ಆಯ್ದ ಗಾದೆ ಮಾತುಗಳು (೧-೧೦) :-

ಆಯ್ದ ಗಾದೆ ಮಾತುಗಳು (೧-೧೦) :-

ಬರಹ

ಗಾದೆಮಾತುಗಳು ಜನರ ಅನುಭವದ ಸಾರ ಸಂಗ್ರಹ. 'ವೇದ ಸುಳ್ಳಾದರೂ ಗಾದೆ ಸುಳ್ಳಾಗದು' ಎಂಬ ಗಾದೆಯೇ ಗಾದೆಗಳ ಮಹತ್ವವನ್ನು ನೋಡುತ್ತದೆ. ಸಾಮಾನ್ಯ ಜನರ ನಡುವೆ ಬಳಕೆಯಲ್ಲಿರುವ ಈ ಮಾತುಗಳಲ್ಲಿ ಜೀವನಾನುಭವ ಅಷ್ಟೇ ಅಲ್ಲದೇ ಕಾವ್ಯ ಗುಣವನ್ನೂ ಅಲ್ಲಲ್ಲಿ ಕಾಣಬಹುದು. ನಾನು ಇಲ್ಲಿ ಕೊಡುತ್ತಿರುವ ಗಾದೆಮಾತುಗಳನ್ನು ಬೇರೆ ಬೇರೆ ಕಾರಣಗಳಿಗಾಗಿ ಆರಿಸಿದ್ದೇನೆ.

೧. ಅಂಗಾಲಿಗೆ ತ್ರಾಣವಿದ್ದರೆ ಬಂಗಾಲಕ್ಕೆ ಹೋಗಬಹುದು.
೨. ಅಂಗಡಿ ಮಾರಿ ಗೊಂಗಡಿ ಹೊದ್ದ ಹಾಗೆ.
೩. ಅಂಗಾಲಿಗೆ ಹೇಸಿಕೆಯಿಲ್ಲ , ಕರುಳಿಗೆ ನಾಚಿಕೆಯಿಲ್ಲ .
೪. ಅಂಗೈ ಹಾಗೆ ಹೊಲ ಮಾಡಿದರೆ , ಮುಂಗೈ ತುಂಬ ತುಪ್ಪ.
೫. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ .
೬. ಅಂಬಲಿ ಊಟ ; ಕಂಬಳಿ ಹೊದಿಕೆ.
೭. ಅಕ್ಕ ಇದ್ದರೆ ಭಾವ ; ರೊಕ್ಕ ಇದ್ದರೆ ಸೂಳೆ.
೮. ಅಕ್ಕರೆಯಿಂದಲ್ಲದಿದ್ದರೂ ಅಪವಾದಕ್ಕೆ ಹೆದರಿ ಕರೆಯಬೇಕು.
೯. ಅಕ್ಕರೆಯಿಲ್ಲದ ಉಪ್ಪರಿಗೆಗಿಂತ ಅಕ್ಕರೆಯ ತಿಪ್ಪೆಯೇ ಲೇಸು.
೧೦. ಅಕ್ಕಿ ಕೊಟ್ಟು ಅಕ್ಕನ ಮನೆಯೇ?