ಆದಿತ್ಯ - ಒಂದು ಗಝಲ್

ಆದಿತ್ಯ - ಒಂದು ಗಝಲ್

ಕವನ

ಹೊಂಗಿರಣವ ಬೀರಿ ಮಂಕಾಗಿ

ತೆರಳಿಹನು ಆದಿತ್ಯ|

ಗಗನದಲಿ ನಳನಳಿಸಿ ದುಃಖದಲಿ

ಮುಳುಗಿಹನು ಆದಿತ್ಯ||

 

ನೀಲಿ ಕಡಲಿನಾಚೆಗೆ ಏಕಾಂಗಿ

ಪಯಣದ ಯಾತ್ರೆ|

ಜಗದ ಜೀವಿಗಳಿಗೆ ಚೈತನ್ಯ

ನೀಡುತಿಹನು ಆದಿತ್ಯ|

 

ಇಳೆಗೆ ಬೆಳಕನು ನೀಡುತ

ಉದಯವಾಗುವನು|

ದಿವ್ಯಪ್ರಭೆಯ ತೋರಿಸುತ

ಮೆರೆದಿಹನು ಆದಿತ್ಯ||

 

ಪ್ರಕೃತಿಯ ಸಿರಿಯ ವೃದ್ದಿಸಿ

ಪರ್ಣಗಳಿಗೆ ಹಸಿರಾಗಿಸಿದ|

ಗ್ರಹಣದ ಕಾಲದಿ ಜೀಮೂತದಿ

ಅಡಗಿಹನು ಆದಿತ್ಯ||

 

ಮೂಡಣದ ಬಾಗಿಲು ತೆರೆದು

ಪಡುವಣಕೆ ಜಾರುವನು|

ಅಭಿನವನ ಕವಿತೆಗೆ ಸ್ಪೂರ್ತಿ

ತುಂಬುತಿಹನು ಆದಿತ್ಯ||

 

*ಶಂಕರಾನಂದ ಹೆಬ್ಬಾಳ* 

 

ಚಿತ್ರ್