ಆಮೇಲೆ ಏನಾಯ್ತೂ ಅಂದ್ರೇ !

ಆಮೇಲೆ ಏನಾಯ್ತೂ ಅಂದ್ರೇ !

ಬೆಳಿಗ್ಗೆ ಬೆಳಿಗ್ಗೆ ಫೋನ್ ಕಾಲ್ ಬಂತು ಕಣ್ರೀ! ಅದೇನು ದೊಡ್ಡ ವಿಷಯ?

ಕಾಲನ ಕರೆಯೂ
ಫೋನಿನ ಕರೆಯೂ
ಹೊತ್ತು ಗೊತ್ತಿಲ್ಲದೆ
ಬರುವುದು ನಿರ್ವಿಘ್ನ

ಅಲ್ಲವೇ?

ಹೋಗ್ಲಿ ಬಿಡಿ, ಸುಮ್ಸುಮ್ನೆ ಯಾಕೆ ತಲೆಕೆಡಿಸಿಕೊಳ್ತೀರ ...

ನನ್ನಾಕೆ ಫೋನಿನ ಕರೆ ತೆಗೆದುಕೊಂಡಳು. ಯಾವಾಗಲೂ ಮಾತು - ಪ್ರತಿಮಾತು ಅಂತ ಇರುತ್ತದೆ. ಸಾಮಾನ್ಯವಾಗಿ ಅತ್ಲಾಗಿಂದ "ಏನಿಲ್ಲ ರ್ರೀ, ಸುಮ್ನೆ ಮಾಡಿದ್ದೆ" ಅಂತ್ಲೇ ಶುರುವಾಗೋದು.. ಅಂದ್ರೇ? ಗಂಡನಿಗೆ ಹೊಡೀತಿದ್ರೋ ಏನು ಅಂತ ಕೇಳೊಕ್ಕೆ ಮಾಡಿದ್ದೆ ಅಂತಲೋ?

ಇರಲಿ, ಈ ಕರೆ ಯಾಕೋ ಹಾಗಿರಲಿಲ್ಲ. It was one sided talk u know. This other side was just ಹೂgutting !!ಭಯಂಕರ ಗಂಭೀರ ವಿಷಯ ಇರಬೇಕು ಎಂದು ಸರಿಯಾಗಿ ಕೇಳಿಸದ ಎನ್ನೀ ಕಿವಿಗಳಂ ಹಿರಿದಾಗಿ ತೆರೆದೆ !!! ಕಿವಿ ಹಿರಿದಾಗಿ ತೆರೆದರೆ ಏನು? ಒಳಗಿರೋ ಡ್ರಂ ತಾನೇ ಢಂ ಅಂದಿರೋದು? ಅದಕ್ಕೇ, ಏನೂ ಕೇಳಿಸಲಿಲ್ಲ, ಏನು ಅಂತ ಅರ್ಥವಾಗಲಿಲ್ಲ.

ಕೇಳಿಸದೇ ಇದ್ದರೇನಂತೆ. ಅದ್ಬುತವಾದ ತಲೆ ಇದೆಯಲ್ಲ, ಯೋಚನೆ ಮಾಡಲಿಕ್ಕೆ. ನನ್ ಹೆಂಡತಿಯ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದೆ. ಭಾವನೆಗಳನ್ನು ನೋಡಿದರೆ, ಬಹುಶ: "ಸೂಟ್ ಕೇಸಿನಲ್ಲಿ ಇಷ್ಟು ಹಣ ಇಂತಹ ಕಡೆ ತೆಗೆದುಕೊಂಡು ಬಂದು ನಿಮ್ಮ ಗಂಡನನ್ನು ಬಿಡಿಸಿಕೊಂಡು ಹೋಗಿ" ಅಂತ ಇರಬಹುದೇ????? ಹಾಗಿರಲು ಸಾಧ್ಯವಿಲ್ಲ ಬಿಡಿ. ಹಾಗೆಂದು ಹೇಳಿದ್ರೆ "ಒಂದು ದಿನ ಇಟ್ಕೊಳ್ಳಿ, ನೀವೇ ವಾಪಸ್ ಕರ್ಕೊಂಡ್ ಬಂದು ಬಿಡ್ತೀರಾ" ಅಂತ ಅಂದಿರ್ತಿದ್ಲು !!

ಬಡ್ಕೋಬೇಕು, ನನಗೂ ತಲೆ ಇದೆಯೇ? ನಾನು ಇಲ್ಲೇ ಇದ್ದೀನಲ್ಲ !!! ನನ್ನನ್ಯಾರೂ ಕರ್ಕೊಂಡ್ ಹೋಗಿಲ್ಲ !! ಇರಲಿ, ಅವಳೇ ಹೇಳೋ ತನಕ್ ಸುಮ್ಮನೆ ಇರೋಣ.

