ಆಧುನಿಕ ಮೌಲ್ಯಗಳು - ಪರಿವರ್ತನೆ

ಆಧುನಿಕ ಮೌಲ್ಯಗಳು - ಪರಿವರ್ತನೆ

ಬರಹ

ಇಡೀ ಪ್ರಪಂಚದಲ್ಲಿ ಪ್ರಾಕೃತಿಕ ಮತ್ತು ವೈಜ್ಞಾನಿಕ ಪರಿವರ್ತನೆ ಕಾಣುತ್ತಿರುತ್ತದೆ.  ನಾವು ಸೇರಿ ಸಮಸ್ತ ವಸ್ತುಗಳೂ ಪೃಥ್ವಿಯಲ್ಲಿ ಚಲನೆಗೊಳಪಟ್ಟಿದ್ದೇವೆ.  ಆ ಚಲನೆಯಲ್ಲಿ ಅವುಗಳ ಸ್ವರೂಪ ಬದಲಾಗುತ್ತಿರುತ್ತದೆ. ಅಚಲವಾದುದು ಜಗತ್ತಿನಲ್ಲಿ ಯಾವುದೂ ಇಲ್ಲ!
ನಿರಂತರ ನಡೆಯುತ್ತಿರುವ ಈ ಚಲನೆಯಲ್ಲಿಯೆ ಪರಿವರ್ತನೆ ಇರುತ್ತದೆ.  ಅದು ಮಾನವ ನಿರ್ಮಿತ ವೆನಿಸಬಹುದು. ಪ್ರಕೃತಿಯ ಕೊಡುಗೆ ಯಾಗ ಬಹುದು. ಅಂತ ಪರಿವರ್ತನೆ ಆಗುವುದು ಆಗ ಬೇಕಾಗುವುದು ನಮ್ಮ ಅಸ್ತಿತ್ವ ಉಳಿಸಿಕೊಳ್ಳ ಲಿಕ್ಕಾಗಿ.  ನಮ್ಮ ಬದುಕಿನ ಮಹತ್ವ ಇರಲಿಕ್ಕಾಗಿ.

ವರ್ತಮಾನ ಕಾಣುವುದು ಭೂತಕಾಲದಿಂದ. ಹಳೆಯ ಜೀವನದಿಂದ ಹೊಸ ಜೀವನ.  ಮತ್ತೆ ವರ್ತಮಾನ ಅತೀತವಾಗುತ್ತದೆ. ವರ್ತಮಾನ ಅತೀತ ಎರಡೂ ಸೇರಿ ಭವಿಷ್ಯ ರೂಪಗೊಳ್ಳುತ್ತದೆ.  ಇದು ವಿಧಿವತ್ತಾಗಿ ನಡೆದೇ ತೀರುತ್ತದೆ. ಏನೇ ಆಗಿರಲಿ ಹಳೆಯದೆಂಬುದನ್ನೆಲ್ಲ ತೆಗಳುವ ಅಥವಾ ನಾಶಗೊಳಿಸುವ ಕ್ರಿಯೆ ಸುಲಭಸಾಧ್ಯವೆನಲ್ಲ.  ಹಾಗೆಯೆ ಹೊಸತೆಂಬುದನ್ನೆಲ್ಲ ಸ್ವೀಕರಿಸುವ ಅಥವಾ ಅಳವಡಿಸುವ ಕ್ರಿಯೆಯೂ ಸುಲಭವೇನಲ್ಲ.  ಆದರೆ, ಪರಿವರ್ತನೆ ಎಂಬ ಕ್ರಿಯೆ  ನಮ್ಮೊಳಗೆ -ಹೊರಗೆ(ಸಾಮಾಜಿಕ) ಪ್ರಕ್ರಿಯೆಯಾಗಿ ನಡೆಯುತ್ತಲೇ ಇರುತ್ತದೆ.  ಅದು ಸಹಜವೇ ಆಗಿ ತೋರುತ್ತದೆ.  ಆದರೇನು! ಆ ಪರಿವರ್ತನೆಗೆ ಅಂತ ರ್ವಿರೋಧವೆಂಬುದೂ ಈ ಸೃಷ್ಟಿಯ ಜೀವಿಗಳಲ್ಲಿ ಹಾಗೂ ಸಮಸ್ತ ವಸ್ತುಗಳಲ್ಲಿ ಇರುತ್ತಿದ್ದರೂ ಅದು ಒಂದಲ್ಲ ಒಂದು ರೀತಿ ಕಾರಣೀಭೂತವಾಗಿ ಎಷ್ಟೋವೇಳೆ ಮಾನವನ ಸ್ವಭಾವ ಗಳಿಂದಾಗಿಯೆ ವ್ಯತಿರಿಕ್ತವಾಗಿ ಉದ್ಭಸಿಯೆ ತೀರುತ್ತದೆ. 

ಮನುಷ್ಯನಾದವನು ಮಾತ್ರ ತನ್ನ ಬುದ್ಧಿವಂತಿಯಿಂದ ತನ್ನ ಅಸ್ತಿತ್ವಕ್ಕಾಗಿ ತನ್ನತನ ಉಳಿಸಿಕೊಳ್ಳಲಿಕ್ಕಾಗಿ, ಸುಖ ಜೀವನ ನಡೆಸಲಿಕ್ಕಾಗಿ ಯಾವುದೇ ಅಪಾಯ ಬಂದರೂ ಎದುರಿಸುತ್ತ ತನ್ನ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಹೋರಾಟ ನಡೆಸುವುದೂ ಕೂಡ ಅಷ್ಟೇ ಅನಿವಾರ್ಯವಾಗಿ ಮುಂದುವರೆದೇ ಇರುತ್ತದೆ.
-ಎಚ್.ಶಿವರಾಂ        21-01-2007