ಆಧ್ಯಾತ್ಮಿಕ ಸತ್ಯ ಮತ್ತು ಅನುಭವವೇದ್ಯ ನಂಬಿಕೆಗಳು
ಜಗತ್ತಿನಲ್ಲಿ ಜನ ಸುಳ್ಳನ್ನು ನಂಬುವಷ್ಷು ಸತ್ಯವನ್ನು ನಂಬುವುದಿಲ್ಲ. ಮೂಢನಂಬಿಕೆಗಳು ಕಂದಾಚಾರಗಳಿಗೆ ಬಲಿಪಶುಗಳಾಗುವ ಜನ ಎಲ್ಲಕಾಲಕ್ಕೂ ಇರುತ್ತಾರೆ. ವಿಜ್ಞಾನ ಇಂದಿನಷ್ಟು ಮುಂದುವರೆಯದಿದ್ದ ಕಾಲದಲ್ಲಿ ಅಂತಹ ಮೂಢನಂಬಿಕೆಗಳು ಹೆಚ್ಚು ಇದ್ದರೇನು! ವ್ಯಷ್ಠಿ ಮತ್ತು ಸಮಷ್ಠಿಯನ್ನು ದೈವಿಕ ಆಧ್ಯಾತ್ಮಿಕ ಶಕ್ತಿಗಳೆ ಆಳುತ್ತಿದ್ದ ಕಾಲವದಾಗಿತ್ತು. ಬ್ರಾಹ್ಮಣರಲ್ಲಿ ಬ್ರಹ್ಮ ತೇಜಸ್ಸು ಕ್ಷತ್ರಿಯರಲ್ಲಿ ಕ್ಷಾತ್ರ ಯೋಧರ ತೇಜಸ್ಸು ಮೆರೆಯುತ್ತಿದ್ದ ಕಾವದು. ಆ ಶಕ್ತಿಯನ್ನು ಅವೆರಡೂ ಗುಂಪಿನವರು ಸ್ವಯಂಕೃತಾಪರಾಧದಿಂದಲೇ ಕಳೆದುಕೊಂಡರು ಎಂಬುದನ್ನು ಇತಿಹಾಸ ಹೇಳುತ್ತದೆ
ಜನ ಸಂಖ್ಯೆ ಕಡಿಮೆ ಇದ್ದಂತೆಯೆ ಅಂದು ವಿದ್ಯಾವಂತರು ಪ್ರಜ್ಞಾವಂತರ ಮೇಧಾವಿಗಳ ಸಂಖ್ಯೆಯು ಕಡಿಮೆ ಇತ್ತು. ಅಂದೂ ದುಷ್ಟಶಕ್ತಿಗಳು ದ್ರೋಹಿಗಳು, ಕಳ್ಳ ಕಾಕರೂ ಇದ್ದರೂ ಇಂದಿಗಿಂತಲೂ ಧಾರ್ಮಿಕ ಶ್ರದ್ಧೆ ಬಹಳವಿತ್ತು. ಏನೆಲ್ಲ ಮೂಢ ನಂಬಿಕೆಗಳ ಹೊರತಾಗಿಯೂ ಜನ ಧರ್ಮ ಕರ್ಮದ ಅಂಜಿಕೆ ಹೆಚ್ಚಿತ್ತು. ಇಂದು ಜನ ಸಂಖ್ಯೆ ಹೆಚ್ಚಿದೆ; ವಿದ್ಯಾವಂತರ ಮೇಧಾವಿಗಳ ಸಂಖ್ಯೆಯೂ ಹೆಚ್ಚಿದೆ. ವಿಜ್ಞಾನವಂತೂ ದಿನೇ ದಿನೇ ನಮ್ಮ ಜನಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಆದರೇನು! ನಮ್ಮ ಪರಂಪರಾಗತವಾದ ಆ ದೈವ ಶ್ರದ್ಧೆ ಧಾರ್ಮಿಕ ನಂಬಿಕೆಗಳು ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಗೆ ಹೋಲಿಸಿದರೆ ಕಡಿಮೆಯಾಗುತ್ತಿದೆಯಷ್ಟೇ. ಅದೆಂದಿಗೂ ನಾಶವಾಗುವುದಿಲ್ಲ. ಇದೀಗ ದೇಶದಲ್ಲಿ ಅಷ್ಟೇ ಅಜ್ಞಾನ, ಅನಕ್ಷರತೆ ಮತ್ತು ಬಡತನದಿಂದ ಬಳಲುತ್ತಿರುವ ನರಳುತ್ತಿರುವ ಜನಸಂಖ್ಯೆಯೇನೂ ಕಡಿಮೆಯದಲ್ಲ; ನಾವು ಕಾಣುತ್ತಿರುವ ಹೊಲಸು ರಾಜಕೀಲಯದಲ್ಲಿ ಅದೂ ಕೂಡ ಕಡಿಮೆಯಾಗುವುದಿಲ್ಲ.
