ಆರು ಹಿತವರು ನಿನಗೆ ಈ ಮೂವರೊಳಗೆ

ಆರು ಹಿತವರು ನಿನಗೆ ಈ ಮೂವರೊಳಗೆ

ಬರಹ

ಆರು ಹಿತವರು ನಿನಗೆ  ಈ  ಮೂವರೊಳಗೆ
ನಾರಿಯೋ , ಕಮಲವೋ , ಕೈಕೊಡುವ ಕೈಯೋ

ಕೆಸರಿನಲ್ಲಿದ್ದ ಕಮಲವಾ ತಂದು
ಸೌಧದೊಳು ಉಪ್ಪರಿಗೆಯಲ್ಲಿರಿಸಿ
ಯಡ್ಡಿಯನು ಯಜಮಾನನೆನಿಸಿದರೆ
ಬಿರುಕು 'ಭಿನ್ನ'ವ ತೊರೆದ ಈ ಮನುಜನು

ಆರು ಹಿತವರು ನಿನಗೆ  ಈ  ಮೂವರೊಳಗೆ
ನಾರಿಯೋ , ಕಮಲವೋ , ಕೈಕೊಡುವ ಕೈಯೋ

ಮುನ್ನ 'ಶತಕದ' 'ಕೋಟಿ' ರಾಯರುಗಳು  ಆಳಿದ ಸೀಟನ್ನು
ತಂದೆನುತ ಶಾಸಕರು ಕೂಗಾಡಿ
ಸಖರೊಡನೆ ರೆಸಾರ್ಟ್ನಲ್ಲಿ ಅಡಗಿ
'ಭಿನ್ನ'ದ ಮನೆಕಟ್ಟುತಿರುವ ಈ ಮನುಜರು

ಆರು ಹಿತವರು ನಿನಗೆ  ಈ  ಮೂವರೊಳಗೆ
ನಾರಿಯೋ , ಕಮಲವೋ , ಕೈಕೊಡುವ ಕೈಯೋ

---- ಭಾಷಪ್ರಿಯ