ಎರಡೂವರೆ ನಿಮಿಷಗಳ ಸುದೀರ್ಘ ಸಂಭಾಷಣೆ ಆದ ನಂತರ ಫೋನ್ ಕೆಳಗಿಟ್ಟಳು ನನ್ನ ಅರ್ಧ ಅಂಗಿ ! ಅವಳನ್ನು ನೋಡಿದರೇ ಗೊತ್ತಾಗುತ್ತೆ ನೂರೆಂಟು ಅಲೋಚನೆಗಳು ಮನದಲ್ಲಿ ಹರಿದಾಡುತ್ತಿವೆ ಎಂದು. ’ಅಲೋಚನೆ’ ಅಂದ ಮೇಲೆ ನೆನಪಿಗೆ ಬಂತು ನೋಡಿ... ಅದೇನೋ ಗೊತ್ತಿಲ್ಲ, ನನ್ನ ಮುಖದಲ್ಲಿ ಅಂತಹ ಯಾವ ಭಾವೆನಗಳೂ ಕಾಣೋದೇ ಇಲ್ಲ, ಕಣ್ರಿ !

ಒಮ್ಮೆ ಹೀಗೇ, ಯಾರ ಮುಂದೋ ಹೇಳಿಕೊಂಡೆ ’ನಾನು ಯೋಚನೆ ಮಾಡುತ್ತಿದ್ದೆ’ ಅಂತ. ಅವರು ... ನಕ್ಕರು ... ಮತ್ತು, ಗಂಭೀರವಾಗಿ ನುಡಿದರು ..  "ಮನದ ಕನ್ನಡಿಯೇ ಮುಖ. ಮುಖದ ಮೇಲೆ ಏನೋ ಕಾಣದೇ ಇರುವುದರಿಂದ ತಲೆನಾಗೆ ಏನೂ ಇಲ್ಲ" ಅಂತ!! ... ನಂತರ ನಾನು ತೆಪ್ಪಗಾದೆ ...

ಹೋಗ್ಲಿ ಬಿಡಿ, ಈಗ ನನ್ನ ಧರ್ಮಳ ತಲೇನಲ್ಲಿ ಏನು ನೆಡೀತಿದೆ ಅಂತ ತಿಳ್ಕೊಳ್ಳೋಣ.

"ಇಬ್ಬರೂ ಕೆಲಸಕ್ಕೆ ಸ್ವಲ್ಪ ಲೇಟಾಗಿ ಹೋಗಬೇಕಾಗುತ್ತದೆ" ಅಂದಳು. ನಾನು ಯಾಕೆ ಎಂದು ಕೇಳುವ ಮೊದಲೇ ಆಕೆ "MMKA"’ದಿಂದ ಫೋನ್ ಬಂದಿತ್ತು.

ಎಂಥಾ ಗಂಭೀರ ಪರಿಸ್ಥಿತಿ ... ಯಾವುದೋ ಅಂಡರ್ ವರ್ಲ್ಡ್’ನಿಂದ ಫೋನ್ ಬಂದಂತೆ !!!

ಮುಂದಿನ ನಿಮಿಷದಲ್ಲಿ ಇಬ್ಬರೂ ನಮ್ಮ ನಮ್ಮ ಮೊಬೈಲ್ ಹಿಡಿದುಕೊಂಡು ಆಫೀಸಿಗೆ ಕರೆ ಮಾಡಿ ಸ್ವಲ್ಪ ತಡವಾಗಿ ಬರುತ್ತೇವೆ ಎಂದು ಹೇಳಿಕೊಂಡೆವು. ನಂತರ ಲಕ್ಷಣವಾಗಿ ಸಿದ್ದರಾಗಿ ಹೊರಟೆವು.

ಎರಡು ತಿಂಗಳ ಹಿಂದೆ ಹೋಗಿ "MMKA"’ನಲ್ಲಿ ಹೆಸರನ್ನು ನೋಂದಾಯಿಸಿ ಬಂದಿದ್ದೆವು. ಫೋನ್ ಕರೆ ಬರುವುದಕ್ಕೇ ಎರಡು ತಿಂಗಳು ಅಂದರೇ, ಎಷ್ಟು ಡಿಮ್ಯಾಂಡು ಅಂತ ಅರ್ಥವಾಗಿರಬೇಕಲ್ಲ?