ಆದರೆ, ಯಾವುದು ಅಜ್ಞಾನ? ಯಾವುದು ಮೂಢನಂಬಿಕೆ? ಯಾಕೆ ಇನ್ನೂ ಅನಕ್ಷರತೆ ತೊಡೆದುಹಾಕಲಾಗಿಲ್ಲ? ಯಾಕಾಗಿ ಬಡತನವನ್ನು ನಿರ್ಮೂಲ ಮಾಡಲಾಗಿಲ್ಲ.? ಎಂದು ಗಾಢವಾಗಿ ಚಿಂತಿಸಿದಾಗ ಜನ ಸಂಖ್ಯೆಹೆಚ್ಚಿದಂತೆಲ್ಲ ಅದರ ಜೊತೆಗೇ ಜನ ಸುಳ್ಳನ್ನು ನಂಬುವಷ್ಟು ಸತ್ಯವನ್ನು ನಂಬದಿರುವುದೇ ಕಾರಣವೆನಿಸುತ್ತದೆ. ಯಾಕೆಂದರೆ, ಸುಳ್ಳನ್ನು ನಂಬಿ ಮೋಸಹೋಗುವಂತ ವಿದ್ಯಾವಂತ ಬುದ್ಧಿವಂತರನ್ನೂ ಸಹ ನಾವು ಕಾಣುತ್ತಿದೇವೆ. ಮುಂದುವರೆದಂತೆ ಈ ವೈಜ್ಞಾನಿಕ ಜಗತ್ತಿನಲ್ಲೂ ಅದನ್ನೇ ಕಾಣುತ್ತಿರುವುದು ಸೋಜಿಗದ ಸಂಗತಿಯಾಗಿದೆ; ಎಷ್ಟೋ ವೇಳೆ ವಿಚಿತ್ರವೆನಿಸುತ್ತದೆ.
