ಆರಡಿ ಮೂರಡಿ...

ಆರಡಿ ಮೂರಡಿ...

ಕವನ

೧.

ಅವನು ಅಂದುಕೊಂಡಿದ್ದ

ತಾನೊಂದು ಆಲದ ಮರ!

ಈಗ ಗೊತ್ತಾಗಿದೆ

ತಾನು ಹಾಳಾದ ಮರ!!

೨.

ಅಳೆದೂ ತೂಗಿ ಬದುಕಿದರೆ

 ಒಂದು ಚಂದ!

ಲೆಕ್ಕ ತಪ್ಪಿ ನಡೆದರೆ 

ಎತ್ತಬೇಕು ಚಂದಾ!!

೩.

ದೇವರ ಭಯವಿಲ್ಲದವನ ಬದುಕು 

ಭೂಮಿಯಲ್ಲೇ ನರಕ!

ಎಲ್ಲಿ ನಡೆದರೂ ಮನುಜನಿಗೆ ನೋವಿನದೇ ಎರಕ!!

೪.

ವಿಧಿಯಾಡಿಸುವಾಗ ಸುಮ್ಮನಿರು ಸೋತು!

ಅಧಿಕಾರ ತೋರಿಸಿದೆಯೋ

ನಿನ್ನ ಕಥೆ ಮುಗೀತು!!

೫.

ಅವನು ಕರುಣಿಸದಿರುವ ಯಾವುದೇ

 ಪದವಿಗೆ ಬೆಲೆಯಿರದು..!

ಅನುಗ್ರಹಿಸಲ್ಪಡದಿರುವುದು

ಎಂದಿಗೂ ಬಳಿಯಿರದು!!

೬.

ನೋವು ಎಲ್ಲರದೂ ಒಂದೇ!

ಅರ್ಥವಾಗದಿದ್ದರೆ ಕೊಂದೆ!!

-ಕಾ.ವೀ.ಕೃಷ್ಣದಾಸ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್