"MMKA" ಕಛೇರಿಯ ಪಾರ್ಕಿಂಗ್ ಲಾಟ್’ನಲ್ಲಿ ಗಾಡಿ ನಿಲ್ಲಿಸಿ, ಕಛೇರಿಯ ಒಳ ನೆಡೆದೆವು. ನಾವು ಬಂದಿದ್ದೇವೆ ಎಂದು ಹಾಜರಾತಿ ಹಾಕಿ, ಅಲ್ಲೇ ಒಂದು ಸೋಫಾ ಸೆಟ್ ಮೇಲೆ ಕುಳಿತೆವು.

ಚಿಕ್ಕದಾದರೂ ಚೊಕ್ಕವಾಗಿತ್ತು. ಎಲ್ಲೆಲ್ಲೂ ನೀರವತೆ, ಸ್ವಚ್ಚತೆ. ಅಲ್ಲಲ್ಲೇ ಇದ್ದ Hutch ’ಗಳಲ್ಲಿ ಪ್ರಶಸ್ತಿ ಪತ್ರಗಳು / ಕಪ್’ಗಳು ಏನೇನೋ. "MMKA" ಎಂದು ಬರೆದ ಅಕ್ಷರಗಳ ಮೇಲ್ಭಾಗದಲ್ಲಿ ಏನೋ ಲೋಗೋ ಇತ್ತು. ನೋಡೋಣ ಎಂದು ಎದ್ದು ಹೊರಡುವಷ್ಟರಲ್ಲಿ ಒಳಗಿನಿಂದ ಕರೆ ಬಂತು. ನಂತರ ನೋಡೋಣ ಎಂದು ನನ್ನಾಕೆಯ ಹಿಂದೆ ಒಳ ನೆಡೆದೆ.

ಹತ್ತು ಹಲವು ಪೇಪರ್’ಗಳು, ಹಲವಾರು ಕಡೆ ಸಹಿಗಳು, ರೂಲ್ಸ್’ಗಳು ಮತ್ತು ಪ್ರತಿ ರೂಲ್ಸ್’ಗಳು .... ಸಾಕಾಯ್ತು ಮಾರಾಯ್ರೇ! ... ಸಹಿಗಳ ಸಹಿತ, ಕೊರೆತ ... ಮೊರೆತ ... ಡೆಸ್ಕ್’ನಲ್ಲಿ ರಾಶಿ ಬಿದ್ದಿರುವ ಕೆಲಸದತ್ತ ಸೆಳೆತ ... ಆದರೇನು ಮಾಡೋದು, ಇಲ್ಲಿರುವ ತನಕ ಇವರ ಮಾತ ಕೇಳೋದು ವಿಧಿ ಲಿಖಿತ ...

ಏನೇನೋ ಕೋಡ್ ವರ್ಡ್ಸ್ ... ಮಧ್ಯೆ ಏನೋ ಕೇಳಿದ್ದಕ್ಕೆ, ದುಡ್ಡು ಖರ್ಚು ಮಾಡಿ ಪ್ರಿಂಟ್ ಮಾಡಿರೋ ಮ್ಯಾನ್ಯುಯಲ್’ನಲ್ಲಿ ಇದೆ ನೋಡಿಕೊಳ್ಳಿ ಅಂದರು ...

ಮೊದಲಿಗೆ "Review Supervisor (RS)" ಒಬ್ಬರು ಮನೆಗೆ ಬರುತ್ತಾರಂತೆ. ಮನೆಯನ್ನು ಒಮ್ಮೆ ಪರಿಶೀಲಿಸಿ ತಮಗೆ ಬೇಕಾದ ಮಾಹಿತಿಯನ್ನು, ಕಂಪನಿಯವರೇ ಸಿದ್ದ ಪಡಿಸಿರುವ ಪ್ರಶ್ನಾವಳಿಯ ಫಾರ್ಮ್’ನಲ್ಲಿ ನಮೂದಿಸಿಕೊಳ್ಳುತ್ತಾರೆ.

ಅದಕ್ಕೇ ಎಂದು ಒಂದು ದಿನ ಗೊತ್ತು ಮಾಡಿಕೊಂಡು, ಮನೆಯಲ್ಲಿ ಒಬ್ಬರು ಇದ್ದರೆ ಸಾಕು ಎಂದು ಬರೆದುಕೊಂಡರು. ಇಬ್ಬರೂ ಇದ್ದು ಸ್ವಾಗತ ಮಾಡಲು, ಬರುವವರೇನು ಮನೆಯ ಸೊಸೇನೇ? ಇರಲಿ, ಯಾರೂ ಇರಲು ಸಾಧ್ಯವಾಗದೆ ಇದ್ದರೆ, ಮನೆಯ ಕೀಲಿಕೈಯನ್ನು ಎಲ್ಲಾದರೂ ಇಟ್ಟು, ಇಟ್ಟಿರುವ ಜಾಗವನ್ನು ಈ-ಮೈಲ್’ನಲ್ಲಿ ತಿಳಿಸಿದರೂ ಸಾಕು ಎಂದರು !! ಸದ್ಯ ಫೇಸ್ ಬುಕ್’ನಲ್ಲಿ ಹಾಕಿ ಅಂತ ಹೇಳಲಿಲ್ಲವಲ್ಲ ...

ಮುಂದಿನ ಎರಡು ವಾರಗಳಲ್ಲಿ RS ಬರಲಿದ್ದಾರೆ. ಅವರು ಕೊಡುವ ರಿಪೋರ್ಟ್ ಆಧಾರದ ಮೇಲೆ ನಮ್ಮ ಮನೆಗೆ ಒಬ್ಬರು Analyst ನೇಮಕವಾಗುತ್ತಾರೆ. ಹಣದ ಥೈಲಿಯ ಶಕ್ತ್ಯಾನುಸಾರ ಒಬ್ಬರೋ, ಇಬ್ಬರೋ ಅಥವಾ ಎರಡೂ ಕೆಲಸಗಳನ್ನು ಬಲ್ಲ ಒಬ್ಬರು ನೇಮಕವಾಗುತ್ತಾರೆ.

Analyst’ಗಳ ಕೆಲಸದ ಬಗ್ಗೆ ಏನೇ ಹೇಳುವುದಿದ್ದರೂ ನೇರವಾಗಿ ಹೇಳುವಂತಿಲ್ಲ ಬದಲಿಗೆ ಕಂಪನಿಗೆ ಫ್ಯಾಕ್ಸ್ ಕಳಿಸಬೇಕು ಇಲ್ಲ ಅಪಾಯಿಂಟ್ಮೆಂಟ್ ತೆಗೆದುಕೊಂಡು ಮಾತನಾಡಬೇಕು. ಅವರನ್ನು ಎತ್ತಾಡುವ ಹಾಗಿಲ್ಲ. ಯಾವುದೇ ಕಾರಣಕ್ಕೆ ಅವರುಗಳು ಬರುವ ದಿನ ನಾವು ಮನೆಯಲ್ಲಿರಲಾಗುವುದಿಲ್ಲ ಎಂದಾದರೆ reschedule ಮಾಡಬೇಕು. ರೂಲ್ಸೋ ರೂಲ್ಸು ಶಿವ !!!

ಒಂದಷ್ಟು User / Owner manuals ಮತ್ತು ಅವರೊಡನೆಯ Code of Conduct ಎಂದೆಲ್ಲ ಹೊತ್ತುಗೆಗಳನ್ನು ಹೊತ್ತುಕೊಂಡು ಹೊರಗೆ ಬರುವಷ್ಟರಲ್ಲಿ ಹನ್ನೊಂದು ಘಂಟೆ. ಸ್ವಲ್ಪ ಲೇಟ್ ಬರುತ್ತೇವೆ ಎಂದುಕೊಂಡು ಆಗಲೇ ಊಟದ ಸಮಯವಾಯ್ತು!!

ಒಟ್ಟಿನಲ್ಲಿ ಯಾವುದೇ ತಗಾದೆ ಇಲ್ಲದೆ, ನಮ್ಮ Applicationಉ Approve ಆಯ್ತು. ಇಷ್ಟು ಹೊತ್ತೂ ಒದರಿದ DA, MA ಎಂಬುದೆಲ್ಲ ಏನು ಎಂದು ತಿಳಿದುಕೊಳ್ಳಲೇಬೇಕು ಎಂದುಕೊಂಡು, ಹಾಗೇ ಪುಸ್ತಕ ತೆರೆದೆ ...

DA: Dust Analyst ಅಂತಿತ್ತು ... MA ಅಂದರೆ Mop Analyst ಅಂತಿತ್ತು.

ಹೊರಗೆ ಬರುತ್ತಿದ್ದಂತೆಯೇ ಲೋಗೋ ನೋಡಬೇಕು ಎಂದುಕೊಂಡಿದ್ದು ನೆನಪಾಯ್ತು.

ನಾಲ್ಕಡಿ ಎತ್ತರದ, ಬುಡ ಮೇಲಾಗಿ, ನೇತು ಹಾಕಿರುವ ತೆಂಗಿನ ಪೊರಕೆಯ ಲಾಂಚನ. ಕೆಳಗೆ "ಪರಮ ಶುಚಿತ್ವ, ನಮ್ಮ ಅಸ್ತಿತ್ವ" ಎಂದಿತ್ತು. ಮೇಲೆ "MMKA" ಎಂದು ದೊಡ್ಡದಾಗಿ ಬರೆದಿತ್ತು.

"MMKA" ಅಂದರೆ "ಮಹಿಳಾ ಮನೆ ಕೆಲಸದವರ ಅಸೋಶಿಯೇಶನ್" ಅಂತ ....

ಎದುರ ಮನೆ ರಂಗಮ್ಮನ ಮನೆಗೆ ಬರುವ ’ಲಚ್ಚಿ’ನ್ನ ನಮ್ಮ ಮನೆಗೂ ಬಂದು ಮಾಡುವಂತೆ ಹೇಳುವ ಕಾಲ ಮುಗೀತ್ರೀ ... ಎಲ್ಲ ಹೈ-ಟೆಕ್ ಆಗಿದೆ ಈಗ ... ಎಲ್ಲೆಡೆ ತಂತ್ರಜ್ಞ್ನಾನದ ಯುಗದ ಗಾಳಿ ಬೀಸಿ, ಎಲ್ಲ ಕೆಲಸಗಳಿಗೂ ಆಂಗ್ಲದ ಒರೆ ಹಚ್ಚಲಾಗಿದೆ, ಮಹಾನಗರಿಯಲ್ಲಿ. ನೋಡುವ ಸ್ವರೂಪವೇ ಬದಲಾದರೂ, ಮೂಲ ಕೆಲಸ ಮಾತ್ರ ಅದೇ.

ಮನೆ ಕಸ ಗುಡಿಸಿ, ಪಾತ್ರೆ ಬೆಳಗುವವರನ್ನು Dust Analyst ಅನ್ನುತ್ತಾರೆ. ಮನೆ ಒರೆಸುವವರನ್ನು Mop Analyst ಎನ್ನುತ್ತಾರೆ. ಮನೆಗೆ ತನಿಖೆಗೆ ಬರುವ ಸೂಪರ್ವಿಸರ್, ಮನೆಯಲ್ಲಿನ ಧೂಳಿನ ಲೆವಲ್ ನೋಡಿ ರಿಪೋರ್ಟ್ ಮಾಡಿ, ಅದರ ಆಧಾರದ ಮೇಲೆ ಎಷ್ಟು ಜನರನ್ನು ಕಳಿಸಬೇಕು, ಒಂದು ವಿಸಿಟ್’ಗೆ ಎಷ್ಟು ಅಂತೆಲ್ಲ ಎಂದು ನಿಗದಿ ಮಾಡುತ್ತಾರೆ.

ನಿಮಗೆ ಈ ಅನಲಿಸ್ಟ್’ಗಳ ಸೇವೆ ಬೇಕಿದ್ರೆ ಹೇಳಿ ... ನಾನು ಈಗ ಕಸ್ಟಮರ್ ... ನಾನು  refer ಮಾಡಿದರೆ ನಿಮಗೆ ಬೇಗ ಅಪಾಯಿಂಟ್ ಸಿಗುತ್ತೆ. ನಿಮಗೆ, ಒಂದು ದಿನದ ಕಲಸ ಬಳಿಯುವಿಕೆ ಫ್ರೀ, ನನಗೆ ’ಗರುಡ ಮಾಲ್ ಕಡೆಯಿಂದ ಗಿಫ್ಟ್ ಹ್ಯಾಂಪರ್’ ... ಒಳ್ಳೇ ಆಫರ್ !!

ಮೊದಲನೆಯ ದಿನ ಬೆಳಿಗ್ಗೆ ಬಂದ analyst’ನ ನೋಡಿದೆ. ಆಗಲೇ ಹೇಳಿದಂತೆ ’ಎತ್ತಾಡಬಾರದು’ ಅಂತ ರೂಲ್ಸು ಒಂದಿದೆ ಅಲ್ವೇ? ... ನನ್ನಾಕೆಯನ್ನು ಕೇಳಿದೆ

"ಅಲ್ಲಾ, ಈ ಕೆಲಸದವಳು, ಎತ್ತಿಕೊಂಡು ಆಡುವಷ್ಟು ಥೆಳ್ಳಗಾ ಇದ್ದಾಳೆ ??" ಅಂತ

ಆಮೇಲೇನಾಯ್ತು ಅಂದರೆ .... ಹೋಗ್ಲಿ ಬಿಡಿ !!

 

Comments