ಆಧುನಿಕತೆಯ ವರದಾನ

ಆಧುನಿಕತೆಯ ವರದಾನ

ಬರಹ

ಅವಸರದ ಜೀವನ
ಅತಿವೇಗದ ಯಾನ
ಅತಿ ಉದ್ವೇಗದ ಮನ
ಆಧುನಿಕತೆಯ ವರದಾನ

ಹತ್ತು ಹಲವು ದಾರಿ
ಕವಲೊಡೆದ ಗುರಿ
ದ್ವಂದ್ವ ಮನಸ್ಥಿತಿಯ ಪರಿ
ಕಂಗೆಡುತಿದೆ ಮತಿ ಜಾರಿ

ಮನಸುಗಳು ಮಲಿನ
ಮಾತುಗಳು ಮಾಲಿನ್ಯ
ಮೌಲ್ಯಗಳ ಪಲಾಯನ
ಸರಿದ ಸಾತ್ವಿಕ ಜೀವನ