ಆಧುನಿಕತೆಯ ವರದಾನ By shekarsss on Thu, 01/03/2008 - 16:06 ಬರಹ ಅವಸರದ ಜೀವನ ಅತಿವೇಗದ ಯಾನ ಅತಿ ಉದ್ವೇಗದ ಮನ ಆಧುನಿಕತೆಯ ವರದಾನ ಹತ್ತು ಹಲವು ದಾರಿ ಕವಲೊಡೆದ ಗುರಿ ದ್ವಂದ್ವ ಮನಸ್ಥಿತಿಯ ಪರಿ ಕಂಗೆಡುತಿದೆ ಮತಿ ಜಾರಿ ಮನಸುಗಳು ಮಲಿನ ಮಾತುಗಳು ಮಾಲಿನ್ಯ ಮೌಲ್ಯಗಳ ಪಲಾಯನ ಸರಿದ ಸಾತ್ವಿಕ ಜೀವನ