ಆದೆನು ಚಿತ್ತು ?
ಕವನ
ಅರಿಯದೆ ನೋಟವು ನಿನ್ನೆಡೆ ಬಿತ್ತು
ನಿನ್ನಯ ಅಂದವ ನೋಡಿದ ಹೊತ್ತು
ಮೂಗಿಗೆ ತೊಟ್ಟಿಹ ಚಂದದ ನತ್ತು
ಅದರಲಿ ಜೋಡಿಸಿ ಹೊಳೆಯುವ ಮುತ್ತು
ಚೆಲುವೆಯ ನಿಲುವಿನ ಸೆಳೆಯುವ ಗತ್ತು
ಕಿರುನಗೆ ಬೀರುತ ತರಿಸಿದೆ ಮತ್ತು
ನೆಮ್ಮದಿ ಕೆಡಿಸಿದೆ ತಂದಿದೆ ಕುತ್ತು
ಮದನನ ಬಾಣಕೆ ಆದೆನು ಚಿತ್ತು
ಪ್ರೀತಿಗೆ ಒಪ್ಪಿಗೆ ಮುದ್ರೆಯನೊತ್ತು
ಒಲವನು ತೋರೆಯ ಬಳಿಯಲಿ ನಿತ್ತು
ನನ್ನಲಿ ಅವಿತಿಹ ದುರ್ಗುಣ ಕಿತ್ತು
ಸದ್ಗುಣ ತುಂಬಿದ ಮೂರ್ತಿಯ ಕೆತ್ತು
ಮುಂದಕೆ ನಾನಿದೊ ನಿನ್ನಯ ಸೊತ್ತು
ಬಯಸಿದೆ ಕೆಂಪಿನ ಅಧರದ ಮುತ್ತು
ಮೆರೆಸುವೆ ನಿನ್ನನು ಹೆಗಲಲಿ ಹೊತ್ತು
ಕೊಡುವೆಯ ವಂಶದ ಕುಡಿಯನು ಹೆತ್ತು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್
