ಆಧುನಿಕತೆಯ ಹೊಸ್ತಿಲಲ್ಲಿ......

ಆಧುನಿಕತೆಯ ಹೊಸ್ತಿಲಲ್ಲಿ......

ಕವನ

ಭಾವನೆಗಳಿಗೆ ಸ್ಪಂದನೆಇಲ್ಲ.....

ಸ್ಪಂದಿಸಿದರೂ ವಂದನೆಇಲ್ಲ....

ಹೃದಯ ತುಂಬಿದ

ನಗುವಂತೂ ಇಲ್ಲವೇ ಇಲ್ಲ..

ಹೀಗಿರುವಾಗ  ಎಲ್ಲೆಂದು 

ಹುಡುಕಲಿ ನಾ ನೂತನಗೀತವ?

ಒಲವೇ ಇಲ್ಲದ  

ಬದುಕು ಬವಣೆಯಾಗದಿರದೇ?

ಮನಕಿಂಬಿಲ್ಲದ  ಉಲಿಯು

ಎದೆಯ  ಕದವ  ತಟ್ಟಬಹುದೇ?

ದ್ವೇಷ-ಅಸೂಯೆಗಳ  ಧಗೆಯಲ್ಲಿ

ಬೆಂದುರಿಯುತ್ತಿದೆ ಸ್ನೇಹ..........

ಇದಾವ  ಅಸುರನ  ದಾಳಿ?

ಅಮೇರಿಕಾಸುರನೋ..? ಚೀನಾಸುರನೋ..?

ನಗುವಿಗೆ ಪ್ರತಿನಗೆಇಲ್ಲ..

ನೋವಿಗೆ ಮಿಡಿಯುವ  ಮನವಿಲ್ಲ...

ಹೆಜ್ಜೆ-ಹೆಜ್ಜೆಗೂ ಚುಚ್ಚು ಮಾತುಗಳ  

ಸರಮಾಲೆ...... ಇದು

ನಮ್ಮ  ಸಂಸ್ಕೄತಿಯೇ?

ಅಬ್ಭಾ! ಎಂತಹ  ಪರಕೀಯತೆ!

ಉಡುಗೆ ತೊಡುಗೆಯ  ಮಾತು

ಬದಿಗಿರಲಿ... ನಿಸ್ವಾರ್ಥ  ಪ್ರೀತಿಗೂ 

ವೈವಿಧ್ಯತೆಯಲ್ಲಿ ಏಕತೆ 

ಮೆರೆದ  ನಾಡಲ್ಲಿ ಕೊರತೆ!

ಆದರೂ ಅರಸುತ್ತಿದೆ ಮನವು

ಒಲವಿನ  ಮಧುರ  ಒರತೆ..........

ಇದುವೇ ಆಧುನಿಕತೆಯ

 ಹೊಸ್ತಿಲಲ್ಲಿ ಅರಳಿದ  ಕವಿತೆ.............

Comments