ಆತ್ಮ, ಮನಸ್ಸು ಹಾಗೂ ಹೃದಯಗಳ ಪ್ರದರ್ಶನ ಮತ್ತು ಮಾರಾಟ

ಆತ್ಮ, ಮನಸ್ಸು ಹಾಗೂ ಹೃದಯಗಳ ಪ್ರದರ್ಶನ ಮತ್ತು ಮಾರಾಟ

ಅಪ್ಪಟ ದೇಸೀ ನಿರ್ಮಾಣದ ವಿಭಿನ್ನ ಗುಣರೂಪಗಳ ಸಂಗ್ರಹ.

1) ರಾಜಕಾರಣಿ: ಆತ್ಮ ಕಪ್ಪಾಗಿದೆ, ಮನಸ್ಸು  ನಂಬಲನರ್ಹ, ಹೃದಯ ಗಟ್ಟಿಯಾಗಿದೆ. ಈಗ 50 ವರ್ಷ ವಯಸ್ಸು. ಇನ್ನೂ 30 ವರ್ಷ ಗ್ಯಾರಂಟಿ. 

2) ಸ್ವಾಮೀಜಿ : ಬಣ್ಣ ಬಣ್ಣದ ಆತ್ಮ, ಮನಸ್ಸು ಚಂಚಲ, ಹೃದಯ ಭದ್ರವಾಗಿದೆ. ಈಗ 60 ವರ್ಷ ವಯಸ್ಸು. ಇನ್ನೂ 30 ವರ್ಷ ಗ್ಯಾರಂಟಿ.

3). ಕ್ರೀಡಾಪಟು (ಗಂ/ಹೆ) : ಆತ್ಮ ಕಪ್ಪು ಬಿಳುಪು, ಮನಸ್ಸಿನಲ್ಲಿ ಛಲ ತುಂಬಿದೆ. ಹೃದಯ ದೃಡವಾಗಿದೆ.ಈಗ ವಯಸ್ಸು 20. ಇನ್ನೂ 60 ವರ್ಷ ಗ್ಯಾರಂಟಿ.

4) ಪತ್ರಕರ್ತ/ಕರ್ತೆ : ಆತ್ಮ ವಿವಿಧ ಬಣ್ಣ, ಮನಸ್ಸು ದುರಹಂಕಾರ, ಹೃದಯ ಪುಕ್ಕಲು. ಈಗ ವಯಸ್ಸು 35. ಇನ್ನು 35 ವರ್ಷ ಗ್ಯಾರಂಟಿ.

5) ಸಿನಿಮಾ ನಟ/ನಟಿ : ಮೂಲ ಬಣ್ಣ ಕಪ್ಪಾಗಿದ್ದರೂ ವಿವಿಧ ಬಣ್ಣಗಳಾಗಿ ಬದಲಾಗುತ್ತದೆ. ಮನಸ್ಸು ಗೊಂದಲಮಯ. ಹೃದಯ ಕೃತಕ. ಈಗ 25 ವರ್ಷ. ಆಯಸ್ಸು ಗ್ಯಾರಂಟಿ ಕೊಡಲಾಗುವುದಿಲ್ಲ.

6) ಸೈನಿಕ : ಆತ್ಮ ಬಿಳಿಯಾಗಿದೆ. ಮನಸ್ಸು ಸದೃಡ. ಹೃದಯ ಕಲ್ಲಿನಂತೆ. ಬುದ್ಧಿ ಕಡಿಮೆ. ವಯಸ್ಸು 27 .ಆಯಸ್ಸು ಗ್ಯಾರಂಟಿ ಕೊಡಲಾಗುವುದಿಲ್ಲ.

7) ಸಾಹಿತಿ : ಆತ್ಮ ಕಪ್ಪು ಬಿಳುಪು, ಮನಸ್ಸು ಸ್ವಾರ್ಥ ಅಹಂಕಾರ ಭ್ರಮೆಗಳ ಸಮ್ಮಿಲನ. ಹೃದಯ ಮೃದು. ವಯಸ್ಸು 60. ಇನ್ನೂ 20 ವರ್ಷ ಗ್ಯಾರಂಟಿ.

8) ಸರ್ಕಾರಿ ಅಧಿಕಾರಿ/ಕಾರಿಣಿ : ಆತ್ಮ ಕಪ್ಪು  ಮನಸ್ಸು ಧನದಾಹಿ. ಹೃದಯ ಕಠಿಣ. ವಯಸ್ಸು 30.ಇನ್ನೂ 30 ವರ್ಷ ಗ್ಯಾರಂಟಿ.

9) ಉದ್ಯಮಿ (ಗಂ/ಹೆ) : ಆತ್ಮ ಕಪ್ಪು ಬಿಳುಪು, ಮನಸ್ಸು ಗೊಂದಲ ದುರಾಸೆ. ಹೃದಯ ಸಾಧಾರಣ. ವಯಸ್ಸು 40. ಆಯಸ್ಸು ಗ್ಯಾರಂಟಿ ಇಲ್ಲ.

10) ಯುವ ಪ್ರೇಮಿ.(ಗಂ/ಹೆ) : ಆತ್ಮ ಕಾಮನಬಿಲ್ಲು. ಮನಸ್ಸು ಮರ್ಕಟ. ಹೃದಯ ತುಂಬಾ ಮೃದು. ಈಗ 20 ವರ್ಷ ವಯಸ್ಸು. ಆಯಸ್ಸು ಗ್ಯಾರಂಟಿ ಇಲ್ಲ.

ಇದಲ್ಲದೆ ವಿಶೇಷ Stock clearance sales:

ಬಡವರು, ಭಿಕ್ಷುಕರು, ವೇಶ್ಯೆಯರು, ಕೂಲಿ ಕಾರ್ಮಿಕರು, ಬಡ ರೈತರು, ಅನಾಥರ ಆತ್ಮ ಮನಸ್ಸು ಹೃದಯಗಳನ್ನು ಅತ್ಯಂತ ಕಡಿಮೆ ಬೆಲೆಗೆ  ಮಾರಲಾಗುತ್ತದೆ. ಕೆಲವು ಉಚಿತ ಆಫರ್ ಗಳು ಇವೆ. ಇಂದೇ ಬೇಟಿ ಕೊಡಿ. Stock ಇರುವವರೆಗೆ ಮಾತ್ರ ಮಾರಾಟ.

ವಿಳಾಸ : 

ನಿಮ್ಮದೇ ಅಂತರಾಳ.

ಬೆಲೆ ;

ನೀವೇ ನಿಗದಿಮಾಡಿಕೊಳ್ಳಿ. 

  •  ಜ್ಞಾನ ಭಿಕ್ಷಾ ಪಾದಯಾತ್ರೆಯ 150 ನೆಯ ದಿನ ಬಳ್ಳಾರಿ ನಗರದಲ್ಲಿಯೇ ವಾಸ್ತವ್ಯ ಹೂಡಿತು.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ಇಂಟರ್ನೆಟ್ ತಾಣ