ಆಪಲ್ ಮ್ಯಾಕ್ ನಲ್ಲಿ ಕನ್ನಡ

ಆಪಲ್ ಮ್ಯಾಕ್ ನಲ್ಲಿ ಕನ್ನಡ

ಬರಹ
ಮ್ಯಾಕ್ ನ ಸಫಾರಿ ಬ್ರೌಸರ್ನಲ್ಲಿ ಕನ್ನಡ ಬರ್ಲಿಕ್ಕೆ ಎನ್ ಮಾಡ್ಬೇಕು?

ಭಾನುವಾರ ಪರೀಕ್ಷೆ ಬರೆದು ಬಂದು ಇನ್ನೇನು ಮಾಡೋಣ ಅಂತ ಯೋಚಿಸುವುದರೊಳಗೆ, ಮ್ಯಾಕ್ ನಲ್ಲಿ ಕನ್ನಡ ಬರ್ತಿಲ್ಲ ಏನ್ ಮಾಡ್ಬೇಕು ಅಂತ ಗೆಳೆಯ ಕೇಳಿದ ಪ್ರಶ್ನೆಗೆ "ಫಾಂಟ್" ಹೆಲ್ಪ್ ಇದೆ ನೋಡು ಅಂದದ್ದೇ ತಪ್ಪಾಯಿತು. ಯಾಕಂದ್ರೆ, ಗೂಗಲ್ ನಲ್ಲಿ ಸಿಕ್ಕ ಕೆಲ ಲಿಂಕ್ ಗಳು ಕೆಲಸ ಮಾಡ್ತಿರಲಿಲ್ಲ. ಸಂಪದದ ವಿಕಿಯಲ್ಲಿ ಒಂದು ಸಣ್ಣ ತೊಂದರೆ (ಅದನ್ನೀಗ ಸರಿ ಪಡಿಸಿದ್ದೇನೆ). ಲಿನಕ್ಸ್ ನಲ್ಲಿ ಫಾಂಟ್ ಇನ್ಸ್ಟಾಲ್ ಮಾಡ್ಬೇಕಾದಾರ ಉಪಯೋಗಿಸೋ ತಂತ್ರಗಳನ್ನೇಲ್ಲಾ ಟ್ರೈ ಮಾಡು ಅಂದ್ರೆ ಅದೂ ಕೈ ಕೊಟ್ಟಿತು. ಯಾವ ಫಾಂಟ್ ಹಾಕಿದ್ರೂ ಕೆಲಸ ಮಾಡ್ತಿಲ್ಲ.  ಆದ್ರೆ ಅಲ್ಲೇ ಇದ್ದ ನಿಕೊಲಸ್ ಶಾನ್ಕ್ಸ್ ರ ವೆಬ್ ಪೇಜ್ ಎಲ್ಲ ತೊಂದರೆಗಳನ್ನ ನಿವಾರಿಸಿತು.

"Unicode Kannada Font & Keyboard Layout for Macintosh"

ಮೇಲಿನ ತಲೆಬರಹದ, ನಿಕೋಲಸ್ ರ ಲೇಖನದಲ್ಲಿ ಕೊಟ್ಟಿರುವ ಕೊಂಡಿಯಿಂದ ಮ್ಯಾಕ್ ಗೆಂದೇ ಸಿದ್ದ ಪಡಿಸಿರೋ ಫಾಂಟ್ ಡೌನ್ಲೋಡ್ ಮಾಡಿಕೊಂಡು, ಬ್ರೌಸರ್ ಫಾಂಟ್ ಪ್ರಿಪರೆನ್ಸ್ ಬದಲಿಸಿದ್ದೇ ತಡ "ಯುರೇಕಾ" ಕ್ಷಣ ನಮ್ಮ ಮುಂದೆ. ಹರಿ, ಇದರ ಹಿಂದಿನ ಕತೆಗಳನ್ನಹೇಳ್ತಿದ್ದಾಗ ಸುಮ್ಮನೆ ಕುಳಿತು ಕೇಳ್ತಿದ್ದ ದಿನಗಳು ನೆನಪಿಗೆ ಬಂದ್ವು.  ನಿಕೊಲಸ್ ಶಾನ್ಕ್ಸ್ ರವರೆ, ಕನ್ನಡಕ್ಕೆ ಫಾಂಟ್ ಸಿದ್ದ ಪಡಿಸಿರೋ ನಿಮಗೆ ಅನಂತಾನಂತ ಧನ್ಯವಾದಗಳು.