ಆರೋಗ್ಯದಾಯಕ ಖರ್ಜೂರ ಹಣ್ಣು

ಆರೋಗ್ಯದಾಯಕ ಖರ್ಜೂರ ಹಣ್ಣು

ಖರ್ಜೂರ ಮರಳುಗಾಡಿನ ಬೆಳೆ ಆದರೂ ಈಗ ಕರ್ನಾಟಕದಲ್ಲಿ ಬೆಳೆಯೋ ಪ್ರಯತ್ನ ಕೆಲವರು ಮಾಡುತ್ತಾ ಇದ್ದಾರೆ. ಅದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಸಾಧಾರಣವಾಗಿ ಖರ್ಜೂರವನ್ನು ಎರಡು ರೀತಿಯಲ್ಲಿ ಉಪಯೋಗಿಸುತ್ತಾರೆ, ಒಂದು ಒಣ ಖರ್ಜೂರ ಅಂದ್ರೆ ನಮ್ಮಲ್ಲಿ ಅದಕ್ಕೆ ‘ಉತ್ತುತ್ತೆ’ ಅಂತ ಹೇಳುತ್ತಾರೆ. ಮತ್ತೊಂದು ನಾವೆಲ್ಲ ತಿನ್ನುತ್ತೇವಲ್ವಾ, ಸಿಹಿ ಇರುತ್ತೆ ನೋಡಿ ಆ ಖರ್ಜೂರ. ಖರ್ಜೂರದ ಮರದಲ್ಲಿ ಈಚಲ ಮರದಲ್ಲಿ ಬಟ್ಟಿಯನ್ನು ಇಳಿಸಿ ಕಳ್ಳು ತೆಗಿಯುತ್ತಾರೆ. ಇದು ತೆಂಗಿನ ಮರದ ಕಳ್ಳಿನ (ನೀರಾ) ರುಚಿ ಇರುತ್ತದೆ. ಇದು ಕೆಲವು ಕಡೆ ಮಾತ್ರ ಅದರ ಔಷಧಿಯಾಗಿ ಬಳಕೆ ಇದೆ.

ಖರ್ಜೂರವನ್ನು ಹೋಳಿಗೆ, ಹಲ್ವಾ, ಪಾಯಸ ಮತ್ತು ಹಲವಾರು ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಉತ್ತುತ್ತೆಯನ್ನು ಬಳಸಿ ಪಲ್ಯ, ಸಾಂಬಾರು, ಮಜ್ಜಿಗೆ ಹುಳಿ, ಕೋಸಂಬರಿ, ಕಾಯಿರಸ ಮುಂತಾದ ತುಂಬಾ ರುಚಿಯುಕ್ತವಾದ ಆಹಾರವನ್ನು ತಯಾರಿಸಬಹುದು. 

ಖರ್ಜೂರದ ಕೆಲವು ಉಪಯೋಗಗಳು:

* ಇದರ ಬೀಜ ಕಾಫಿ ಬೀಜ ಹುರಿದಂಗೆ ಹುರಿಬೇಕಾಗುತ್ತೆ. ನಂತರ ಪುಡಿ ಮಾಡಿ ಕಾಫಿ ಮಾಡಿ ಕುಡಿದರೆ ಮಂಡಿ ನೋವು ಕಡಿಮೆ ಮಾಡುತ್ತೆ ಮತ್ತು ವಾತ ರೋಗವನ್ನು ಗುಣ ಮಾಡುತ್ತದೆ.

* ಖರ್ಜೂರ ತಿನ್ನುವುದರಿಂದ ದೈಹಿಕ ದೌರ್ಬಲ್ಯ ದೂರವಾಗುತ್ತದೆ ಮತ್ತು ಆಯಾಸ ನಿವಾರಣೆಯಾಗಿ ಲವಲವಿಕೆ ತುಂಬುತ್ತದೆ..

* ಖರ್ಜೂರದ ಸೇವನೆಯಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.

* ಖರ್ಜೂರದ ಸೇವನೆಯು ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಒಳ್ಳೆಯದು.

* ಹಿಮೋಗ್ಲೋಬಿನ್ ಹೆಚ್ಚಿಸಲು ಖರ್ಜೂರದ ಉಪಯೋಗವು ಒಳ್ಳೆಯ ಔಷಧ.

* ಖರ್ಜೂರದ ಸೇವನೆಯಿಂದ ಮಲವಿಸರ್ಜನೆ ಸರಿಯಾಗಿ ಆಗುತ್ತದೆ. ಇದರಿಂದ ಮೂಲವ್ಯಾಧಿಯ (ಪೈಲ್ಸ್) ಸಮಸ್ಯೆ ಬರುವುದಿಲ್ಲ.

* ಮಕ್ಕಳು ಮತ್ತು ವೃದ್ಧರು ಖರ್ಜೂರವನ್ನು ತಿನ್ನುವುದರಿಂದ ಅವರ ಹೃದಯದ ಆರೋಗ್ಯ ಸುಧಾರಿಸುತ್ತದೆ .

* ಆಹಾರದಲ್ಲಿ ಖರ್ಜೂರವನ್ನು ಸೇರಿಸಿದರೆ, ಮೂಳೆಗಳ ಆರೋಗ್ಯ ಸುಧಾರಿಸುತ್ತದೆ.

* ಖರ್ಜೂರದ ಸೇವನೆಯು ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ಹೆಂಗಸರಲ್ಲಿ ಅಪೌಷ್ಟಿಕತೆಯ ಕೊರತೆಯಿಂದ ಮಕ್ಕಳಾಗದಿದ್ದರೆ ಖರ್ಜೂರದ ಸೇವನೆಯು ಆರೋಗ್ಯಕರ ಗರ್ಭಧಾರಣೆಯನ್ನು ಸಹ ಬೆಂಬಲಿಸುತ್ತದೆ.

* ಉತ್ತುತ್ತೆಯನ್ನು ಮಕ್ಕಳು ಜಗಿದು ತಿನ್ನುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ.

* ಉತ್ತುತ್ತಿಯ ಲೇಹ ದೇಹದ ಪುಷ್ಟಿಗೆ ತುಂಬಾ ಒಳ್ಳೆಯದು.

-ಸುಮನಾ ಮಳಲಗದ್ದೆ.

ಚಿತ್ರ ಕೃಪೆ: ಇಂಟರ್ನೆಟ್ ತಾಣ