣ ಪ್ರತಿಯೊಂದನ್ನೂ ಸರಿಪಡಿಸಿ ಮತ್ತೊಮ್ಮೆ ಮುಂಚಿನ ಸಂಪದವನ್ನು ನಿಮ್ಮ ಮುಂದಿಡುವ ಆಶಯ ನಮ್ಮದು.

- ಸಂಚಾಲಕ,
ಅಡ್ಡೂರು ಕೃಷ್ಣರಾವ್