ಆಯುರ್ವೇದ V/s ಯುನಾನಿ

ಆಯುರ್ವೇದ V/s ಯುನಾನಿ

ಬರಹ

ಇವೆರಡರಲ್ಲಿ ನಿಮಗೆ ಯಾವುದು ಹಿತ?

ಆಯುರ್ವೇದ ಯಾವುದೋ ಕಾಲದಲ್ಲಿ ಬರೆದಿಟ್ಟ ಕೆಲವು ನಿಯಮಗಳಿಗನುಸಾರವಾಗಿ ಶರೀರದ ಗುಣವನ್ನಾಧರಿಸಿ ಮೂಲಧಾತು ಸೌಕರ್ಯಕ್ಕೆ ನಿಸರ್ಗದತ್ತ ಗಿಡಮೂಲಿಕೆಗಳಿಂದ ಔಷಧಿ ನೀಡುವ ವಿಧಾನ(ನನ್ನರಿವಿಗೆ ಬಂದಿದ್ದು). ಯುನಾನಿಯುಸಹ ಬಹಳ ಯಶಸ್ವಿಕಂಡಿದೆ. ಚಿಕ್ಕ ರೋಗಗಳಿಂದ ಹಿಡಿದು ಶಸ್ತ್ರ ಚಿಕಿತ್ಸೆವರೆಗೆ ನಾವು ಅವಲಂಭಿಸಿರುವುದು ಇದನ್ನೇ.

ಇನ್ನು ಆಯುರ್ವೇದದಲ್ಲಿ ಹೊಸಸಂಶೋಧನೆ ಇತ್ಯಾದಿಗಳು ಸಧ್ಯಕ್ಕೆ ನಿಂತು ಹೋಗಿದೆ ಎನಿಸುತ್ತದೆ. ಇಂಗ್ಲೀಷ ಪದ್ಧತಿಯಲ್ಲಿ ದಿನ ನಿತ್ಯ ಹೊಸ ಹೊಸ ವಿಷಯಗಳ ಸೇರ್ಪಡೆ, ಆವಿಷ್ಖಾರಗಳೂ ನಡೆಯುತ್ತಲೇ ಇರುತ್ತವೆ. ವಿಪರ್ಯಾಸ ಎಂದರೆ ಇವತ್ತಿನ ಆಸ್ಪತ್ರೆಗಳು ಶುಶ್ರೂಷಾ ಕೇಂದ್ರಗಳಿಗಿಂತ ಹೆಚ್ಚಾಗಿ ಹಣವಸೂಲಿ ಕೇಂದ್ರಗಳಗಿವೆ. ನಗರದ ದುಬಾರಿ ಖಾಸಗಿ ಆಸ್ಪತ್ರೆಗಳ ವಿಚ್ಚಗಳನ್ನು ಭರಿಸಲಾಗದೆ ಸೇವಾಕ್ಷೇತ್ರ ಆಸ್ಪತ್ರೆಗಳು, ಸರ್ಕಾರಿ ಆಸ್ಪತ್ರೆಗಳು ಇವುಗಳ ಮುಂದೆ ಸಾಲುಗಟ್ಟಿನಿಲ್ಲುವ ಬಡಜನರನ್ನು ನೋಡಿದರೆ, ಇವೆಲ್ಲಕ್ಕಿಂತಲೂ ಸುಲಭ ಸರಳವಾದ, ಹೆಚ್ಚು ಖರ್ಚಿಲ್ಲದ ಆಯುರ್ವೇದ ಪದ್ಧತಿಯನ್ನು ಉತ್ತಮಪಡಿಸಿ ಹೆಚ್ಚು ಚಿಕಿತ್ಸಾಕೇಂದ್ರಗಳನ್ನು ತೆರೆಯುವುದು ಒಳಿತಲ್ಲವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet