ಆಯುರ್ವೇದ ಹರಿಕಾರ
ಕವನ
ಮಹಾವಿಷ್ಣುವಿನ ಅವತಾರ ಪುರುಷ ನೀನು
ಆದಿನಾರಾಯಣ ಭಗವಾನ್ ಧನ್ವಂತರಿ ಚೈತನ್ಯ
ವೇದ ಪುರಾಣ ಶಾಸ್ತ್ರಂಗಳಲ್ಲಿ ನಿನ್ನ ನಾಮ
ಆಯುರ್ವೇದದ ಮೂಲ ದೇವಾನುದೇವತೆ||
ಸಮುದ್ರಮಥನ ಸುಸಂದರ್ಭ ಉದ್ಭವಿಸಿದೆ
ಸುರಾಸುರರಿಗೆ ಔಷಧವ ಹಚ್ಚಿದೆ|
ಶ್ರೀಗಂಧ ಲೇಪಿತ ಶಂಖ ಚಕ್ರಧರೇ
ಅಮೃತ ಕಲಶ ಹಸ್ತೇ ಸಮುದ್ರವಾಸಹರೇ||
ಗಿಡಸಸ್ಯಮೂಲಿಕಾ ಆಯುರ್ವೇದ ಹರಿಕಾರ
ಆದಿದೇವ ನಮಸ್ತುಭ್ಯಂ ಮೃತ್ಯುನಾಶನಂ|
ಉಲ್ಲಾಸ ಚೈತನ್ಯ ದಾಯಕನು
ರೋಗರುಜಿನಗಳ ಶಮನಕಾರಕನು||
ಲೋಕವ್ಯಾಪಿಸಿದ ಮಹಾಮಾರಿಯ ಹೊಡೆದೋಡಿಸು
ಮತ್ತಷ್ಟೂ ಮರುಕಳಿಸದಂತೆ ಸಹಕರಿಸು|
ಜನರಿಗೆ ನೆಮ್ಮದಿ ಸೌಖ್ಯವನು ಕರುಣಿಸು
ಧನ್ವಂತರಿ ದೇವನೇ ಅನವರತ ಮನೆ ಮನಗಳಲಿ ನೆಲೆಸು||
(ಅಕ್ಟೋಬರ್ ೨೨ರ ‘ಧನ್ವಂತರಿ ಜಯಂತಿ’ ಪ್ರಯುಕ್ತ)
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ್