ಆಪರೇಷನ್ ಮಂಕಿ ಎಂಬ ಕಾರ್ಯಾಚರಣೆ
ಅರೆ ನಜೀರ್ ರಸ್ಸೀಕೊ ಸಹಿ ಪಕಡ್, ನಹಿತೊ ಉಸ್ಕೊ ಶಕ್ ಆಯೇಗಾ ಎಂಬ ಮಾತುಗಳು ಬೃಹದಾಕಾರದ ಮರದ ಕೆಳಗಿನಿಂದ ಕೇಳಿಬಂದವು. ಮಾರ್ಕೆಟ್ನಿಂದ ಮರಳಿ ಬರುವಾಗ ಮಾರ್ಗದಲ್ಲಿ ಪಂಜರಗಳು, ೪-೫ ಜನ ಕೆಲಸಗಾರರು, ಅವರನ್ನು ನಿಯಂತ್ರಿಸುತ್ತಿರುವ ಕೆಂಪು ಗಡ್ಡ, ತಲೆಯ ವ್ಯಕ್ತಿಯೊಬ್ಬರನ್ನು ನೋಡಿದೊಡನೆ ನನ್ನ ಕುತೂಹಲ ಹೆಚ್ಚಾಯಿತು. ಇಲ್ಲಿ ಏನೋ ನಡೆದಿದೆ ಎಂದು ಮೆಲ್ಲನೆ ಅವರ ಬಳಿ ಸಾಗಿದೆ.
ಕೂಡ್ಲಿಗಿ ಪಟ್ಟಣದಲ್ಲಿ ಇತ್ತೀಚೆಗೆ ಮಂಗಗಳ ಹಾವಳಿ ವಿಪರೀತವಾಗಿದ್ದುದರಿಂದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪ್ರೇಮ್ಚಾರ್ಲ್ಸ್ ಮಂಗಗಳನ್ನು ಹಿಡಿಯುವ ಅನುಭವಿಗಳನ್ನು ದೂರದ ಮಹಾರಾಷ್ಟ್ರದ ಮೀರಜ್ನಿಂದ ಕರೆಸಿದ್ದರು. ಪಟ್ಟಣದಲ್ಲಿನ ಮಂಗಗಳನ್ನೆಲ್ಲ ಹಿಡಿದು ಬೇರೆಡೆ ಸಾಗಿಸುವ ಜವಾಬ್ದಾರಿ ಅವರದು. ಗುಂಪಿನ ನಾಯಕನ ಹೆಸರು ಶಬ್ಬೀರ್ ಹನೀಫ್ ಶೇಖ್. ಇಂತಹ ಗುಂಪು ಮರಗಳ ಮೇಲಿನ ಮಂಗಗಳನ್ನು ಉಪಾಯವಾಗಿ ಪಂಜರದಲ್ಲಿ ಹಿಡಿಯುತ್ತಿರುವ ಅಪರೂಪದ ದೃಶ್ಯ ಕಂಡುಬಂದಿತು. ಮೊದಲೇ ಚಂಚಲ ಸ್ವಭಾವದ ಮಂಗಗಳು ಇವರ ಬಲೆಗೆ ಹೇಗೆ ಬಿದ್ದಾವು ಎಂಬ ಕುತೂಹಲ ಹಾಗೂ ಆಶ್ಚರ್ಯ. ತಡೆಯಲಾರದೆ ಕೆಂಪುಗಡ್ಡದ ಲೀಡರ್ನ್ನು ಕೇಳಿಯೇಬಿಟ್ಟೆ. ಸಾಬ್ ಇವ್ರು(ಮಂಗಗಳು) ಇದಾರಲ್ಲ, ಭಾಳ ಹುಶಾರಾಗಿರ್ತಾರೆ. ಅವ್ರನ್ನ ಹಿಡೀಲಿಕ್ಕೆ ಭಾಳಾ ಯೋಚ್ನೆ ಮಾಡ್ಬೇಕು ಎಂದ. ಅಲ್ಲದೆ ಮತ್ತೊಂದು ವಿಶೇಷವನ್ನು ಶಬ್ಬೀರ್ ತಿಳಿಸಿದ್ದೇನೆಂದರೆ, ಬೆಳಿಗ್ಗೆ, ಸಾಯಂಕಾಲ ಅವ್ರು ಓಡಾಡ್ತಾರೆ, ಮಧ್ಯಾಹ್ನ ನಿದ್ದಿ ಮಾಡ್ತಾರೆ, ಆವಾಗ ಅವ್ರು ಸಿಗಲ್ಲ ಎಂದದ್ದು. ಅದಾವ ಮಾಯಾಮಂತ್ರ ಮಾಡುತ್ತಾನೋ ಈತ ಎಂದು ನೋಡತೊಡಗಿದೆ. ಮರಗಳ ಮೇಲಿನ ಮಂಗಗಳಲ್ಲಿ ನಾಯಕ ಮಂಗವೇ ಇವರ ಮೊದಲ ಗುರಿ. ಅದು ಬಂದರೆ ಉಳಿದೆಲ್ಲ ಬರುತ್ತವೆ ಎಂಬ ಟೆಕ್ನಿಕ್ ಇವರದು.
Comments
ಉ: ಆಪರೇಷನ್ ಮಂಕಿ ಎಂಬ ಕಾರ್ಯಾಚರಣೆ
ಉ: ಆಪರೇಷನ್ ಮಂಕಿ ಎಂಬ ಕಾರ್ಯಾಚರಣೆ
In reply to ಉ: ಆಪರೇಷನ್ ಮಂಕಿ ಎಂಬ ಕಾರ್ಯಾಚರಣೆ by ಗಣೇಶ
ಉ: ಆಪರೇಷನ್ ಮಂಕಿ ಎಂಬ ಕಾರ್ಯಾಚರಣೆ
ಉ: ಆಪರೇಷನ್ ಮಂಕಿ ಎಂಬ ಕಾರ್ಯಾಚರಣೆ