ವಿಪರ್ಯಾಸವೆಂದರೆ, ವಿದ್ಯಾವಂತರೂ, ಹೆಚ್ಚು ಹೆಚ್ಚು ಓದಿಕೊಂಡು ಬುದ್ಧಿಜೀವಿಗಳೆನಿಸಿಕೊಂಡವರೂ ಸಹ ಯಾವುದು ಸತ್ಯ? ಯಾವುದು ಸುಳ್ಳು? ಎಂಬುದನ್ನು ತೀರ್ಮಾನಿಸಲು ವಿಫಲರಾಗುತ್ತಿರುವದೇಕೆ? ಅಥವಾ ತಮ್ಮ ಪ್ರತಿಷ್ಠಯನ್ನು ಮೆರೆಯಲಿಕ್ಕಾಗಿ ಏನೆಲ್ಲವನ್ನೂ ವೈಜ್ಞಾನಿಕ ದೃಷ್ಟಿಕೋನದಲ್ಲಿ ಒರೆಹಚ್ಚಿ ನೋಡುವುದರಿಂದಲೇ ತಾವು ಆಧುನಿಕ ಮನೋಭಾವದವರು ಎಲ್ಲವನ್ನೂ ತಿಳಿದವರು; ಅಥವಾ ತಿಳಿಯಬಲ್ಲವರು ಎಂದು ಬೀಗುವವರೇ ಹೆಚ್ಚುತ್ತಿದ್ದಾರೆ. ಅಂತಹ ಮೇಧಾವಿಗಳೆನಿಸಿಕೊಂಡವರಲ್ಲಿ ಕೆಲವರು ದೇವರಿಲ್ಲ ಆಧ್ಯಾತ್ಮಿಕ ನಂಬಿಕೆ ಎಂಬುದೂ ಇಲ್ಲ, ಎಲ್ಲವೂ ಮೂಢ ನಂಬಿಕೆ ಕಂದಾಚಾರಗಳೆಂದು ಸಾರುವುದರಿಂದಲೇ ತಾವು ಏನಕೇನ ಪ್ರಸಿದ್ಧಿ ಪಡೆಯಲು ಸಾಧ್ಯವೆಂದು ನಂಬಿದ್ದಾರೆ; ಹಾಗೆ ಪ್ರಚಾರ ಪ್ರಿಯರೂ ಪ್ರಸಿದ್ಧಿ ಪಡೆದವರೂ ಇದ್ದಾರೆ. ವಾಸ್ತವದಲ್ಲಿ ನಮ್ಮ ಸನಾತನ ಧರ್ಮ ಸಂಸ್ಕೃತಿ ಪರಂಪರಾಗತವಾದ ಆಧ್ಯಾತ್ಮಿಕ ನಂಬಿಕೆಗಳು ಬೇರೂರಿರುವುದನ್ನು ಯಾರೂ ಬಡು ಮೇಲು ಮಾಡಲಾಗುವುದಿಲ್ಲವೆಂಬದೂ ಅಷ್ಟೇ ಕಠೋರ ಸತ್ಯವಾಗಿದೆಯಲ್ಲ!
ಈ ಸಂದರ್ಭದಲ್ಲಿ ಆಂಗ್ಲ ನುಡಿಯೊಂದು ನೆನಪಾಗುತ್ತದೆ- "Most of the useless scholars, because they read much."
ಮತ್ತೊಂದು ಆಂಗ್ಲ ನುಡಿ- "Intellect is the temple of God. ಆದರೆ, ಈಗ ಅದನ್ನು Intellect is the tempest of Fraud." ಎಂದು ಹೇಳಬೇಕಾಗುತ್ತದೆ. ನಮ್ಮ ದೇಶವಂತೂ ತೀರ ವಿಚಿತ್ರ ವಿಲಕ್ಷಣ ದೇಶ. ಅದನ್ನು ನಮ್ಮ ಮಹಾನ್ ಕವಿ ಕುವೆಂಪು ಅವರ ಮಾತುಗಳಲ್ಲೇ ಕೇಳಬೇಕು,
ಈ ನಮ್ಮ ದೇಶ ಅದೆಷ್ಟು ವಿಚಿತ್ರ ವಿರೋಧಾಭಾಸಗಳ ದೇಶ....!!
ಯಾಕೆಂದರೆ, ನಾವು ನೋಡುತ್ತಿದ್ದೇವೆ ನಮ್ಮ ನಡುವೆ ಇಂಜಿನಿಯರುಗಳು, ಮಾಸ್ಟರ‍್ಸ ಡಿಗ್ರಿ ಪಡೆದವರೂ ಸಹ ಸತತ ಸಾಧಕರಾಗಿ ಸಂತರು, ಯೋಗಿಗಳು, ಪವಾಡ ಪುರುಷರೂ ಆಗಿದ್ದಾರೆ.ವಿದ್ಯಾವಂತರೆನ್ನದೇ ಮುಗ್ಧರೆನ್ನದೇ ಎಲ್ಲ ಜನರ ಭವರೋಗ ನಿವಾರಣೆಗೆ ಕಾರಣರಾಗಿ ಪೂಜ್ಯನೀಯರೆನಿಸಿದ್ದಾರೆ. ಹಾಗೆಯೇ ಕೆಲವು ಇಂಜಿನಿಯರುಗಳೂ, ಪ್ರೊಫೆಸರುಗಳೂ, ಡಾಕ್ಟರೇಟ್ ಪಡೆದವರೂ ನಮ್ಮ ಆಧ್ಯಾತ್ಮಿಕ ಸತ್ಯಗಳನ್ನು ದೇವರುಗಳನ್ನು ನಂಬಿಕೆ ಸಂಪ್ರದಾಯಗಳನ್ನು ಅಲ್ಲಗೆಳೆಯುತ್ತಲೇ ಬಂದಿರುವವರೂ ಇದ್ದಾರೆ; ಆಗಿ ಹೋಗಿದ್ದಾರೆ.... ಇಲ್ಲಿ ಹಾಗೆಯೆ ಏನೂ ನಡೆಯಬಹುದು. ಏನನ್ನೂ ನೋಡಬಹುದು. ಇದು ಅಕ್ಷರಶಃ ವಿಚಿತ್ರ ವಿರೋಧಾಭಾಸಗಳ ದೇಶ. ಆದರೇನು! ಹುಟ್ಟಿದರೆ ಇಲ್ಲೇ ಈ ವೈವಿಧ್ಯಮಯ ವೈಚಿತ್ರ‍್ಯಮಯ ನಾಡಲ್ಲೇ ಹುಟ್ಟಬೇಕು; ಇಲ್ಲೆ ಅಜ್ಞಾನಿಗಳು ಜ್ಞಾನಿಗಳು ಹಠಯೋಗಿಗಳ ನಡುವೆ ಬದುಕುವಂತಹ ಈ ವೈವಿಧ್ಯತೆ ಪ್ರಪಂಚದ ಬೇರೆಲ್ಲೂ ಕಾಣಸಿಗಲಾರದಲ್ಲ...
ಹೌದು, ಅಂತೆಯೆ ಇಲ್ಲೇ ವಾಸ್ತವತೆಯೊಂದಿದೆ; ಅದು ಸತ್ಯವನ್ನುಸದಾ ಅನುಭವವೇದ್ಯವಾಗಿ ಸಾದೃಶಗೊಳಿಸುತ್ತಿರುತ್ತದೆ. ಅಂತಹದೊಂದು ಸತ್ಯವು ಪುನರ್ಜನ್ಮವಿರಬಹುದು, ಅನೂಚಾನ ನಂಬಿಕೆಯಿಂದ ಬಂದ ಗ್ರಹಣ ಮುಂತಾದ ಸಾಂಪ್ರದಾಯಿಕ ಆಚರಣೆಗಳಿರಬಹುದು ಅವು ಭೌತಿಕವಾಗಿ ಯಾರೆಲ್ಲರ ಅರಿವಿಗೆ ಬಾರದಿದ್ದ ಮಾತ್ರಕ್ಕೇ ಅದಿಲ್ಲವೇ ಇಲ್ಲವೆಂದೂ ಅದೇ ತಮ್ಮ ಸ್ಪಷ್ಟ ಅಭಿಪ್ರಾಯವೆಂದೂ ಘೋಷಿಸಲಾಗವುದಿಲ್ಲ. ಆಥವಾ ಹಾಗೆ ತಮ್ಮ ಅಭಿಪ್ರಾಯವನ್ನು ಇತರರಮೇಲೆ ಹೇರಲಾಗುವುದಿಲ್ಲ. ಅವರ ಆಭಿಪ್ರಯ ವ್ಯಕ್ತಪಡಿಸಬಹುದಷ್ಷೇ; ಹಾಗೆ ವ್ಯಕ್ತಪಡಿಸಿದ ಮಾತ್ರದಿಂದಲೇ ಅಂತಹ ಮಹತ್ವದ ಆಧ್ಯಾತ್ಮಿಕ ಸತ್ಯಗಳು ಸಂಗತಿಗಳೂ, ಆ ನೆಲೆಯಿಂದುದಿಸಿದ ಅನುಭವವೇದ್ಯ ನಂಬಿಕೆಗಳನ್ನು ಸುಳ್ಳೆಂದು ಸಾಬೀತಾಗಿಸುವುದು ಸಾಧ್ಯವಿಲ್ಲ. ಯಾಕೆಂದರೆ, ಅಂತಹ ಮಹತ್ತರ ಆಧ್ಯಾತ್ಮಿಕ ಸತ್ಯವನ್ನು ಅವಿರತ ಸಾಧನೆಯಿಂದ ಕಂಡುಕೊಂಡಂತಹ ಸಾಧುಸತ್ಪುರುಷರು ಇಂದಿಗೂ ನಮ್ಮ ನಡುವೆ ಇದ್ದಾರೆ. ಈಗಾಗಲೇ ಹೇಳಿದಂತೆ ಅವರಲ್ಲೂ ಸ್ನಾತಕೋತ್ತರ ಪದವೀಧರರೂ ಹಾಗೂ ಹೆಚ್ಚ ಓದಿಕೊಂಡವರು ಆ ದಾರಿಯಲ್ಲಿ ಸ್ವತಃ ಸತ್ಯಾನ್ವೇಷಣೆ ಮಾಡಿದವರಿದ್ದಾರೆ; ಸ್ವತಃ ಸಾಧುಗಳಾಗಿದ್ದಾರೆ. ಹಾಗೆ ಸಾಧಕರಾಗಿಯೂ ಅಂತಹ ಆಧ್ಯಾತ್ಮಿ ಅನುಭೂತಿ ಮತ್ತು ಅನುಭವವೇದ್ಯ ಸತ್ಯ ಕಂಡುಕೊಳ್ಳದೇ ವಿಫಲರಾದವರೂ ಇದ್ದಾರೆ.
ಆದ್ದರಿಂದ, ಯವೊಂದು ಸತ್ಯವನ್ನು ವೈಜ್ಞಾನಿಕವಾಗಿ ಅಳೆಯಲಾಗುವುದಿಲ್ಲವೋ, ಎಲ್ಲ ಮೊಢನಂಬಿಕೆಗಳಿಂದ ಹೊರತಾಗಿಯೂ ಅನೂಚಾನ ಸಂಪ್ರದಾಯವಾಗಿ ಇದೆಯೋ, ಆಧ್ಯಾತ್ಮಿಕತೆ ಮತ್ತು ದೈವಿಕತೆಯಲ್ಲಿ ಪುನರಪಿ ಜನನಂ ಪುನರಪಿ ಮರಣಂ ಎಂಬ ಹುಟ್ಟು ಸಾವಿನಾಚೆಯ ಸ್ಥಿತ್ಯಂತರದಲ್ಲಿ ಅನುಭವವೇದ್ಯವಾಗಿರುವುದೋ, ಆ ಯಾವೊಂದು ಸತ್ಯವು ಅಂದಿಗೂ ಇಂದಿಗೂ ಸಾದೃಶವಾಗಿ ಜನಮಾನಸಕ್ಕೆ ಧರ್ಮ- ಕರ್ಮ ಸಂಯೋಗಗಳ ವಿಚಾರದಲ್ಲಿ ನಿತ್ಯ ಸಂಗತಿಗಳಲ್ಲಿ ಬದುಕಿಗೆವೇದ್ಯವಾಗಿ ನಿಜಕ್ಕೂ ಶಾಂತಿ ಸಮಾಧಾನ ನಿಡುತ್ತಿರುವುದೋ ಅದನ್ನು ಯಾರೂ ಇಲ್ಲವೇ ಇಲ್ಲವೆಂದು ಅಲ್ಲಗೆಳಯಲಾಗುವುದಿಲ್ಲ; ಅಲ್ಲವೇ...?.